ಜೈಪುರ: ಸೆಪ್ಟೆಂಬರ್ 30ರಿಂದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ್ದ ಬೆನ್ನಲ್ಲೇ ಜೈಪುರದ ಸರ್ಕಾರಿ ಯೋಜನಾ ಭವನದ ನೆಲಮಹಡಿಯಲ್ಲಿನ ಅಲ್ಮೇರಾದಲ್ಲಿ 2.31 ಕೋಟಿ ರೂಪಾಯಿಗೂ ಅಧಿಕ ನಗದು ಹಾಗೂ ಒಂದು ಕೆಜಿ ಚಿನ್ನ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:“ಸಿದ್ದರಾಮಯ್ಯ ಎಂಬ ಹೆಸರಿನ ನಾನು..” 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ
ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಜನಾ ಭವನದ ನೆಲಮಹಡಿಗೆ ತೆರಳಲು ಅನುಮತಿ ಹೊಂದಿದ್ದ ಏಳು ನೌಕರರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಬೀಗ ಹಾಕಿದ್ದ ಅಲ್ಮೇರಾದೊಳಗಿದ್ದ ಸೂಟ್ ಕೇಸ್ ನಲ್ಲಿ 2,000 ಮುಖಬೆಲೆ ನೋಟುಗಳು ಹಾಗೂ ಅಮಾನ್ಯಗೊಂಡಿರುವ 500 ರೂ. ನೋಟುಗಳು ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಸೂಟ್ ಕೇಸ್ ನಲ್ಲಿ 2.31 ಕೋಟಿಗೂ ಅಧಿಕ ನಗದು ಹಾಗೂ ಮತ್ತೊಂದು ಸೂಟ್ ಕೇಸ್ ನಲ್ಲಿ ಒಂದು ಕೇಜಿ ಚಿನ್ನ ಪತ್ತೆಯಾಗಿದೆ. ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ನೀಡಿರುವ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.