ಬ್ರೆಡ್ ಹಾಳೆಗಳು-2, ತೊಗರಿಬೇಳೆ-1/2ಕಪ್, ಶುಂಠಿ ತುರಿ-1 ಚಮಚ, ಕತ್ತರಿಸಿದ ಈರುಳ್ಳಿ-1/2 ಕಪ್, ಹಸಿಮೆಣಸಿನಕಾಯಿ-3-4, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/4 ಕಪ್, ಉಪ್ಪು-ರುಚಿಗೆ ತಕ್ಕಷ್ಟು.
Advertisement
ಮಾಡುವ ವಿಧಾನ:ಬ್ರೆಡ್ ಹಾಳೆಗಳ ಅಂಚು ಕತ್ತರಿಸಿ, ನೀರಲ್ಲದ್ದಿ ಹಿಂಡಿರಿಸಿ. ತೊಗರಿಬೇಳೆಯನ್ನು ಅರ್ಧ ಗಂಟೆ ನೀರಲ್ಲಿ, ನೆನೆಸಿ ಬಸಿದು, ತರಿತರಿಯಾಗಿ, ನೀರು ಹಾಕದೆ ಅರೆದು ಇಡಿ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿಗಳನ್ನು ಬೇರೆಬೇರೆಯಾಗಿ ಎಣ್ಣೆಯಲ್ಲಿ ಹುರಿದು ಸೇರಿಸಿ ಅರೆದಿಡಿ. ಅರೆದ ತೊಗರಿಬೇಳೆ, ಬ್ರೆಡ್ ತುಂಡುಗಳು, ಮಿಕ್ಕೆಲ್ಲಾ ಸಾಮಗ್ರಿಗಳನ್ನು ಒಟ್ಟಾಗಿ ಸೇರಿಸಿ, ನೀರು ಹಾಕದೆ, ಗಟ್ಟಿಯಾಗಿ ಕಲಸಿಕೊಳ್ಳಿ. ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು, ಉದ್ದುದ್ದ ಉಂಡೆಗಳನ್ನು ಮಾಡಿ, ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿ. ರುಚಿಕರವಾದ ಬ್ರೆಡ್ ನುಚ್ಚಿನುಂಡೆಯನ್ನು ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ.