Advertisement

ಕಂಡಲೂರು ಕುಚ್ಚಟ್ಟು ಕಟ್ಟು  ಸೇತುವೆ ನಿರ್ಮಾಣ ಮರೀಚಿಕೆ

12:50 AM Jan 23, 2019 | Team Udayavani |

ಬಸೂÅರು: ಕುಚ್ಚಟ್ಟು, ಕೌಂಜೂರಿನ ಜನ ಹತ್ತಿರದ ಕಂಡಲೂರು ಪೇಟೆಗೆ ಬರಬೇಕೆಂದರೆ ಜೀವ ಕೈಯಲ್ಲಿ ಹಿಡಿದು ಬರಬೇಕು!  ಕಾರಣ ಶಿಥಿಲಗೊಂಡ ಸೇತುವೆ ಮೇಲಿಂದಲೇ ಅವರು ನಡೆಯಬೇಕು. 

Advertisement

50 ವರ್ಷಗಳ ಹಿಂದಿನ ಸೇತುವೆ
ಕಂಡಲೂರಿನ ವಾರಾಹಿ ಉಪನದಿ ಕುಬಾj ನದಿಗೆ ಕಟ್ಟನ್ನು (ಕಿರು ಸೇತುವೆ) ಕಟ್ಟಿ ಸುಮಾರು 50 ವರ್ಷಗಳೇ ಕಳೆದಿದ್ದು, ಪ್ರಯೋಜನಕ್ಕಿಲ್ಲವಾಗಿದೆ. ನದಿಯ ಒಂದು ಭಾಗದಲ್ಲಿ ಕಂಡಲೂರು ಇದ್ದರೆ ಮತ್ತೂಂದು ತುದಿ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಕುಚ್ಚಟ್ಟು, ಕೌಂಜೂರು ಮತ್ತು ಸೌಕೂರು ಸಮೀಪದ ಪ್ರದೇಶವಿದೆ. ಪ್ರಸ್ತುತ ಈ ಕಟ್ಟಿನ ಮೇಲೆ ಕಡುಬೇಸಗೆಯ ದಿನಗಳಲ್ಲೂ ನೀರು ಹರಿಯುತ್ತಿರುತ್ತದೆ! 

ಕುಸಿದು ಬಿದ್ದ ಕಲ್ಲುಗಳು
ಕಳೆದ ವರ್ಷ ಈ ಕಟ್ಟಿಗೆ ಕಂಡಲೂರು ಭಾಗದಲ್ಲಿ ಕಟ್ಟಿದ್ದ ಶಿಲೆಗಲ್ಲುಗಳು ನದಿಗೆ ಕುಸಿದು ಬಿದ್ದಿದೆ. ಆದರೂ ಜನ ಅನಿವಾರ್ಯವಾಗಿ ಕಂಡಲೂರಿಗೆ ಹತ್ತಿರವಾದ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. 

ಕುಚ್ಚಟ್ಟಿನಿಂದ ಕಂಡಲೂರಿಗೆ ಪರ್ಯಾಯ ಮಾರ್ಗವಾಗಿ ಕಿರು ರಸ್ತೆಯ ಮೂಲಕ ರಿûಾದಲ್ಲಿ ಮೂರೂವರೆ ಕಿ.ಮೀ. ಕ್ರಮಿಸಿ ಬರಬೇಕಾದರೆ ಒಂದು ಗಂಟೆ ತಗಲುತ್ತದೆ. ರಿûಾ ಬಾಡಿಗೆ 150 ರೂ. ಆಗುತ್ತದೆ. ಕಳೆದ ವರ್ಷ ಕಟ್ಟಿನ ಶಿಲೆಗಲ್ಲುಗಳು ನದಿಗೆ ಕುಸಿದ ಬಗ್ಗೆ ವರದಿ ಮಾಡಿದ್ದು,  ಅಂದಿನ ಶಾಸಕರ ನಿಧಿಯಲ್ಲಿ  ಹೊಸ  ಕಟ್ಟವನ್ನು ನಿರ್ಮಿಸಲಾಗುವುದು ಎಂದು ತಿಳಿದು ಬಂದಿತ್ತು. ಆದರೆ ಜನರ ಬೇಡಿಕೆ ಇನ್ನೂ ಈಡೇರಿಲ್ಲ. ಕುಚ್ಚಟ್ಟಿನ ಅಪಾಯಕಾರಿ ಕಟ್ಟು ಈಗಲೂ ಅಪಾಯಕಾರಿಯಾಗಿಯೇ ಉಳಿದಿದೆ. ಜನಪ್ರತಿನಿಧಿಗಳ ಭರವಸೆಯೂ ಹಾಗೇ ಉಳಿದಿದೆ.   

ಪ್ರಸ್ತಾವನೆ ಕಳುಹಿಸಲಾಗಿದೆ
ಈಗಾಗಲೇ ಕುಚ್ಚಟ್ಟಿನಲ್ಲಿ ವೆಂಟೆಡ್‌ ಡ್ಯಾಂ ನಿರ್ಮಿಸುವಂತೆ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ  ಕಳುಹಿಸಲಾಗಿದೆ. ಇಲ್ಲಿ ಶೀಘ್ರ ನೂತನ ಡ್ಯಾಂ ನಿರ್ಮಾಣವಾಗಲಿದೆ. 
– ಗೋಪಾಲ ಪೂಜಾರಿ, ಮಾಜಿ ಶಾಸಕರು, ಬೈಂದೂರು

Advertisement

ಸಮಸ್ಯೆ ಬಗೆಹರಿಯುವ ವಿಶ್ವಾಸ ನಮಗಿಲ್ಲ
ನಾವು ಪ್ರತಿನಿತ್ಯ ಬೇರೆ ಬೇರೆ ಕಾರಣಕ್ಕಾಗಿ ಕಂಡೂÉರು ಪೇಟೆಗೆ ಬರಬೇಕಾಗುತ್ತದೆ. ಕುಚ್ಚಟ್ಟಿನ ಕಟ್ಟಿನ ಮೇಲೆ ನಡೆದು ಬರುವಾಗ ಜೀವ ಕೈಯಲ್ಲಿ ಹಿಡಿದೇ ಬರಬೇಕಾಗುತ್ತದೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ವಿಶ್ವಾಸ ನಮಗಿಲ್ಲ.
– ನಾಗರಾಜ, ಕುಚ್ಚಟ್ಟು ನಿವಾಸಿ

 ಶೀಘ್ರ ನೂತನ ಅಣೆಕಟ್ಟು
ಕಂಡೂÉರು ಹಳೆಕೋಟೆಯ ಕುಬಾj ನದಿಗೆ ಹಾಕಿದ ಕುಚ್ಚಟ್ಟು ಕಟ್ಟು ಕುಸಿದಿದ್ದು ಗಮನಕ್ಕೆ ಬಂದಿದೆ. ಶೀಘ್ರ ನೂತನ ಅಣೆಕಟ್ಟು  ನಿರ್ಮಿಸಲಾಗುವುದು. ಈ ಕಾಮಗಾರಿಯನ್ನು ಪ್ರಥಮ ಆದ್ಯತೆಯ ಮೇಲೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ಕ್ಷೇತ್ರ

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next