Advertisement
ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೊಸ ಪರಿವರ್ತನೆ ಯನ್ನು ತರುವಂಥ ಮೂಲ ಸೌಕರ್ಯ ಯೋಜನೆಗಳನ್ನು ಜಾರಿ ಮಾಡುವ ಹೊಸ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಜಿ7 ನಾಯಕರು ಘೋಷಿಸಿದ್ದಾರೆ. ಈ ಮೂಲಕ ವಿಸ್ತರಣ ವಾದಿ ಚೀನಕ್ಕೆ ಸಡ್ಡು ಹೊಡೆಯುವ ಮಾಸ್ಟರ್‌ಪ್ಲ್ರಾನ್ ರೂಪಿಸಿದ್ದಾರೆ.
2013ರಲ್ಲಿ ಘೋಷಣೆಯಾದ ಯೋಜನೆಯಿದು. ಏಷ್ಯಾದಿಂದ ಯುರೋಪ್‌ವರೆಗೆ ಮತ್ತು ಅದ ರಿಂದಾಚೆಗೆ ರೈಲ್ವೇ, ಬಂದರು, ಹೆದ್ದಾರಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಚೀನದ ಈ ಯೋಜನೆಗೆ 100ಕ್ಕೂ ಹೆಚ್ಚು ದೇಶಗಳು ಒಪ್ಪಿವೆ. ಆದರೆ ಬಿಆರ್‌ಐ ಹೆಸರಲ್ಲಿ ಚೀನವು ಶ್ರೀಲಂಕಾದಂಥ ದೇಶ ಗಳಿಗೆ ಸಾಲ ನೀಡಿ, ಸಾಲದ ಶೂಲಕ್ಕೆ ಸಿಲುಕಿಸುತ್ತಿದೆ.
Related Articles
ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಇಟಲಿ ದೇಶಗಳು ಖಾಸಗಿ ಸಂಸ್ಥೆಗಳಿಂದ ಸಾಲ ಸೇರಿದಂತೆ ಹಲವು ಮೂಲಗಳಿಂದ 600 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಿಸಿ, ಅಭಿವೃದ್ಧಿಶೀಲ ದೇಶಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಯೋಜನೆಯಿದು. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ 4 ಪ್ರಮುಖ ಕ್ಷೇತ್ರಗಳಾದ ಆರೋಗ್ಯ, ಡಿಜಿಟಲ್ ಸಂಪರ್ಕ, ಲಿಂಗ ಸಮಾನತೆ ಮತ್ತು ಹವಾಮಾನ- ಇಂಧನ ಭದ್ರತೆಯಲ್ಲಿ ಸುಧಾರಣೆ ತರುವುದು ಕೂಡ ಇದರ ಉದ್ದೇಶವಾಗಿದೆ.
Advertisement
ಭಾರತಕ್ಕೇನು ಲಾಭ?-ಆರೋಗ್ಯಸೇವೆ, ಡಿಜಿಟಲ್ ಸಂಪರ್ಕ,ಲಿಂಗ ಸಮಾನತೆ, ಹವಾಮಾನ ಮತ್ತು ಇಂಧನ ಭದ್ರತೆಯಂಥ ಪ್ರಮುಖ ವಲಯಗಳ ಸುಧಾರಣೆಗೆ ಒತ್ತು ಸಿಗಲಿದೆ.
-ಇಂಗಾಲದ ಪ್ರಮಾಣ ತಗ್ಗಿಸುವ ಭಾರತದ ಪ್ರಯತ್ನಕ್ಕೆ ಹಣಕಾಸು ನೆರವು ಲಭಿಸಲಿದೆ.
-ಆಹಾರ ಭದ್ರತೆ ವಿಸ್ತರಣೆ, ಕೃಷಿ ವ್ಯವಸ್ಥೆ ಸುಧಾರಣೆಗಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮ 30 ದಶಲಕ್ಷ ಡಾಲರ್ ಹೂಡಿಕೆ ಮಾಡಲಿದೆ.
-ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ಭಾರತದ ಕಂಪೆನಿಗಳು, ಉದ್ಯಮಿಗಳಿಗೆ ನೆರವಾಗಲಿದೆ.
-ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗ ಲಿದೆ, ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಸಿಗಲಿದೆ.