Advertisement

ವಿದ್ಯುತ್ ಸಂಪರ್ಕ ಕಡಿತಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಲೈನ್ ಮ್ಯಾನ್

04:26 PM Jul 04, 2023 | Team Udayavani |

ಬೈಂದೂರು: ಮರ ಕಡಿಯುವ ಮೊದಲು ವಿದ್ಯುತ್ ಲೈನ್ ಕಡಿತಕ್ಕೆ ಲಂಚ ಪಡೆಯುತ್ತಿದ್ದ ಲೈನ್ ಮ್ಯಾನ್ ಇದೀಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ರಮೇಶ್ ಬಡಿಗೇರ್ ಬಂಧಿತ ಲೈನ್ ಮ್ಯಾನ್. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಈ ಘಟನೆ ನಡೆದಿದೆ.

ಮನೆ ಪಕ್ಕದ ಮರ ಕಡಿಯಲು ಅಡ್ಡಿಯಾಗುತ್ತಿದ್ದ ವಿದ್ಯುತ್ ಲೈನ್ ಸಂಪರ್ಕ ಕಡಿತ ಮಾಡಲು ಲೈನ್ ಮ್ಯಾನ್ ರಮೇಶ್ ಎರಡು ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next