ರಿಯೋ ಡಿ ಜನೈರೊ(ಬ್ರೆಜಿಲ್): ಕೆಲವೊಮ್ಮೆ ರಾಜಕಾರಣಿಗಳು ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡು, ಆ ಬಳಿಕ ಕ್ಷಮೆಯಾಚಿಸುವುದುಂಟು. ಇಂಥದ್ದೇ ಒಂದು ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.
ಮೂರು ಬಾರಿ ಬ್ರೆಜಿಲ್‌ನ ರಿಯೊ ಡಿ ಜನೈರೊದ ಮೇಯರ್ ಆಗಿದ್ದ ಸೀಸರ್ ಮಾಯಾ ಬುಧವಾರ ತನ್ನ ಪಕ್ಷದ ಸಭೆಯಲ್ಲಿ ಭಾಗಿಯಾದ ವೇಳೆ ಮಾಡಿಕೊಂಡ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಯೊ ಡಿ ಜನೈರೊದಲ್ಲಿನ ಸಿಟಿ ಹಾಲ್‌ನ ಮಾಜಿ ಮೇಯರ್ ಸೀಸರ್ ಮಾಯಾ ಅವರು ಇತರ ಕೌನ್ಸಿಲ್ ಸದಸ್ಯರೊಂದಿಗಿನ ಅಧಿವೇಶನಕ್ಕಾಗಿ ಆನ್ ಲೈನ್ ನಲ್ಲಿ ಜಾಯಿನ್ ಆಗಿದ್ದಾರೆ. ಝೂಮ್ ಕಾಲ್ ಮೂಲಕ ಲಾಗಿನ್ ಆಗಿ ಅವರು ಸಭೆಗೆ ಜಾಯಿನ್ ಆಗಿದ್ದಾರೆ.
ಕೌನ್ಸಿಲರ್ ಪಾಬ್ಲೋ ಮೆಲ್ಲೋ ಅಧಿವೇಶನವನ್ನು ನಡೆಸುತ್ತಿದ್ದರು. ಅಧಿವೇಶನದಲ್ಲಿ ಸೀಸನ್ ಮಾಯಾ ಸೇರಿದಂತೆ ಇತರೆ ಸದಸ್ಯರು ಆನ್ ಲೈನ್ ನಲ್ಲಿ ಜಾಯಿನ್ ಆಗಿದ್ದರು.
ಸಭೆ ನಡೆಯುವಾಗ ಸೀಸರ್ ಟಾಯ್ಲೆಟ್‌ನಲ್ಲಿ ಕೂತಿದ್ದರು. ಝೂಮ್ ಕಾಲ್ ನಲ್ಲಿದ್ದ ಅವರು ಕ್ಯಾಮರಾವನ್ನು ಕಾಲಿನತ್ತ ಇಟ್ಟಿದ್ದಾರೆ. ಇದರಿಂದ ಅವರು ಟಾಯ್ಲೆಟ್ ನಲ್ಲಿ ಕೂತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಗೊತ್ತಾದ ಕೂಡಲೇ ಸೀಸರ್ ಕ್ಯಾಮರಾವನ್ನು ತನ್ನ ಮುಖದತ್ತ ತಿರುಗಿಸಿದ್ದಾರೆ.
ಇದನ್ನು ನೋಡಿದ ಇತರೆ ಸದಸ್ಯರು ಮುಜುಗರಕ್ಕೆ ಒಳಗಾಗಿದ್ದಾರೆ. ಕ್ಯಾಮರಾವನ್ನು ಆಫ್ ಮಾಡಿ ಎಂದು ಕೌನ್ಸಿಲರ್ ಸೀಸರ್ ಅವರಿಗೆ ಹೇಳಿದ್ದಾರೆ ಎಂದು ʼಇಂಡಿಪೆಂಡೆಂಟ್ʼ ವರದಿ ತಿಳಿಸಿದೆ.
ಸೀಸರ್ ಅವರು ಅನಾರೋಗ್ಯದ ಕಾರಣದಿಂದ ಅಧಿವೇಶನದಲ್ಲಿ ಭಾಗಿಯಾಗಿಲ್ಲ. ಅವರು ಆಕಸ್ಮಿಕವಾಗಿ ಸಭೆಗೆ ಜಾಯಿನ್ ಆಗಿದ್ದರು ಎಂದು ಪ್ರಕಟಣೆಯಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.
ಈ ವಿಡಿಯೋ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆ ಬಳಿಕ ಸೀಸರ್ ಎಲ್ಲರ ಬಳಿಕ ಕ್ಷಮೆಯನ್ನು ಕೇಳಿದ್ದಾರೆ.