ಆಲೂರು: ತಾಲೂಕಿನ ಕರಿಗೌಡನಹಳ್ಳಿ ಗ್ರಾಮದ ಬಳಿ ಹೇಮಾವತಿ ಹಿನ್ನೀರಿಗೆ ನಿರ್ಮಾಣವಾಗುತ್ತಿರುವ ಸೇತುವೆಯು ಪಿಲ್ಲರ್ ಕಾಮಗಾರಿ ಮುಕ್ತಾಯಗೊಂಡಿದ್ದು ಇನ್ನೇನೂ ಮೂರ್ನಾಲ್ಕು ತಿಂಗಳಲ್ಲಿ ಸೇತುವೆಯ ಕಾಮಗಾರಿ ಸಂಪೂರ್ಣಗೊಂಡು ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಸೇತುವೆ ನಿರ್ಮಾಣದ ಕನಸು ಹಲವು ವರ್ಷಗಳಾಗಿತ್ತು. ಪಕ್ಕದ ತಾಲೂಕು ಕೇಂದ್ರಕ್ಕೆ 10 ರಿಂದ 12 ಕಿ.ಮೀ. ಕ್ರಮಿಸುವ ಬದಲು ಬರೋಬ್ಬರಿ 50 ಕಿ.ಮೀ ಕ್ರಮಿಸಬೇಕಾಗಿತ್ತು. ಹೀಗಾಗಿ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹಲವಾರು ಭಾರಿ ಹೋರಾಟ ನಡೆಸಿದ್ದರು. ಸ್ಥಳೀಯರ ಹೋರಾಟದ ಫಲವಾಗಿ ಕೊನೆಗೂ ಸರ್ಕಾರವು ಸೇತುವೆ ಕಾಮಗಾರಿಗೆ ಅನುಮತಿ ನೀಡಿತ್ತು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಯಾವಾಗ ಮುಕ್ತಯಗೊಳ್ಳುತ್ತದೆ. ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಸ್ಥಳೀಯರು ಚಾತಕ ಪಕ್ಷಿಯಂತೆ ಕಾಯತೊಡಗಿದ್ದಾರೆ.
ಇದನ್ನೂ ಓದಿ:ಭಾರತ, ಪಾಕಿಸ್ತಾನ ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿವೆ: ಮಲ್ವಿಂದರ್
ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ: ಕರಿಗೌಡನ ಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಸಾಕಷ್ಟು ಮಂದಿಯ ಹೋರಾಟಕ್ಕೆ ಫಲ ಅಲ್ಲದೆ. ಹಲವು ದಶಕಗಳಕನಸು ಇದಾಗಿತ್ತು. ಎರಡು ತಾಲೂಕು ಕೇಂದ್ರಗಳು ಹತ್ತಿರವಿದ್ದರೂ ಸೇತುವೆ ಇಲ್ಲದೇ ಸಂಪರ್ಕ ಕೊಂಡಿಯೇ ಇರಲಿಲ್ಲ. ಆಲೂರು ತಾಲೂಕಿನ ಕರಿಗೌಡನಹಳ್ಳಿ,ಚಾಕನಹಳ್ಳಿ,ಹಸಗನೂರು ಹಾಗೂ ಹಾಸನ ತಾಲೂಕಿನ ದುಂಡನಾಯಕನಹಳ್ಳಿ, ಬಳ್ಳೆಕೆರೆ, ಮಲ್ಲಿಗೆವಾಳು ಗ್ರಾಮಸ್ಥರ ಜಮೀನು ನದಿಯಿಂದ ಅಚೆ ಇಚೆ ಇದ್ದರೂ ಚಿಕ್ಕ ಚಿಕ್ಕ ತೆಪ್ಪಗಳನ್ನು ಬಳಸಿ ಜೀವವನ್ನೇ ಕೈಯಲ್ಲಿಡಿದು ಒಡಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ದ್ವಿಚಕ್ರ ಅಥವಾ ಇನ್ನಾವುದೇ ವಾಹನಗಳಲ್ಲಿ ತೆರಳಬೇಕಾದರೆ 50 ಕಿ.ಮೀ ಸುತ್ತಿ ಕ್ರಮಿಸಿ ಈ ಗ್ರಾಮಗಳನ್ನು ತಲುಪ ಬೇಕಾಗಿತ್ತು.4ದಶಕಗಳಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡು ನಿರ್ಮಾಣ ಹಂತವು ಅರ್ಧದಷ್ಟು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಸಂಚಾರ ನಡೆಸಬಹುದು ಎಂದು ಸ್ಥಳೀಯ ಗ್ರಾಮಸ್ಥರು, ರೈತರು ಸಂತಸದಲ್ಲಿದ್ದಾರೆ. ಹೊರ ಜಿಲ್ಲೆಯ ಜನರಿಗೂ ಅನುಕೂಲ: ಈ ಸೇತುವೆ ನಿರ್ಮಾಣ ದಿಂದ 2 ತಾಲೂಕುಗಳ ವ್ಯಾಪಾರ ವಹಿವಾಟುವೃದ್ಧಿಯಾಗುವುದರ ಜತೆಗೆಹೊಳೆನರಸೀಪುರ, ಅರಕಲಗೂಡು ತಾಲೂಕುಗಳಿಗೆ ಸಂಚರಿಸಲು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಹಾಗೂ ಮಡಕೆರಿ ಜಿಲ್ಲೆಗೆ ತೆರಳಲು ಸುಮಾರು 50 ರಿಂದ 60 ಕಿ.ಮೀ. ಕಡಿಮೆಯಾಗುತ್ತದೆ.
ಇದರಿಂದ ಎಲ್ಲಾ ಭಾಗದ ಜನರಿಗೂ ಬಹಳ ಅನುಕೂಲವಾಗಿದ್ದು, ಸೇತುವೆಯ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಜಾತಕ ಪಕ್ಷಿಯಂತೆಕಾಯತೊಡಗಿದ್ದಾರೆ. ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಸಾರಿಗೆ ನಿಗಮ)ನಿಂದ 16 ಕೋಟಿ ರೂ. ಅನುದಾನದಲ್ಲಿ ಬಿಎಸ್‌ಆರ್ ಕಂಪನಿ ಬರದಿಂದ ಕಾಮಗಾರಿ ನಿರ್ವಹಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡು 9 ತಿಂಗಳು ಕಳೆದಿವೆ. ಪಿಲ್ಲರ್‌ಗಳ ನಿರ್ಮಾಣ ಹಂತ ಭಾಗಶಃ ಅರ್ಧದಷ್ಟು ಮುಕ್ತಾಯಗೊಂಡಿದೆ. ಕಾಮಗಾರಿಯು ಮಳೆ ಹಾಗೂ ಕೊರೊನಾ ಸೋಂಕಿನ ಕಾರಣದಿಂದಾಗಿ ಕಾಮಗಾರಿಯ ಮಂದಗತಿಯಲ್ಲಿ ಸಾಗುತ್ತಿದೆ. ಕಾಮ ಗಾರಿಯನ್ನು ಸ್ವಲ್ಪ ಚುರುಕುಗೊಳಿಸಿದರೆ ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಬಹುಬೇಗನೆ ಸಿಗಲಿದೆ. ಸೇತುವೇ ಕಾಮಗಾರಿ ನಡೆಯುತ್ತಿದೆ ಎಂಬುವುದು ಮುಖ್ಯವಲ್ಲ. ಕಾಮಗಾರಿಯು ಯಾವ ಗುಣಮಟ್ಟದಲ್ಲಿದೆ ಹೇಗೆ ಕಾಮಗಾರಿ ಸಾಗುತ್ತಿದೆ ಎಂಬುವುದು ಮುಖ್ಯ.ಹೀಗಾಗಿ ಸೇತುವೆಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಯದಂತೆ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ತಾಲೂಕಿನ ಜನರ ಸಂಪರ್ಕಕೊಂಡಿ
ಹಲವು ದಶಕಗಳಿಂದಲೂ ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೆವು.ಸ್ಥಳೀಯರ ಬಹುದಿನಗಳಕನಸು ನನಸಾಗಿದೆ.
ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಿಬೇಕಿದೆ. ಆದಷ್ಟು ಬೇಗನೆ ಸೇತುವೆಕಾಮಗಾರಿಯನ್ನು ಮುಕ್ತಾಯಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವುಮಾಡಿಕೊಡಬೇಕು. ಸೇತುವೆ ನಿರ್ಮಾಣದಿಂದ ಎರಡು ತಾಲೂಕುಗಳ ಲಕ್ಷಾಂತರ ಜನರ ಸಂಪರ್ಕದಕೊಂಡಿಯಾಗಿದೆ. ಇದಕ್ಕೆ ಶ್ರಮಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ತಾಲೂಕು ಅದ್ಯಕ್ಷ ಮಂಜೇಗೌಡ್ರು ಹಾಗೂ ಶ್ರಮಿಸಿದ ನಾಯಕರಿಗೆ ಅಭಿನಂದಿಸುತ್ತೇನೆ ಎಂದು
ಗ್ರಾಮದ ಮುಖಂಡಕೆ.ಟಿ.ಕೃಷ್ಣೇಗೌಡ ತಿಳಿಸಿದರು.
-ಟಿ.ಕೆ.ಕುಮಾರಸ್ವಾಮಿ ಆಲೂರು