ಬ್ರೆಡ್ ತುಂಡುಗಳು-2 ಕಪ್, ಕಡಲೆ ಹಿಟ್ಟು-1 ಕಪ್, ಅಕ್ಕಿ ಹಿಟ್ಟು-1/2 ಕಪ್, ಅಚ್ಚ ಖಾರದ ಪುಡಿ-2 ಚಮಚ, ಗರಂ ಮಸಾಲೆ-3 ಚಮಚ, ಅರಶಿನ-1/2 ಚಮಚ, ತೆಂಗಿನಕಾಯಿ ತುರಿ-1/2 ಕಪ್, ಕತ್ತರಿಸಿದ ಕರಿಬೇವಿನ ಎಲೆಗಳು-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,
ಎಣ್ಣೆ-ಕರಿಯಲು
Advertisement
ಮಾಡುವ ವಿಧಾನ:ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಕಿಡಿ. ತೆಂಗಿನಕಾಯಿ ತುರಿ, ಕರಿಬೇವಿನ ಎಲೆಗಳು, ಅರಶಿನ, ಅಚ್ಚ ಖಾರದ ಪುಡಿ, ಉಪ್ಪು, ಗರಂ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ ಹಿಟ್ಟಿನ ಹಾಗೂ ಬ್ರೆಡ್ ಮಿಶ್ರಣಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿಡಿ. ಮಿಶ್ರಣದಿಂದ ನಿಂಬೆಯ
ಗಾತ್ರದ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಸ್ವಾದಿಷ್ಟವಾದ ಬ್ರೆಡ್ ಪಕೋಡಾ ಸವಿಯಲು ಸಿದ್ಧ. ಇದನ್ನು ಪುದಿನಾ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.