Advertisement
ಕಳೆದ 2 ದಿನಗಳಲ್ಲಿ 2 ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿ ದಂತಾಗಿದೆ. ಈ ಪರೀಕ್ಷೆಯಲ್ಲಿ ಡಿಆರ್‌ಡಿಒ ಮತ್ತು ನೌಕಾ ದಳದ ಸಿಬಂದಿ ಭಾಗಿಯಾಗಿದ್ದರು. ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಡಿಆರ್‌ಡಿಒ, ಸೆ.12, 13ರಂದು ಪರೀಕ್ಷೆ ನಡೆಸಲಾಗಿದೆ. ನೆಲದಿಂದ ಚಿಮ್ಮಿ ಆಕಾಶದಲ್ಲಿನ ಗುರಿ ನಿಖರವಾಗಿ ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳು ಹೊಂದಿವೆ. ಅಲ್ಲದೇ ಕಡಿಮೆ ಎತ್ತರದಲ್ಲಿ ಅತೀ ವೇಗದಲ್ಲಿ ಗುರಿಯನ್ನು ತಲುಪುವಲ್ಲೂ 2 ಕ್ಷಿಪಣಿಗಳು ಯಶಸ್ವಿಯಾಗಿವೆ.
ಸೀಮಿತ ವ್ಯಾಪ್ತಿಯ ಕ್ಷಿಪಣಿಗಳನ್ನು ಆಕಾಶದಲ್ಲಿ ಹಾರುತ್ತಿರುವ ಕ್ಷಿಪಣಿ, ವಿಮಾನ, ಡ್ರೋನ್ ನಾಶಕ್ಕೆ ಬಳಕೆ ಮಾಡಲಾಗುತ್ತದೆ. ನೆಲದಿಂದ ಉಡಾವಣೆಗೊಳ್ಳುವ ಈ ಕ್ಷಿಪಣಿ 3.93 ಮೀ. ಉದ್ದ, 170 ಕೆ.ಜಿ. ತೂಗುತ್ತವೆ. ಅವುಗಳಿಗೆ ಬೃಹತ್ ಸ್ಫೋಟಕಗಳ ಅಳವಡಿಸಬಹುದು.