Advertisement

Manipal ಅಪಾರ್ಟ್‌ಮೆಂಟ್‌ಗೆ ನುಗ್ಗಿ ಲ್ಯಾಪ್‌ಟಾಪ್‌ಗಳ ಕಳವು

11:45 PM Oct 24, 2023 | Team Udayavani |

ಮಣಿಪಾಲ: ಅಪಾರ್ಟ್‌ಮೆಂಟ್‌ವೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಮಣಿಪಾಲದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಯಶ್‌ ಕಟೋರ್‌ ಹಾಗೂ ಅವರ ಸ್ನೇಹಿತರು ವಾಸ ಮಾಡಿಕೊಂಡಿದ್ದರು.

Advertisement

ಅ. 24ರಂದು ಕಳ್ಳರು ಪ್ರವೇಶಿಸಿ ಲ್ಯಾಪ್‌ಟಾಪ್‌ ಕಳವು ಮಾಡಿದ್ದಾರೆ. ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಅವರ ಸ್ನೇಹಿತೆಯರಾದ ಗಾಯತ್ರಿ ಅವರ ಲ್ಯಾಪ್‌ಟಾಪ್‌, ಜೆಬಿಎಲ್‌ ಟ್ಯೂನ್‌, ಆಯಿಶಾ ಅಲ್ಮಾಸ್‌ ಅವರ ಲ್ಯಾಪ್‌ಟಾಪ್‌, ಶಫೀನಾ ಶಂಶುದ್ದೀನ್‌ ಅವರ ಲ್ಯಾಪ್‌ಟಾಪ್‌, ಮೇದಿಯಾ ಮನ್ಸೂರ್‌ ಅವರ ವ್ಯಾಚ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಲ್ಯಾಪ್‌ಟಾಪ್‌ ಮತ್ತು ಇತರ ವಸ್ತುಗಳ ಮೌಲ್ಯ 2,56,000 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next