ಬೇಕಾಗುವ ಸಾಮಗ್ರಿಗಳು:
ಹಾಲು: 2 ಕಪ್
ಬೆಣ್ಣೆ: ಕಾಲು ಕಪ್
ಸಕ್ಕ ರೆ: ಮುಕ್ಕಾಲ್ ಕಪ್
ಮೊಟ್ಟೆ: 3
ಏಲಕ್ಕಿ ಹುಡಿ: 2 ಚಮಚ
ಜಾಯಿ ಕಾಯಿ ಹುಡಿ: ಸ್ವಲ್ಪ
ವೆನಿಲ್ಲಾ ಏಕ್ಸ್‌ಟ್ರಾ ಕ್ಟ್: 1 ಚಮಚ
ಬ್ರೆಡ್: 3 ಕಪ್
ಬಾದಾಮಿ, ಪಿಸ್ತಾ: ಸ್ವಲ್ಪ.
ಸಾಸ್‌ಗೆ ಸಾಮಗ್ರಿಗಳು
ಹಾಲು: 1 ಕಪ್
ಬೆಣ್ಣೆ: 2 ಚಮ ಚ
ಸಕ್ಕ ರೆ: ಮುಕ್ಕಾಲ್ ಕಪ್
ವೆನಿಲ್ಲಾ : 1 ಚಮಚ
ಹಿಟ್ಟು: 1 ಚಮಚ
ಉಪ್ಪು: ರುಚಿಗೆ
ಮಾಡುವ ವಿಧಾನ: ಮೊದಲು ಚಿಕ್ಕ ಬಾಣಲೆಯಲ್ಲಿ ಬೆಣ್ಣೆಯೊಂದಿಗೆ ಹಾಲನ್ನು ಕಾಯಿಸಿಕೊಳ್ಳಬೇಕು. ಬೆಣ್ಣೆ ಪೂರ್ಣ ಕರಗುವವರೆಗೂ ತಿರುಗಿಸಬೇಕು. ಅದನ್ನು ತಣ್ಣಗಾಗಲು ಬಿಡಬೇಕು. ಈಗ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಏಲಕ್ಕಿ ಮತ್ತು ಜಾಯಿಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು. ನಿಧಾನವಾಗಿ ಇದಕ್ಕೆ ಹಾಲನ್ನು ಬೆರೆಸಿ ತಿರುಗಿಸಬೇಕು. ತುಪ್ಪ ಸವರಿದ ತಟ್ಟೆಗೆ ಬ್ರೆಡ್ ತುಂಡುಗಳನ್ನು ಹಾಕಿ ಇದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾವನ್ನು ಹಾಕಬೇಕು. ಅನಂತರ ಹಾಲಿನ ಮಿಶ್ರಣವನ್ನು ಇದರ ಮೇಲೆ ಹಾಕಿ ಓವೆನ್‌ನಲ್ಲಿ 45- 50 ನಿಮಿಷ (350 ಡಿಗ್ರಿ ಶಾಖದಲ್ಲಿ) ಬೇಯಿಸಬೇಕು. ಪ್ರತ್ಯೇಕ ಬಟ್ಟಲಿನಲ್ಲಿ ಸಾಸ್ ಮಿಶ್ರಣವನ್ನು ಕಲೆಸಿದರೆ ಬ್ರೆಡ್ ಪುಡ್ಡಿಂಗ್ ಸವಿಯಲು ಸಿದ್ಧ.
ವಿಲ್ಮಾ, ಮಂಗಳೂರು