ಮದ್ಯಪ್ರಿಯ ಮಹಿಳೆಯರಿಗೆ ಇದು ಆಘಾತಕಾರಿ ಸಂಗತಿ. ನೀವು ಆಲ್ಕೋಹಾಲ್ ಗೆ ಅಡಿಕ್ಟ್ ಆಗಿದ್ದರೆ ಅದರಿಂದ ದೂರವಾಗಿ, ಇಲ್ಲದಿದ್ದರೆ ಸ್ತನ ಕ್ಯಾನ್ಸರ್ ಕಾಯಿಲಿಗೆ ತುತ್ತಾಗಬೇಕಾದಿತು.
ಹೌದು, ಕ್ಯಾಲಿಪೋರ್ನಿಯಾದ ‘ಆಲ್ಕೋಹಾಲ್ ಸಂಶೋಧನಾ ಸಂಸ್ಥೆ’ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಮಹಿಳೆಯರು ಸ್ತನ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಲು ಕಾರಣಗಳಲ್ಲಿ ಮಿತಿಮೀರಿದ ‘ಮದ್ಯ’ ಸೇವನೆ ಕೂಡ ಒಂದು ಎಂದಿದೆ. ನಿತ್ಯ ಮದ್ಯ ಸೇವಿಸುವ ಬಹಳಷ್ಟು ಮಹಿಳೆಯರು ಈ ಬಗ್ಗೆ ಗಮನ ಹರಿಸುವುದಿಲ್ಲ. ಅತೀಯಾದ ಅಮಲು ಅವರನ್ನು ಸ್ತನ ಕ್ಯಾನ್ಸರ್ ಗೆ ನೂಕುವ ಸಾದ್ಯತೆ ತಳ್ಳಿಹಾಕುವಂತಿಲ್ಲ ಎನ್ನುತ್ತಿದೆ ಸಮೀಕ್ಷೆ.
ಕೆಲ ದಶಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಕ್ಯಾಲಿಪೋರ್ನಿಯಾದ ‘ಆಲ್ಕೋಹಾಲ್ ಸಂಶೋಧನಾ ಸಂಸ್ಥೆ’, ಸ್ತನ ಕ್ಯಾನ್ಸರ್ ಗೆ ಮದ್ಯ ಸೇವನೆ ಕಾರಣ ಎಂಬ ಅಂಶ ಎಂದಿದೆ. 2019ರ ವರದಿ ಪ್ರಕಾರ ಅಮೆರಿಕದ ಶೇಕಡಾ 25 ರಷ್ಟು 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರು ಮದ್ಯ ಸೇವನೆ ಪರಿಣಾಮ ಸ್ತನ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ ಎನ್ನುತ್ತಾರೆ ವಿಜ್ಞಾನಿ ಪ್ರಿಸ್ಸಿಲ್ಲಾ ಮಾರ್ಟಿನೆಜ್.
ಸ್ತನ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯ ಸೇವಿಸುವ ಮಹಿಳೆಯರು,ಯುವತಿಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ #DrinkLessForYourBreasts ಎನ್ನುವ ಅಭಿಯಾನ ಕೂಡ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪ್ರಾರಂಭವಾಗಿದೆ.
ಪ್ರಿಸ್ಸಿಲ್ಲಾ ಮಾರ್ಟಿನೆಜ್ ಅವರ ಪ್ರಕಾರ ಮಹಿಳೆಯರು ಮದ್ಯ ಸೇವನೆ ಸಾಮಾನ್ಯ. ಆದರೆ, ಕೆಲವೊಂದು ಬಾರಿ ಅತೀಯಾದ ಸೇವನೆ ಆರೋಗ್ಯಕ್ಕೆ ಮಾರಕ. ಈ ಅಭಿಯಾನದ ಗುರಿ ಮಹಿಳೆಯರಿಗೆ ಅಪಮಾನ ಮಾಡುವುದಲ್ಲ, ಬದಲಾಗಿ ಅವರ ಆರೋಗ್ಯ ಕಾಪಾಡುವುದಾಗಿದೆ ಎಂದಿದ್ದಾರೆ.