Advertisement
ಇದರಿಂದ ದ್ವೀಪದಂತಿದ್ದ ಅರಂಬೂರು ಪ್ರದೇಶದ ಜನರಿಗೆ ಸುಳ್ಯ ನಗರವನ್ನು ಸಂಪರ್ಕಿ ಸಲು ಇದ್ದ ಸಮಸ್ಯೆ ಬಗೆಹರಿಯಲಿದೆ.
1989ರಲ್ಲಿ ತಾನು ಹುಟ್ಟಿದ ಗ್ರಾಮದಲ್ಲಿ ಮೊತ್ತಮೊದಲ ತೂಗುಸೇತುವೆಯನ್ನು ನಿರ್ಮಿ ಸಿದ ಪದ್ಮಶ್ರೀ ಗಿರೀಶ ಭಾರದ್ವಾಜ ಅವರು ಜನರ ಕಣ್ಮಣಿಯಾದರು. ಈ ತೂಗುಸೇತುವೆ ಮೂಲಕ ಜನರಿಗೆ ಸುಳ್ಯಕ್ಕೆ ಬರಲು ಮತ್ತು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಯಿತು. ಈ ಊರಿನ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ ಕಾಲವೂ ಬದಲಾಯಿತು. ಆದರೆ ಈಗ ಪ್ರತಿಯೊಬ್ಬರಲ್ಲೂ ವಾಹನವಿರು ವುದರಿಂದ ತೂಗು ಸೇತುವೆ ಮೂಲಕ ಸಾಗಲಾ ಗದೇ ನದಿಯ ಈ ದಂಡೆಯಲ್ಲಿ ವಾಹನವಿರಿಸಿ, ನಡೆದು ಹೋಗುವ ಅನಿವಾರ್ಯ ಇದೆ.
Related Articles
ಬೇಸಗೆಯಲ್ಲಿ ಪಯಸ್ವಿನಿಯಲ್ಲಿನ ನೀರು ಇಳಿ ಮುಖವಾದಾಗ ಕಲ್ಲುಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಆ ಮೂಲಕ ವಾಹನಗಳಲ್ಲಿ ಮತ್ತೂಂದು ದಡವನ್ನು ಗ್ರಾಮಸ್ಥರು ಸೇರುತ್ತಿದ್ದರು. ವಾಹನ ಸಂಚಾರಕ್ಕೆ ಯೋಗ್ಯವಾಗುವ ಸೇತುವೆ ಬೇಕೆಂದು ಆಗ್ರಹಿಸುತ್ತಿದ್ದರು. ಅದೀಗ ನನಸಾಗುತ್ತಿದೆ.
Advertisement
ಈ ಸೇತುವೆ ಮೂಲಕ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗೆ ಸುಮಾರು 25 ಕ್ಕೂ ಹೆಚ್ಚು ಕೃಷಿಕರು ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಅನುದಾನ ತರುವಲ್ಲಿ ಪ್ರಯತ್ನಿಸಿದ್ದರು.
- ಗಂಗಾಧರ ಮಟ್ಟಿ