Advertisement

ಮಳೆಗೆ ಕೊಚ್ಚಿದ ಹೆಬ್ಟಾಳ ಸೇತುವೆ

05:01 PM Sep 07, 2017 | |

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದು ಸಮೀಪದ ಹೆಬ್ಟಾಳ (ಬಿ) ಗ್ರಾಮದ ಬಳಿ ಮುಖ್ಯರಸ್ತೆಯ ಬೈಪಾಸ್‌ ಸೇತುವೆ ಕೊಚ್ಚಿ ಹೋಗಿದೆ.

Advertisement

ಭಾರೀ ಮಳೆಯಿಂದ ಅಪಾರ ಪ್ರಮಾಣದ ನೀರು ರಸ್ತೆ ಬದಿ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುರಪುರ-ಹುಣಸಗಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ನಡೆಯಿತು. ಕೊಲ್ಲಾಪುರ, ಹೈದ್ರಾಬಾದ್‌, ವಿಜಯಪುರ, ಕಲಬುರಗಿ ಇತರೆ ದೂರದ ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. 

ಸೇತುವೆ ಕೊಚ್ಚಿದ್ದರಿಂದ ಹುಣಸಗಿಯಿಂದ ಬಸ್‌ಗಳು ಸುರಪುರಕ್ಕೆ ತೆರಳಲು ಕಕ್ಕೇರಾ ಮಾರ್ಗವಾಗಿ ಸುತ್ತುವರಿದು ಚಲಿಸಬೇಕಾಯಿತು ಎಂದು ಸಂಚಾರಿ ನಿಯಂತ್ರಕ ಕಲ್ಲಣ್ಣ ಪ್ಯಾಟಿ ತಿಳಿಸಿದರು. ವಿಷಯ ತಿಳಿದು ಸುರಪುರ ತಹಶೀಲ್ದಾರ್‌ ಸುರೇಶ ಅಂಕಲಗಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅ ಧಿಕಾರಿಗಳೊಂದಿಗೆ ಮಾತನಾಡಿ, ತಕ್ಷಣ ರಸ್ತೆ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next