Advertisement

ಬ್ರೈಡ್ಸ್‌ ಆಫ್ ಇಂಡಿಯಾ 6ನೇ ಆವೃತ್ತಿ ಆರಂಭ

11:40 AM Apr 25, 2018 | |

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್ಸ್‌ ಸಂಸ್ಥೆ ದೇಶದ ವಿವಿಧ ಹಬ್ಬಗಳಲ್ಲಿ ಧರಿಸುವಂತ ಕಲಾತ್ಮಕ ವಿನ್ಯಾಸದ ಆಭರಣಗಳನ್ನು ಒದಗಿಸುವ ಉದ್ದೇಶದಿಂದ “ಸೆಲೆಬ್ರೇಷನ್‌ ಬ್ರೈಡ್‌’ ವಿಷಯದ ಮೂಲಕ “ಬ್ರೈಡ್ಸ್‌ ಆಫ್ ಇಂಡಿಯಾ-6′ ಆವೃತ್ತಿ ಆರಂಭಿಸಿದ್ದು, ಸಂಸ್ಥೆಯ ರಾಯಭಾರಿ ಹಾಗೂ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಹಾಗೂ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ ಚಾಲನೆ ನೀಡಿದ್ದಾರೆ.

Advertisement

ವಿವಾಹವು ಭಾರತೀಯರಿಗೆ ಅತಿ ದ್ದೊಡ್ಡ ಸಂಭ್ರಮಾಚರಣೆಯಾಗಿದೆ. ವಧು-ವರರ ಕುಟುಂಬಗಳು ಹಾಗೂ ಅತಿಥಿಗಳು ಅನೇಕ ಸಾಂಪ್ರದಾಯಿಕ ಆಚರಣೆಗಳು, ಭಾವನಾತ್ಮಕ ಕ್ಷಣಗಳು ಇದಕ್ಕೆ ಸಾಕ್ಷಿಯಾಗುತ್ತವೆ. ಜತೆಗೆ ಹೋಳಿ, ದೀಪಾವಳಿ, ಓಣಂ, ಪೊಂಗಲ್‌, ಯುಗಾದಿಯಂತಹ ಹಬ್ಬಗಳಿಂದ ಪ್ರಭಾವಿತವಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಸಂದರ್ಭಗಳಿಗೆ ಹೊಂದುವ ಅತಿ ಸೂಕ್ಷ್ಮವಾಗಿ ಚಿನ್ನ ಹಾಗೂ ಸೂಕ್ಷ್ಮ ಡೈಮಂಡ್‌ಗಳಲ್ಲಿ ರಚಿಸಲಾಗಿರುವ ಬ್ರೈಡಲ್‌ ಜ್ಯುವೆಲ್ಲರಿ ಕಲೆಕ್ಷನ್‌ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. 

ತಮಿಳುನಾಡು ಹೊರತುಪಡಿಸಿ ದೇಶದ ಯಾವುದೇ ಭಾಗದ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ನ ಮಳಿಗೆಗಳಿಂದ ತಮ್ಮ ವಿವಾಹದ ಆಭರಣಗಳನ್ನು ಖರೀದಿಸುವಂತಹ ಗ್ರಾಹಕರ ಪೈಕಿ 500 ರಿಂದ 1000 ದಂಪತಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ, ಹನಿಮೂನ್‌ಗೆ ದುಬೈ, ಮಲೇಷಿಯಾ, ಸಿಂಗಪೂರ್‌, ಬಾಲಿ ಹಾಗೂ ಹಾಂಗ್‌ಕಾಂಗ್‌ಗಳಿಗೆ ಉಚಿತವಾಗಿ ಕಳುಹಿಸಲಾಗುತ್ತದೆ ಎಂದು ಹೇಳಿದೆ.

ಸಂಸ್ಥೆಯ ಅಧ್ಯಕ್ಷ ಎಂ.ಪಿ.ಅಹಮದ್‌ ಅವರು ಮಾತನಾಡಿ, ಬ್ರೈಡ್ಸ್‌ ಆಫ್ ಇಂಡಿಯಾ ಅಭಿಯಾನಕ್ಕೆ ಹಿಂದಿನ ಆವೃತ್ತಿಗಳಲ್ಲಿ ದೊರೆತ ಅಭೂತ ಪೂರ್ವ ಯಶಸ್ಸಿನ ಸ್ಫೂರ್ತಿಯಿಂದ 6ನೇ ಆವೃತ್ತಿ ಆರಂಭಿಸಲಾಗಿದೆ. ದೇಶದಲ್ಲಿ ವಿವಾಹವನ್ನು ಹಬ್ಬಗಳಂತೆ ಸಂಭ್ರಮಿಸುವ ಪ್ರವೃತ್ತಿ ಬೆಳೆಯುತ್ತಿದೆ. ಆ ಹಿನ್ನೆಲೆಯಲ್ಲಿ “ಸೆಲೆಬ್ರೇಷನ್‌ ಬ್ರೈಡ್‌’ ಹೆಸರಿನಲ್ಲಿ ಪ್ರತಿಯೊಂದು ಸಂದರ್ಭಕ್ಕೂ ಹೊಂದುವ ಕಲಾತ್ಮಕ ವಿನ್ಯಾಸದ ಆಭರಣಗಳನ್ನು ಒದಗಿಸಲು ಅಭಿಯಾನ ಆರಂಬಿಸಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next