ಬ್ರೆಸಿಲ್ಲಾ/ನವದೆಹಲಿ: ಇಡೀ ಜಗತ್ತನ್ನೇ ಕಂಗೆಡಿಸಿದ್ದ ಕೋವಿಡ್ 19 ಸೋಂಕಿಗೆ ಶೀಘ್ರವೇ ಲಸಿಕೆ ಅಭಿವೃದ್ದಿಪಡಿಸಿದ್ದ ಹಾಗೂ ಕೋವಿಡ್ ಲಸಿಕೆಯನ್ನು ಬ್ರೆಜಿಲ್ ಗೆ ರಫ್ತು ಮಾಡಿರುವುದಕ್ಕಾಗಿ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ವೀರ ಹನುಮಾನ್ ಲಸಿಕೆಯನ್ನು ಭಾರತದಿಂದ ಬ್ರೆಜಿಲ್ ಗೆ ಕೊಂಡೊಯ್ಯುತ್ತಿರುವ ಚಿತ್ರವನ್ನು ಬೋಲ್ಸೊನಾರೋ ಟ್ವೀಟ್ ಮಾಡುವ ಮೂಲಕ ಧನ್ಯವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ: ಬೋರಿಸ್ ಜಾನ್ಸನ್
ಕೋವಿಡ್ ಸೋಂಕಿಗೆ ಲಸಿಕೆಯನ್ನು ಅಭಿವೃದ್ದಿಪಡಿಸಿ ಭಾರತ ರಫ್ತು ಮಾಡಿರುವುದಕ್ಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಹಿಂದೂ ಮಹಾಕಾವ್ಯ ರಾಮಾಯಣವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ. ರಾಮಾಯಣದಲ್ಲಿ ರಾಮನ ಸಹೋದರ ಲಕ್ಷ್ಮಣನ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತುತಂದಿದ್ದ. ಕೋವಿಡ್ ಲಸಿಕೆ ಕೂಡಾ ಸಂಜೀವಿನಿ ಎಂಬುದಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಉದಾಹರಣೆ ನೀಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಬಂಟ್ವಾಳದಲ್ಲಿ ಸರಣಿ ಕಳ್ಳತನ: ಚರ್ಚ್, ದಿನಸಿ ಅಂಗಡಿ, ಬಾರ್ ಗೆ ನುಗ್ಗಿದ ಕಳ್ಳರು
“ನಮಸ್ಕಾರ್ ಪ್ರಧಾನಿ ನರೇಂದ್ರ ಮೋದಿಜೀ! ಜಾಗತಿಕ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ನಮಗೆ ಬಹುದೊಡ್ಡ ಪಾಲುದಾರ ದೇಶದ ಜತೆ ಸ್ನೇಹ ಹೊಂದಿರುವ ಭಾವನೆ ಬ್ರೆಜಿಲ್ ಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್ ಲಸಿಕೆಯನ್ನು ಭಾರತದಿಂದ ಬ್ರೆಜಿಲ್ ಗೆ ರಫ್ತು ಮಾಡಿರುವುದಕ್ಕೆ ಅಭಿನಂದನೆಗಳು. ಧನ್ಯವಾದ…” ಎಂದು ಬೋಲ್ಸೊನಾರೊ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಬ್ರೆಜಿಲ್ ನ ವಿಶ್ವಾಸಾರ್ಹ ಪಾಲುದಾರನಾಗಿರುವುದಕ್ಕೆ ಭಾರತಕ್ಕೆ ಕೂಡಾ ಹೆಮ್ಮೆಯ ವಿಷಯವಾಗಿ ಎಂದು ತಿಳಿಸಿದ್ದಾರೆ. ಅಲ್ಲದೇ ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ಸಹಕಾರವನ್ನು ಬಲಗೊಳಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.