ಲಕ್ನೋ: ಇತ್ತೀಚೆಗೆ ಹೃದಯಾಘಾತಗಳು ಹೆಚ್ಚಾಗಿ ಆಗುತ್ತಿದೆ. ಯುವ ಜನರಿಗೆ ಹೃದಯಾಘಾತ ಸಂಭವಿಸುತ್ತಿದೆ. ಜೀವನದ ಅತ್ಯಂತ ಸಂತಸದ ಸಮಯದಲ್ಲಿದ್ದಾಗ ಯುವತಿಯ ಜೀವವೇ ಅಂತ್ಯವಾದ ದಾರುಣ ಘಟನೆ ನಡೆದಿದೆ.
ವರದಿಯ ಪ್ರಕಾರ ಡಿ. 3 ( ಶನಿವಾರದಂದು) ಭದ್ವಾನ ಗ್ರಾಮದ ರಾಜ್ ರಾಜ್ ಪಾಲ್ ಎನ್ನುವವರ 20 ವರ್ಷದ ಪುತ್ರಿ ಶಿವಾಂಗಿ ಅವರ ವಿವಾಹ ವಿವೇಕ್ ಯೊಂದಿಗೆ ನಡೆಯುತ್ತಿತ್ತು. ವಧು ವೇದಿಕೆಗೆ ಬಂದಿದ್ದಾಳೆ. ವರನಿಗೆ ಹಾರ ಹಾಕುವ ವೇಳೆ ವಧು ಶಿವಾಂಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ.
ಆತಂಕಗೊಂಡ ಜನ ಏನಾಯಿತೆಂದು ನೋಡಿ, ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಶಿವಾಂಗಿಯನ್ನು ತುರ್ತಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ ದಾರಿ ಮಧ್ಯೆಯೇ ಶಿವಾಂಗಿ ಕೊನೆಯುಸಿರು ಎಳೆದಿದ್ದಾರೆ.
ಶಿವಾಂಗಿ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ (ಹೃದಯ ಸ್ತಂಭನ) ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವಧು ಕುಸಿದು ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.