Advertisement

ಸಾಕಾರಗೊಳ್ಳಲಿ ಸಾರಕರೆ ಸೇತುವೆ ಕನಸು

08:05 AM May 15, 2018 | Team Udayavani |

ಸವಣೂರು: ಪುತ್ತೂರು ತಾಲೂಕು ಪುಣಚಪ್ಪಾಡಿ ಗ್ರಾಮದ ಸಾರಕರೆ, ಕೆಯ್ಯೂರು ಗ್ರಾಮದ ಓಲೆಮುಂಡೋವು ನಡುವೆ ಗೌರಿ ಹೊಳೆ ಹರಿಯುತ್ತಿದೆ. ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮ ಸಭೆಗಳಲ್ಲಿ ಸೇತುವೆ ಬೇಡಿಕೆ ಕುರಿತು ನಿರಂತರವಾಗಿ ಪ್ರಸ್ತಾಪವಾಗುತ್ತಿದ್ದರೂ ಇಲ್ಲಿಯ ತನಕ ಯಾವುದೇ ರೀತಿಯ  ಸ್ಪಂದನೆ ದೊರೆಯದೇ ಕನಸಾಗಿಯೇ ಉಳಿದಿದೆ.

Advertisement

ಗೌರಿ ಹೊಳೆಗೆ ಸೇತುವೆ ನಿರ್ಮಾಣಗೊಂಡಲ್ಲಿ ಕೆಯ್ಯೂರು, ತಿಂಗಳಾಡಿ ಕುಂಬ್ರ ಭಾಗಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈ ಸೇತುವೆಯನ್ನು ಸಂಪರ್ಕಿಸುವ ಕುಂಬ್ರ- ತಿಂಗಳಾಡಿ- ಓಲೆಮುಂಡೋವು ರಸ್ತೆ ಅಗಲೀಕರಣಗೊಂಡು ಡಾಮರೀಕರಣವಾಗಿದ್ದರೆ, ಸವಣೂರು- ಪುಣಚಪ್ಪಾಡಿ- ಸಾರಕರೆ ಸಂಪರ್ಕಿಸುವ 4 ಕಿ.ಮೀ. ಡಾಮರೀಕರಣವಾಗದೆ ರಸ್ತೆ ತೀರಾ ಹದಗೆಟ್ಟಿದೆ. ಕುಂಬ್ರ, ತಿಂಗಳಾಡಿ ಭಾಗದ ಜನರು ಸವಣೂರು, ಶಾಂತಿಮೊಗರು, ಆಲಂಕಾರು, ಕಡಬ, ಧರ್ಮಸ್ಥಳ ಸಂಪರ್ಕಿಸಲು ಅನು ಕೂಲವಾಗಲಿದೆ. ಸೇತುವೆ ನಿರ್ಮಾಣವಾದಲ್ಲಿ ಪುಣಚಪ್ಪಾಡಿ ಭಾಗದ ಜನರಿಗೆ ತಿಂಗಳಾಡಿ, ಮಾಡಾವು, ಕುಂಬ್ರಕ್ಕೆ ಸಂಪರ್ಕ ಕೊಂಡಿಯಾಗಲಿದೆ. ಕುಗ್ರಾಮ ಪುಣಚಪ್ಪಾಡಿಯೂ ಅಭಿವೃದ್ಧಿಗೊಳ್ಳಲಿದೆ.

ಶಾಸಕದ್ವಯರ ಪ್ರಯತ್ನ ಅಗತ್ಯ
ಪುಣcಪ್ಪಾಡಿ ಗ್ರಾಮವು ಸುಳ್ಯ ವಿಧಾನಸಭಾ ಕ್ಷೇತ್ರವಾದರೂ ಪುತ್ತೂರು ತಾಲೂಕಿನಲ್ಲಿದೆ. ಓಲೆಮುಂಡೋವು ಗ್ರಾಮವು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಹೀಗಾಗಿ ಸುಳ್ಯ, ಪುತ್ತೂರು ಶಾಸಕರಿಬ್ಬರೂ ಅನಾದಾರ ತೋರ್ಪಡಿಸದೇ ಸೇತುವೆ ನಿರ್ಮಿಸಲು ಪಯತ್ನಿಸುವುದು ಅಗತ್ಯವಾಗಿದೆ.

ಹೋರಾಟ ಅಗತ್ಯ
ನಮ್ಮೂರಿನ ಬೇಡಿಕೆಯನ್ನು ಮನಗಂಡು ಜನಪ್ರತಿನಿಧಿಗಳು ಸೇತುವೆ ನಿರ್ಮಿಸುವಲ್ಲಿ ಮುತುವರ್ಜಿ ವಹಿಸಬೇಕು. ಸಂಬಂಧಪಟ್ಟವರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ.ಬೇಡಿಕೆಯನ್ನು ಈಡೇರಿಸಲು ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕು.
– ಸುರೇಶ್‌ ರೈ ಸೂಡಿಮುಳ್ಳು

ಭರವಸೆ ಇದೆ
ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಬಹುದಿನಗಳ ನಮ್ಮ ಕನಸು ನನಸಾದಲ್ಲಿ ಗ್ರಾಮ ಅಭಿವೃದ್ಧಿ ಹೊಂದಲಿದೆ. ಈ ಬಾರಿ ಸೇತುವೆಯ ಕನಸು ಈಡೇರುವ ಭರವಸೆ ಇದೆ.
– ಗಿರಿಶಂಕರ್‌ ಸುಲಾಯ, ಸವಣೂರು ಗ್ರಾ.ಪಂ. ಸದಸ್ಯರು

Advertisement

— ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next