Advertisement

60 ಗಂಟೆಗಳಲ್ಲಿ ಸೇತುವೆ ನಿರ್ಮಾಣ

02:07 AM Jan 17, 2021 | Team Udayavani |

ಹೊಸದಿಲ್ಲಿ: ಸೇನೆಯ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ) ಕೇವಲ 60 ಗಂಟೆಗಳಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಕೇಲಾ ಮೋರ್‌ನಲ್ಲಿ 110 ಅಡಿ ಉದ್ದದ ಸೇತುವೆಯನ್ನು ನಿರ್ಮಿಸುವ ಮೂಲಕ ದಾಖಲೆ ಬರೆದಿದೆ.

Advertisement

60 ಗಂಟೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಶನಿವಾರ ಸಂಜೆಯಿಂದಲೇ ಈ ಬೈಲಿ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗಿದೆ. ಜ.11ರಂದು ಇಲ್ಲಿದ್ದ ಸೇತುವೆಯು ಕುಸಿದು ಬಿದ್ದ ಕಾರಣ, ದೇಶದೊಂದಿಗಿನ ಕಣಿವೆಯ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಸೇತುವೆ ನಿರ್ಮಿಸಲು ನಿರ್ಧರಿಸಲಾ ಯಿತು ಎಂದು ಬಿಆರ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೇತುವೆ ನಿರ್ಮಾಣಕ್ಕೆ ಪ್ರೀ ಫ್ಯಾಬ್ರಿಕೇಟೆಡ್‌ ಉಕ್ಕಿನ ಫ‌ಲಕಗಳನ್ನು ಬಳಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next