Advertisement

Politics: ದೇಶದಲ್ಲಿ ಬೆಂಕಿ ಹಚ್ಚುವ ಶೂರ ಮೋದಿ: ಎಐಸಿಸಿ ಅಧ್ಯಕ್ಷ ಖರ್ಗೆ

04:02 PM Mar 13, 2024 | Team Udayavani |

ಕಲಬುರಗಿ: ದೇಶದಲ್ಲಿ ಪ್ರಧಾನಿ ಮೋದಿ ಓಡಾಡಿಕೊಂಡು ದೇಶಕೋ‌ ಕಾಂಗ್ರೆಸ್ ಬರಬಾದ್ ಕರ್ದಿಯಾ…ಅಂತಾ ಬೆಂಕಿ ಹಚ್ಚಿಕೊಂಡು ಓಡಾಡುತ್ತಿದ್ದಾರೆ. ಆತ ದೊಡ್ಡ ಮೋಸಗಾರ.. ಜನಾ ನಂಬಬೇಡಿ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

Advertisement

ನಗರದ ಎನ್ ವಿ ಮೈದಾನದಲ್ಲಿ ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಸಮಾವೇಶ ಮತ್ತು 1464 ಕೋಟಿ ರೂ.ಗಳ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೋದಿ ಪುನಃ ನಿಮ್ಮ ಬಳಿ ಬಂದು 75 ವರ್ಷಗಳಲ್ಲಿ ಕಾಂಗ್ರೆಸ್ ದೇಶವನ್ನು ಹಾಳು ಮಾಡಿದ್ದಾರೆಂದು ಆರೋಪ ಮಾಡ್ತಾರೆ. ಮಾಡಲಿ ಬಿಡಿ…ಅದರೆ, ಕಳೆದ ಹತ್ತು ವರ್ಷದಲ್ಲಿ‌ ನೀವೇನು ಮಾಡಿರಿ? ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ್ ಹಾಗೂ ಯಾದಗಿರಿಗೆ ಏನು ಮಾಡಿರಿ?. ಅದಾನಿ- ಅಂಬಾನಿ ಸಾಹುಕಾರ ಆದರೆ ದೇಶ ಪ್ರಗತಿಯಾದಂತೆಯೇ ಎಂದು ಪ್ರಶ್ನಿಸಿದರು.

ಅಪ್ಪಾ…140 ಕೋಟಿ‌ ಮೇರಾ ಪರಿವಾರ ಅಂತೀರಲ್ಲಾ, 40 ಕೋಟಿ ಜನರಿಗೆ ಈಗಲೂ ದೇವಾಲಯ ಪ್ರವೇಶ ನೀಡಲಾಗುತ್ತಿಲ್ಲ. ಇಷ್ಟು‌ಕಟ್ಟರ್ ಜಾತಿ ವ್ಯವಸ್ಥೆಯಲ್ಲಿ ದೇಶವನ್ನು ಮುನ್ನಡೆಸಲಾಗುತ್ತಿದೆ ಎಂದರು.

ನಿಮ್ಮ ಗ್ಯಾರಂಟಿ ಏನಾಯಿತು‌ ಮೋದಿ ಅವರೇ ಎಂದು‌ ಪ್ರಶ್ನಿಸಿದ ಖರ್ಗೆ, 15 ಲಕ್ಷ ಹಣ ಅಕೌಂಟ್ ಗೆ ಹಾಕ್ತಿನಿ, 2 ಕೋಟಿ ವರ್ಷವಾರು ಉದ್ಯೋಗ ಕೊಡ್ತಿನಿ ಅಂದಿದ್ದು ಏನಾಯಿತು? ಎಂದು ಪ್ರಶ್ನಿಸಿದರು.

Advertisement

ನಮ್ಮ ಪಕ್ಷ ಅಕಂಟ್ ಬಂದ್ ಮಾಡುವ ಬಿಜೆಪಿ ನಾಯಕರೇ ನಿಮ್ಮ ಪಕ್ಷದ ಖಾತೆಗಳ್ಳಿ 335 ಕೋಟಿ ಹ್ಯಾಗೆ ಬಂತು? ನಿಮ್ಮ‌ಪಕ್ಷದ ದೊಡ್ಡ ಕಚೇರಿ ಹೇಗೆ ಕಟ್ಟಿದ್ದಿರಿ ಹೇಳಿ ಎಂದರು.

ಬರೀ ಹಸಿರು ಝೆಂಡಾ ತೋರಿಸಿದ್ದೆ ಸಾಧನೆ

ದೇಶದಲ್ಲಿ ನಾನು ಅಧಿಕಾರದಲ್ಲಿದ್ದ 11 ತಿಂಗಳಲ್ಲಿ 20 ರೈಲು ಓಡಿಸಿದೆ. ಈ ಯಪ್ಪ (ಮೋದಿ) ರೈಲ್ವೆ ನಿಲ್ದಾಣದಿಂದ ಹಸಿರು ಝಂಡಾ ತೋರಿಸಿ ಓಡಿಸ್ತಿದ್ದಾರೆ. ಅಪ್ಪಾ..ತಾವು ಪ್ರಧಾನಿಗಳು ಸಣ್ಣ, ಸಣ್ಣ ರೈಲು ಓಡಿಸಿ ಖುಷಿ ಪಡೋದು  ಬೇಡ. ಈ ಭಾಗಕ್ಕಾಗಿ ಸಾವಿರಾರು ಕೋಟಿ ರೂ. ಯೋಜನೆ ಕೊಡ್ರಿ ಎಂದ ಖರ್ಗೆ, ಡಕೋಟಾ ಟ್ರೈನ್ ಓಡಿಸಿದ್ರೆ ಆಯಿತಾ..? ನಿಮ್ಮ ಡಕೋಟಾ ರೈಲಿನ ಡಬ್ಬಿಗಳು ನಾವು ಹಾಕಿದ ಹಳಿಗಳ ಮೇಲೆ ಓಡಾಡುತ್ತಿವೆಯಲ್ಲ ಎಂದು‌ ಕಿಚಾಯಿಸಿದ ಅವರು, ಕೆಲವರು ಸತ್ತ ಮೇಲೆ ತಮ್ಮ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಮೆಮೊರೈಸ್ ಆಗುತ್ತಾರೆ ಆದರೆ ಪಾಪ ಕ್ರಿಕೆಟ್ ಸ್ಟೇಡಿಯಂಗೆ ವಲ್ಲಭಾಯಿ ಅವರ ಹೆಸರು ತೆಗೆದು ಮೋದಿ ಅಂತ ಬರ್ಕೊಂಡು ಬದುಕಿದ್ದಾಗಲೇ ಸಾಯುವಂತಹ ಪರಿಸ್ಥಿತಿ ಏರ್ಪಟ್ಟಿದೆಯಲ್ಲ ಎಂದು ನಗಾಡಿದರು.

ಗ್ಯಾರಂಟಿ ಲೀಗಲೈಸ್ ಮಾಡ್ತೀವಿ

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂ ಎಸ್ ಪಿ ಲೀಗಲೈಜ್ ಮಾಡಲಾಗುವುದಲ್ಲದೆ ಭಾಗಿದಾರ್ ನ್ಯಾಯ ಗ್ಯಾರಂಟಿ ಯನ್ನು ಜಾರಿಗೆ ತರುವ ಮೂಲಕ ಬಡವರಿಗೆ ಪ್ಯಾನ್ ಮಾಡಿ ಅವರಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಆದಾಯಗಳ ಗ್ಯಾರೆಂಟಿಯನ್ನು ನಾವು ನೀಡಿದ್ದೇವೆ. ಇದಲ್ಲದೆ ಯುವ  ನ್ಯಾಯ ಗ್ಯಾರಂಟಿ ಅಡಿಯಲ್ಲಿ ಪದವಿ ಮುಗಿದಿರುವ ಯುವಕರಿಗೆ  ಒಂದು ವರ್ಷ  ತರಬೇತಿ ನೀಡುವುದಲ್ಲದೆ ಒಂದು ಲಕ್ಷ ರೂಪಾಯಿಯ ಗ್ಯಾರಂಟಿಯನ್ನು ಕೂಡ ಕೊಟ್ಟು ಅವರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.

ಯಾವುದೋ ಪುಣ್ಯಾತ್ಮ ಎಂಪಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದಲ್ಲದೆ, ಅದಕ್ಕಾಗಿ 400 ಲೋಕಸಭೆ ಸ್ಥಾನಗಳನ್ನ ಗೆಲ್ಲಿಸಿ ಕೊಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಹೀಗೆ ಮನವಿ ಮಾಡುತ್ತಿದ್ದಂತೆಯೇ ಬಿಜೆಪಿ ತನಗೂ ಆ ಸಂಸದನಿಗೂ ಯಾವುದೇ ಸಂಬಂಧ ಇಲ್ಲ. ಅದು ವೈಯಕ್ತಿಕ ಹೇಳಿಕೆ ಎಂದು ಜಾರಿಕೊಂಡಿದೆ. ನಾನು ಕೇಳುತ್ತೇನೆ.. ಬಿಜೆಪಿಯಿಂದ ಟಿಕೆಟ್ ಕೊಡದೆ, ಬಿಜೆಪಿ ಆತನನ್ನು ಗೆಲ್ಲಿಸಿಕೊಂಡು ಬರದೆ,ಆತ ಹೇಗೆ ಎಂಪಿಯಾದ ಎಂದು ಪ್ರಶ್ನಿಸಿದರು.

ಇದೆಲ್ಲವೂ ಜನರನ್ನು ದಾರಿ ತಪ್ಪಿಸದಕ್ಕಾಗಿ. ನೀ ಆಟ ಆಡು ನಾವು ನೋಡುತ್ತೇನೆ ಎನ್ನುವ ರೀತಿಯಲ್ಲಿದೆ ಎಂದು ಟೀಕಿಸಿದರು.

ಅದು ಅಲ್ಲದೆ ದೇಶದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಇನ್ನಷ್ಟು ಕೆಲಸಗಳನ್ನು ನೀಡಲಾಗುವುದು ಎಂದರು. ಈ ವೇಳೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ ಖರ್ಗೆ, ಶರಣಪ್ರಕಾಶ್ ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್,  ಎಂ.ವೈ. ಪಾಟೀಲ್,  ಬಿ ಆರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಚಂದ್ರಶೇಖರ್ ಪಾಟೀಲ್ ಹುಮ್ನಾಬಾದ್, ಅರವಿಂದ್ ಅರಳಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next