ಲಂಡನ್: ನ್ಯೂಜಿಲ್ಯಾಂಡ್ “ಕ್ರಿಕೆಟ್ ಗ್ರೇಟ್’ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬೆನ್ ಸ್ಟೋಕ್ಸ್ ಅವರನ್ನು ಟೆಸ್ಟ್ ಟೀಮ್ ಕ್ಯಾಪ್ಟನ್ ಆಗಿ ನೇಮಿಸಿದ ಬೆನ್ನಲ್ಲೇ ಇಸಿಬಿ ಕೈಗೊಂಡ ದಿಟ್ಟ ನಿರ್ಧಾರ ಇದಾಗಿದೆ.
40 ವರ್ಷದ ಬ್ರೆಂಡನ್ ಮೆಕಲಮ್ ಪ್ರಸ್ತುತ ಐಪಿಎಲ್‌ನಲ್ಲಿ ಕರ್ತವ್ಯ ನಿಭಾಯಹಿಸುತ್ತಿದ್ದು, ಕೋಲ್ಕತಾ ನೈಟ್‌ರೈಡರ್ ತಂಡದ ಕೋಚ್ ಆಗಿದ್ದಾರೆ. ಮೇ 18ರಂದು ಕೆಕೆಆರ್ ಕೊನೆಯ ಲೀಗ್ ಪಂದ್ಯ ಆಡಿದ ಬಳಿಕ ಮೆಕಲಮ್ ಲಂಡನ್‌ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.
“ಬ್ರೆಂಡನ್ ಮತ್ತು ಬೆನ್ ಸ್ಟೋಕ್ಸ್ ಕೋಚ್-ಕ್ಯಾಪ್ಟನ್ ಪಾಟ್ನìರ್‌ಶಿಪ್‌ನ ಬಲಾಡ್ಯ ಜೋಡಿ ಎನಿಸಲಿದೆ’ ಎಂದು ಇಸಿಬಿ ನಿರ್ದೇಶಕ ರಾಬ್ ಕೀ ಹೇಳಿದ್ದಾರೆ. ಇಂಗ್ಲೆಂಡ್ ಕಳೆದ 17 ಟೆಸ್ಟ್‌ಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿತ್ತು. ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡಿತ್ತು.
ಸ್ವಾರಸ್ಯವೆಂದರೆ, ಬ್ರೆಂಡನ್ ಮೆಕ ಲಮ್ ಅವರ ಟೆಸ್ಟ್ ಕೋಚಿಂಗ್ ಅಭಿಯಾನ ಆರಂಭವಾಗುವುದೇ ನ್ಯೂಜಿಲ್ಯಾಂಡ್ ವಿರುದ್ಧ! ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲ್ಯಾಂಡ್, ಜೂ. 2ರಂದು ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್ ಆಡಲಿಳಿಯಲಿದೆ.