Advertisement

ವಿರಾಮದ ಹೊತ್ತೂ ಅಧ್ಯಯನದ ಸೊತ್ತು

03:13 PM Nov 22, 2018 | |

ವಿದ್ಯಾರ್ಥಿಗಳಿಗೆ ಬಿಡುವು ಸಿಕ್ಕಾಗ ಯಾವ ವಿಷಯ ಚರ್ಚಿಸುವುದು ಎಂಬುವುದರ ಬಗ್ಗೆಯೇ ಗೊಂದಲಕ್ಕೀಡಾಗುತ್ತಾರೆ. ಚರ್ಚಿಸುವ ವಿಷಯ ಪ್ರಸ್ತುತ ವಿಷಯವಾಗಿದ್ದರೆ ಚೆನ್ನ. ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ವಿಮರ್ಶೆಯನ್ನು ತಮ್ಮ ಸ್ನೇಹಿತರ ಜತೆಗೆ ಮಾಡಿದಾಗ ಅವರಿಗೆ ಪುಸ್ತಕದ ಓಲವು ಮೂಡಿಸಬಹುದು. ಇದರಿಂದ ವಾಕ್ಚಾತುರ್ಯದ ಜತೆಗೆ ವಿಮರ್ಶ ಕೌಶಲವೂ ಹೆಚ್ಚಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಸಂಘಟನಾ ಕೌಶಲವೂ ವೃದ್ಧಿಯಾಗುತ್ತದೆ.

Advertisement

ಯುವ ಮನಸ್ಸುಗಳೇ ಹಾಗೆ ಒಂದಲ್ಲ ಒಂದು ವಿಷಯಗಳ ಕುರಿತು ಚರ್ಚೆ ಮಾಡುತ್ತಾ ಇರುತ್ತಾರೆ. ಇದು ಇಂದಿಗೆ ಅನಿವಾರ್ಯ ಕೂಡ ಹೌದು. ತರಗತಿಯಲ್ಲಿ ಸ್ವಲ್ಪ ವಿರಾಮ ಸಿಕ್ಕರೆ ಸಾಕು ಮೌನ ಎಂಬುವುದಿರುವುದಿಲ್ಲ. ಹೆಚ್ಚಾಗಿ ವಿದ್ಯಾರ್ಥಿಗಳ ನಡುವೆ ಗಾಸಿಪ್‌ ಗಳು , ತಲೆಹರಟೆ ಮಾತುಗಳು, ಅಂತೆ ಕಂತೆಗಳೇ ಜಾಸ್ತಿ. ಇಂತಹ ಮಾತುಗಳಿಂದ ಕ್ಷಣಿಕ ಮನೋರಂಜನೆ ಲಭಿಸಬಹುದು. ಆದರೆ ವಿದ್ಯಾರ್ಥಿ ಜೀವನಕ್ಕೆ ಬೇಕಾಗುವ ಮೌಲ್ಯಯುತ ವಿಚಾರಗಳು ಸಿಗುವುದಿಲ್ಲ. ವಿರಾಮದ ಸಮಯದಲ್ಲೂ ಅಧ್ಯಯನ ವಿಷಯಗಳ ಬಗ್ಗೆ ಚರ್ಚಿಸುವುದನ್ನು ರೂಢಿಸುವುದು ಉತ್ತಮ. ಅಲ್ಪ ಸಮಯದಲ್ಲಿ ಸಮಯ ಕಳೆಯಲು ತರಗತಿ ಅಥವಾ ಕ್ಯಾಂಪಸ್‌ ಗಳಲ್ಲಿ ನೀವು ಚರ್ಚಿಸುವ ವಿಷಯಗಳು ಹೀಗಿದ್ದರೆ ಚೆನ್ನ. 

ಸಮಾಜ ಮತ್ತು ಜೀವನ
ಇಂದಿನ ಯುವಪೀಳಿಗೆ ಮುಂದಿನ ಸುಸಂಸ್ಕೃತ , ನೆಮ್ಮದಿಯ ಸಮಾಜದ ಆಧಾರಸ್ತಂಭಗಳು. ಒಂದು ಸಮಾಜ ಸದೃಢವಾಗಿರಬೇಕಾದರೆ ಯುವಜನಾಂಗ ಸದೃಢವಾಗಿರಬೇಕು. ಆದ್ದರಿಂದ ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ವಿಷಯಗಳು ಯುವ ಮನಸ್ಸುಗಳ ಚರ್ಚೆ ವಿಷಯವಾಗಿರಬೇಕು. ಸಮಾಜ ದೊಂದಿಗೆ ಮುಂದಿನ ಭವಿಷ್ಯ ಕುರಿತಾಗಿಯೂ ಮಾತುಕತೆ ನಡೆದರೆ ಉತ್ತಮ.

ಪರೀಕ್ಷಾ ತಯಾರಿ
ವಿದ್ಯಾರ್ಥಿ ಜೀವನವೆಂದರೆ ಪರೀಕ್ಷೆಗಳು ಸಾಮಾನ್ಯ. ಮುಂದೆ ಬರಲಿರುವ ಪರೀಕ್ಷೆ ಕುರಿತಾಗಿ, ಅಂದಿನ ಪಾಠ ಅರ್ಥವಾಗದಿದ್ದಲ್ಲಿ ಸಹಪಾಠಿಗಳು ಸೇರಿಕೊಂಡು ತಾವೇ ಸ್ವತಃ ಚರ್ಚೆ ನಡೆಸುವಂತದ್ದು, ತಮ್ಮ ತಮ್ಮ ನಡುವೆಯೇ ಪಾಠಕ್ಕೆ ಸಂಬಂಧಿಸಿದ ಸಂದೇಹಗಳನ್ನು ಬಗೆಹರಿಸಲು ಯತ್ನಿಸಬೇಕು.

ಪುಸ್ತಕ ಕುರಿತಾದ ವಿಮರ್ಶೆ
ಪುಸ್ತಕಗಳು ಜ್ಞಾನವನ್ನು ಹೆಚ್ಚಿಸುವ ದೀವಿಗೆ. ಪುಸ್ತಕ ಓದುವುದರಿಂದ ನಮ್ಮಲ್ಲಿ ಹೊಸ ಆಲೋಚನೆಗಳು ಉಂಟಾಗುತ್ತವೆ. ಆಧುನಿಕ ಯುಗದಲ್ಲಿ ಪುಸ್ತಕಗಳ ಮಹತ್ವ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲೆ ಕತೆ, ಕಾದಂಬರಿ ಓದುವ ಯುವಜನರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ವಿಮರ್ಶೆಯನ್ನು ತಮ್ಮ ಸ್ನೇಹಿತರ ಜತೆಗೆ ಮಾಡಿದಾಗ ಅವರಿಗೆ ಪುಸ್ತಕದ ಓಲವು ಮೂಡಿಸಬಹುದು. ಇದರಿಂದ ವಾಕ್ಚಾತುರ್ಯದ ಜತೆಗೆ ವಿಮರ್ಶ ಕೌಶಲವೂ ಹೆಚ್ಚಾಗುತ್ತದೆ.

Advertisement

ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ಅತ್ಯಂತ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇದರಲ್ಲಿ ಒಳಿತು ಮತ್ತು ಕೆಡುಕು ಎರಡೂ ಇದೆ. ಸಾಮಾನ್ಯವಾಗಿ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಅಂಶಗಳ ಕುರಿತು ಚರ್ಚೆ, ಮಾತುಕತೆ ನಡೆಸುತ್ತಾರೆ. ಅವುಗಳು ಎಷ್ಟೋ ಸಮಾಲೋಚಿತ ಅನ್ನುವುದು ಮುಖ್ಯ. 

ಚರ್ಚೆ ಅಥವಾ ಮಾತುಕತೆಗಳು ಆರೋಗ್ಯ ಕರವಾಗಿರಬೇಕು. ವಿದ್ಯಾರ್ಥಿಗಳ ನಡುವೆ ನಡೆಯುವ ಇಂತಹ ಚರ್ಚೆಗಳಿಂದ ಒಬ್ಬ ಉತ್ತಮ ಮಾತುಗಾರನ ಹುಟ್ಟುತ್ತಾನೆ. ಹೊಸ ಹೊಸ ವಿಚಾರಗಳು, ಆಲೋಚನೆಗಳು ಹುಟ್ಟುಕೊಳ್ಳುತ್ತವೆ. 

ಒಳ್ಳೆಯ ಅಲೋಚನೆ
ವಿಚಾರಗಳು ಸಕಾರತ್ಮಕವಾಗಿದ್ದಾಗ ಜೀವನವೂ ಸುಂದರವಾಗಿ ಸಕಾರತ್ಮಕವಾಗಿರುತ್ತದೆ. ಈ ಕಾರಣದಿಂದಾಗಿ ಸಕಾರಾತ್ಮಕ ಅಲೋಚನೆಯಿಂದ ಚರ್ಚೆಗಳು ಕೂಡಿರಬೇಕು. ಆಲೋಚನೆಗಳು ಉತ್ತಮವಾಗಿದ್ದರೇ ಜೀವನವೂ ಉತ್ತಮವಾಗಿರುತ್ತದೆ .

 ಧನ್ಯಶ್ರೀ, ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next