ಮಧ್ಯಪ್ರದೇಶ: ಮದುವೆ ಅನ್ನೋದು ಜೀವನದ ಬಹು ಮುಖ್ಯ ಘಟ್ಟ, ಇಲ್ಲಿ ಮದುವೆ ಕಾರ್ಯಕ್ರಮಗಳು ನಿಗದಿಯಂತೆ ಸಾಂಗವಾಗಿ ನಡೆದರೆ ಎರಡೂ ಕಡೆಯ ಪೋಷಕರಿಗೆ ತಮ್ಮ ಒಂದು ದೊಡ್ಡ ಜವಾಬ್ದಾರಿ ನಿಭಾಯಿಸಿದ ಖುಷಿ, ಅದರಂತೆ ಮದುವೆಯಾಗುವ ವರ ಹಾಗೂ ವಧುವಿನ ಜೀವನದ ಹೊಸ ಅಧ್ಯಾಯ ಆರಂಭವಾಗುವ ಶುಭ ದಿನ.
ಈ ಶುಭ ದಿನ ಕೆಲವೊಮ್ಮೆ ನಾನಾ ಕಾರಣಗಳಿಂದ ತಪ್ಪಿ ಹೋಗುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಹುಡುಗಿಗೆ ಬೇರೊಂದು ಸಂಬಂಧ ಇರುವುದು ಅಥವಾ ಹುಡುಗನಿಗೆ ಬೇರೊಂದು ಹುಡುಗಿಯ ಜೊತೆ ಸಂಬಂಧ ಇರುವುದು ಹೀಗೆ ನಾನಾ ಕಾರಣಗಳಿಂದ ನಿಗಧಿಯಾಗಿದ್ದ ಮದುವೆಗಳು ಮುರಿದಿದ್ದು ನೋಡಿದ್ದೇವೆ. ಅದರಂತೆ ಮಧ್ಯಪ್ರದೇಶದಲ್ಲೊಂದು ನಿಗಧಿಯಾಗಿದ್ದ ಮದುವೆ ಕೊನೆ ಗಳಿಗೆಯಲ್ಲಿ ವಧು ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಹೋದ ವಧು ಮಂಟಪಕ್ಕೆ ಬರದೇ ನಾಪತ್ತೆಯಾಗಿ ಮದುವೆಯೇ ಮುರಿದುಹೋದ ಘಟನೆಯೊಂದು ನಡೆದಿದೆ.
ಘಟನೆ ವಿವರ : ಮಧ್ಯ ಪ್ರದೇಶದ ಡಿಡೋಲಿ ಕೊತ್ವಾಲಿ ಮೂಲದ ವಧುವಿನ ವಿವಾಹವು ನೌಗಾವಾನ್ ಸಾದತ್ ನಿವಾಸಿ ವರನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಅದರಂತೆ ಮದುವೆಯ ದಿನ ವರ ಅದ್ದೂರಿ ಮೆರವಣಿಗೆಯ ಮೂಲಕ ಮಂಟಪಕ್ಕೆ ಬಂದಿದ್ದಾನೆ, ಆದರೆ ವಧು ಮದುವೆ ತಯಾರಿಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಮನೆಯವರಲ್ಲಿ ಹೇಳಿ ಹೋಗಿದ್ದಾಳೆ ಇತ್ತ ವರನ ಕಡೆಯವರು ಸಂಭ್ರಮದಿಂದ ಮಂಟಪದಲ್ಲಿ ಅತ್ತಿಂದಿತ್ತ ಇತ್ತಿಂದ ಅತ್ತ ತಿರುಗಾಡುತ್ತಿದ್ದಾರೆ, ಇನ್ನೇನು ವರ ಜಯಮಾಲಾ ಕಾರ್ಯಕ್ರಮ ನಡೆಯಬೇಕು ಎಂದು ಪುರೋಹಿತರು ಮಂಟಪಕ್ಕೆ ಬಂದರೂ ಮದುವೆಯ ಹುಡುಗಿ ಮಾತ್ರ ಮಂಟಪಕ್ಕೆ ಬರಲಿಲ್ಲ. ಈ ವೇಳೆ ವರನ ಕಡೆಯವರು ವಧು ಎಲ್ಲಿ ಎಂದು ಕೇಳಿದ್ದಾರೆ ಆಗ ವಧುವಿನ ಕಡೆಯವರು ಹುಡುಗಿ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಾಳೆ ಇನ್ನೇನು ಬಂದು ಬಿಡುತ್ತಾಳೆ ಎಂದು ಹೇಳಿದ್ದಾರೆ. ಇತ್ತ ವರಮಾಲಾ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ ಆದರೂ ಹುಡುಗಿ ಮಾತ್ರ ಬರಲಿಲ್ಲ ವರನ ಕಡೆಯವರಿಗೆ ಮನಸ್ಸಿನಲ್ಲಿ ಏನೋ ಭಯ ಆವರಿಸಲು ಶುರುವಾಗಿದೆ ಅಷ್ಟೋತ್ತಿಗಾಗಲೇ ವರನ ಪೋಷಕರು ವಧು ಎಲ್ಲಿ ಇನ್ನು ಬಂದಿಲ್ಲ ಎಂದು ಕೊಂಚ ಸಿಟ್ಟಿನಲ್ಲಿ ಕೇಳಿದ್ದಾರೆ ಅವಾಗ ವಧುವಿನ ಕಡೆಯವರು ಹುಡುಗಿ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿಹೋದಾಕೆ ನಾಪತ್ತೆಯಾಗಿರುವ ವಿಚಾರ ಹೇಳಿದ್ದಾರೆ ಇದರಿಂದ ಕೋಪಗೊಂಡ ವರನ ಕಡೆಯವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಹುಡುಗಿ ಮನೆಯವರ ವಿರುದ್ಧ ದೂರು ನೀಡಿದ್ದಾರೆ.
ಇಷ್ಟೆಲ್ಲಾ ಘಟನೆ ನಡೆದರೂ ವರ ಮಾತ್ರ ಮಂಟಪದಿಂದ ಕದಲಲೇ ಇಲ್ಲ ಆಕೆ ಬರುತ್ತಾಳೆ ಎಂಬ ನಂಬಿಕೆಯಲ್ಲೇ ಆಕೆಗಾಗಿ ಕಾದು ಕುಳಿತಿದ್ದಾನೆ.
ಅತ್ತ ವರನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ, ಇತ್ತ ವಧುವಿನ ಕಡೆಯವರು ತಮ್ಮ ಹುಡುಗಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ಹುಡುಗಿಯ ಪತ್ತೆಗೆ ಬಲೆ ಬಿಸಿದ್ದಾರೆ .
ಇದನ್ನೂ ಓದಿ: Maharashtra Politics; ಡಬಲ್ ಇಂಜಿನ್ ಸರ್ಕಾರ ಈಗ ತ್ರಿಬಲ್ ಇಂಜಿನ್ ಆಗಿದೆ: ಸಿಎಂ ಶಿಂಧೆ