Advertisement

ಬೀದಿಬದಿ ವ್ಯಾಪಾರ ಸಂಚಾರ ತಲೆನೋವು

12:19 PM Apr 02, 2018 | |

ಪುತ್ತೂರು: ಆಗಿಂದಾಗ್ಗೆ ರಸ್ತೆ ಅಗಲೀಕರಣ ಮಾಡಬೇಕು ಎಂಬ ಮಾತು ಕೇಳಿಬರುತ್ತವೆ. ಇದಕ್ಕೂ ಮೊದಲು ನಡೆದಾಡಲು ಫುಟ್‌ಪಾತ್‌ ಬೇಕು ಎಂಬ ಆಲೋಚನೆ ಯಾರಿಗೂ ಹೊಳೆದೇ ಇಲ್ಲ.

Advertisement

ಸಂತೆ ದಿನವಾದ ಸೋಮವಾರ ಪುತ್ತೂರು ಪೇಟೆಯಲ್ಲಿ ದಟ್ಟನೆ ಹೆಚ್ಚು. ಆ ದಿನದ ಮಾತು ಹಾಗಿರಲಿ. ಉಳಿದ ದಿನಗಳಲ್ಲಾದರೂ ಸಲೀಸಾಗಿ ಪೇಟೆಯಲ್ಲಿ ಓಡಾಟ ಮಾಡಬಹುದು ಎಂದು ಆಲೋಚನೆ ಮಾಡುವಂತಿಲ್ಲ. ಕಾರಣ, ಉಳಿದ ದಿನಗಳಲ್ಲೂ ಪೇಟೆ ತುಂಬಾ ಜನಜಂಗುಳಿ ಇರುತ್ತದೆ. ಇದಕ್ಕೆ ಕಾರಣ, ಪುತ್ತೂರು ಪೇಟೆ ಕಿರಿದಾಗುತ್ತಾ ಸಾಗುತ್ತಿರುವುದು. ಇದಕ್ಕೆ ಪೂರಕವಾಗಿ, ಜನರಿಗೆ ಓಡಾಡಲು ಫುಟ್‌ಪಾತ್‌ ಇಲ್ಲದೇ ಇರುವುದು.

ಪುತ್ತೂರು ಪೇಟೆಯ ಯಾವುದೇ ಭಾಗಕ್ಕೆ ಹೋದರೂ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲೇ ನಡೆಯಬೇಕು. ಇರುವ ಸಣ್ಣ ಪುಟ್ಟ ಫುಟ್‌ಪಾತ್‌ ಬೀದಿಬದಿ ವ್ಯಾಪಾರಿಗಳ ಪಾಲಾಗಿವೆ. ಪಾದಚಾರಿಗಳಿಗೆ ಜಾಗವೇ ಇಲ್ಲ ಎಂಬಂತಾಗಿದೆ. ಪಾದಚಾರಿಗಳು ರಸ್ತೆಯಲ್ಲಿ ನಡೆಯುವ ಕಾರಣಕ್ಕೆ, ಇರುವ ಸಣ್ಣ ರಸ್ತೆ ವಾಹನಗಳಿಗೂ ಸಾಲುತ್ತಿಲ್ಲ.

ಫುಟ್‌ಪಾತ್‌ನಲ್ಲಿ ವ್ಯಾಪಾರ ನಡೆಸುವಂತಿಲ್ಲ ಎನ್ನುವುದು ನಗರಸಭೆ ಕಾನೂನು. ಈ ಹಿಂದೆ ಹಲವು ಬಾರಿ ಫುಟ್‌ ಪಾತ್‌ ವ್ಯಾಪಾರವನ್ನು ತೆರವುಗೊಳಿಸಲು ಸಹಾಯಕ ಆಯುಕ್ತರು ಹಾಗೂ ನಗರಸಭೆ ಕಾರ್ಯಾಚರಣೆ ನಡೆಸಿವೆ. ಆದರೆ ಕಾನೂನು ಜಾರಿಗೆ ಗಟ್ಟಿಯಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೆ, ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಇದರಿಂದಾಗಿ, ತೊಂದರೆ ಅನುಭವಿಸುವವರು ವಿದ್ಯಾರ್ಥಿಗಳು, ಅಮಾಯಕ ನಾಗರಿಕರು, ಪುಟಾಣಿ ಮಕ್ಕಳು.

Advertisement

Udayavani is now on Telegram. Click here to join our channel and stay updated with the latest news.

Next