Advertisement

ಕುಲಾಂತರಿ ಬೆಳೆಗಳು ಅಪಾಯಕಾರಿ ಎಂದ ಬ್ರೆಜಿಲ್‌

03:50 AM Feb 28, 2017 | Team Udayavani |

ನವದೆಹಲಿ: ಕುಲಾಂತರಿ ತಳಿಗಳ ಅಪಾಯ ಮತ್ತು ಅನಿಶ್ಚಿತತೆಗಳನ್ನು ಬ್ರೆಜಿಲ್‌ ಸರ್ಕಾರದ ಸಂಸ್ಥೆಯೊಂದು ಎತ್ತಿಹಿಡಿದಿದ್ದು, ಈ ಕುರಿತು ಭಾರತೀಯರು ಸೇರಿದಂತೆ ಹಲವರು ನಡೆಸಿದ ಸುಮಾರು 750 ಅಧ್ಯಯನಗಳನ್ನು ಇದಕ್ಕೆ ಪೂರಕವಾಗಿ ನೀಡಿದೆ. ಕುಲಾಂತರಿ ತಳಿಗಳನ್ನು ಬೆಳೆಯುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿರುವ ಬ್ರೆಜಿಲ್‌ ಈಗ ಕುಲಾಂತರಿ ವಿರುದ್ಧ ವರದಿ ತಯಾರಿಸಿದೆ. 

Advertisement

ಭಾರತದಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದನ್ನು ಖಂಡಿಸಿ ಕುಲಾಂತರಿ ವಿರೋಧಿ ಹೋರಾಟಗಾರರು ಪ್ರತಿಭಟಿಸಲು ಮುಂದಾಗಿರುವಾಗಲೇ ಈ ವರದಿ ಬಹಿರಂಗಗೊಂಡಿರುವುದು ವಿಶೇಷ. “ಕುಲಾಂತರಿ ಬೆಳೆಗಳಿಂದಾಗುವ ಅಪಾಯಗಳು ಮತ್ತು ಅನಿಶ್ಚಿತತೆಗಳು: 750 ಅಧ್ಯಯನಗಳು ಸಾಬೀತುಪಡಿಸಿರುವ ಅಂಶ’ ಎಂಬ ವರದಿಯನ್ನು ಬ್ರೆಜಿಲ್‌ ದೇಶದ ಕೌಟುಂಬಿಕ ಕೃಷಿ ಮತ್ತು ಕೃಷಿ ಅಭಿವೃದ್ಧಿ ವಿಶೇಷ ಕಾರ್ಯಾಲಯವು ಹೊರತಂದಿದೆ. 1980ರಿಂದ 2015ನೇ ಇಸವಿಯ ಅವಧಿಯಲ್ಲಿ ನಡೆದ ಅಧ್ಯಯನಗಳನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಪೈಕಿ ಭಾರತದ ಹಸಿರು ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ತಳಿ ವಿಜ್ಞಾನಿ ಎಂ. ಸ್ವಾಮಿನಾಥನ್‌ ಅವರ ಅಧ್ಯಯನ ವರದಿಯೂ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next