Advertisement

ಬ್ರಹ್ಮೋಸ್‌ 4 ಸಾವಿರ ಕೋಟಿ ರೂ. ಸಂಸ್ಥೆ!

01:08 AM Jun 08, 2019 | Team Udayavani |

ನವದೆಹಲಿ: ಭಾರತ ಮತ್ತು ರಷ್ಯಾ ಮಧ್ಯದ ಒಪ್ಪಂದದ ಮೂಲಕ ಆರಂಭವಾದ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ತಯಾರಿಕೆ ಘಟಕ ಈಗ 40 ಸಾವಿರ ಕೋಟಿ ರೂ. ಮೌಲ್ಯದ್ದಾಗಿ ರೂಪುಗೊಂಡಿದೆ. ಈ ಸಂಸ್ಥೆ 1998ರಲ್ಲಿ 1300 ಕೋಟಿ ರೂ. ಬಂಡವಾಳದಲ್ಲಿ ಶುರುವಾಗಿತ್ತು. ಆಗ ರಷ್ಯಾದ ಎನ್‌ಪಿಒ ಮಶಿನೋ ಸ್ತ್ರೊಯೆನಿಯಾ ಹಾಗೂ ಡಿಆರ್‌ಡಿಒ ಜೊತೆಗೆ ಒಪ್ಪಂದ ಮಾಡಿಕೊಂಡು ಸಂಸ್ಥೆ ಸ್ಥಾಪಿಸಲಾಗಿತ್ತು.

Advertisement

ಬ್ರಹ್ಮೋಸ್‌ ಏರೋಸ್ಪೇಸ್‌ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಮಿಶ್ರಾ ಈ ಬಗ್ಗೆ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದು, ಇನ್ನಷ್ಟು ಕ್ಷೇತ್ರಗಳಲ್ಲಿ ನಾವು ಸೂಪರ್‌ಸಾನಿಕ್‌ ಕ್ಷಿಪಣಿ ಯೋಜನೆಗಳ ರೀತಿಯಲ್ಲೇ ಹೆಜ್ಜೆಯಿಡಬೇಕಿದೆ. ಇದರಿಂದ ದೇಶದ ರಕ್ಷಣೆ ಹಾಗೂ ಇತರ ವಿಭಾಗಗಳಲ್ಲಿನ ಪರಿಣಿತಿ ಮತ್ತು ಕೌಶಲ ವೃದ್ಧಿಸುತ್ತದೆ ಎಂದಿದ್ದಾರೆ.

ರಷ್ಯಾದ ವಿಜ್ಞಾನಿಗಳಿಗೂ ನಾವು ಸಹಾಯ ಮಾಡಿದ್ದೇವೆ. ಈಗ ನಮ್ಮೊಂದಿಗೆ 200 ಕಂಪನಿಗಳು ವಹಿವಾಟು ನಡೆಸುತ್ತಿವೆ. ನೇರವಾಗಿ ಹಾಗೂ ಪರೋಕ್ಷವಾಗಿ 20 ಸಾವಿರಕ್ಕೂ ಹೆಚ್ಚು ಜನ ರಿಗೆ ಉದ್ಯೋಗ ದೊರಕಿದೆ ಎಂದೂ ಸುಧೀರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next