Advertisement

ಕ್ರಿಕೆಟ್‌ ದಿಗ್ಗಜ ಬ್ರಿಯಾನ್‌ ಲಾರಾಗೂ ತಟ್ಟಿತ್ತು ಖಿನ್ನತೆ!

10:01 AM Dec 07, 2019 | Sriram |

ಮುಂಬಯಿ: ಇತ್ತೀಚೆಗೆ ವಿಶ್ವ ದರ್ಜೆಯ ಕ್ರಿಕೆಟಿಗರು ವಿಪರೀತ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮಾನಸಿಕ ಖಿನ್ನತೆಗೆ ತುತ್ತಾಗಿ ಕೆಲವು ದಿನ ವಿಶ್ರಾಂತಿ ಬಯಸಿದ ಬೆನ್ನಲ್ಲೇ ವಿಶ್ವವ್ಯಾಪಿ ಕ್ರಿಕೆಟಿಗರ ಸಮಸ್ಯೆ ಕುರಿತು ಚರ್ಚೆಯಾಗಿತ್ತು.

Advertisement

ಇದೀಗ ವಿಶ್ವ ಕ್ರಿಕೆಟ್‌ ದಂತಕತೆ ಬ್ರಿಯಾನ್‌ ಲಾರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಇದನ್ನು ಸ್ವತಃ ಲಾರಾ ಮುಂಬಯಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

“ಕ್ರಿಕೆಟಿಗರಿಗೆ ಮಾತ್ರವಲ್ಲ, ಹೆಚ್ಚಿನ ಎಲ್ಲ ಕ್ರೀಡಾಪಟುಗಳಿಗೂ ಮಾನಸಿಕ ಖಿನ್ನತೆ ಎದುರಾಗುತ್ತದೆ. ವಿವಿಧ ಸಮಸ್ಯೆಗಳಿಗೆ ತುತ್ತಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಇದರಿಂದ ಹೊರಬರಲಾಗದೆ ಹೀಗೆಲ್ಲ ಆಗುತ್ತದೆ. ಇದಕ್ಕೆ ನಾನೂ ಹೊರತಾಗಿರಲಿಲ್ಲ. 400 ರನ್ನುಗಳ ವಿಶ್ವದಾಖಲೆ ನಿರ್ಮಿಸಿದ ಬಳಿಕ ನಾನೂ ಮಾನಸಿಕವಾಗಿ ಅಸ್ವಸ್ಥನಾಗಿದ್ದೆ. ಇದರಿಂದ ಚೇತರಿಸಿಕೊಂಡು ಹೊರ ಬರಲು ಬಹಳ ಕಷ್ಟವಾಯಿತು’ ಎಂದು ಲಾರಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next