Advertisement
ನಗರದ ಜೋಡು ವೀರಾಂಜನೇಯ ದೇವಸ್ಥಾನ ಆವರಣದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರವಿವಾರ ಸಂಜೆ ಹಮ್ಮಿಕೊಂಡಿದ್ದ ವಿಪ್ರೋತ್ಸವ ಕಾರ್ಯಕ್ರಮದ ನಿಮಿತ್ತ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಪೂಜ್ಯರು ಮಾತನಾಡಿದರು.
Related Articles
Advertisement
ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಸತ್ಯನಾರಾಯಣ ಮುಜುಮದಾರ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಪದವಿ ಪುರಸ್ಕೃತರನ್ನು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಹಾಸಭಾ ಉಪಾಧ್ಯಕ್ಷಾ ಆರ್.ಲಕ್ಷ್ಮೀಕಾಂತ, ವಿದ್ವಾಂಸರಾದ ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ, ಮಂತ್ರಾಲಯದ ವಿದ್ಯಾಪೀಠದ ಪ್ರಾಚಾರ್ಯ ಎಸ್.ವಾದಿರಾಜ ಆಚಾರ್ಯ ಮಾತನಾಡಿದರು.
ಅಖೀಲ ಕರ್ನಾಟಕ ವಕ್ತಾರ ಮ.ಸ. ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ಡಾ| ಆನಂದ ಫಡ್ನೀಸ್, ನರಸಿಂಗರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ್, ಜಗನ್ನಾಥ ಕುಲಕರ್ಣಿ, ಗಿರೀಶ ಕನಕವೀಡು, ಡಾ| ಪ್ರಮೋದ ಕಟ್ಟಿ, ವೀಣಾರಾಜೇಂದ್ರ ಸೇರಿ ಸಮಾಜದ ಅನೇಕರು ಪಾಲ್ಗೊಂಡಿದ್ದರು.
ಕಾಯಕದ ಬಗ್ಗೆ ಇರುವ ಸಂಕೋಚಗಳನ್ನು ಬದಿಗೊತ್ತಿ. ಧರ್ಮಕ್ಕೆ ವಿರುದ್ಧವಾದದ್ದನ್ನು ಬಿಟ್ಟು ಎಲ್ಲ ಕೆಲಸಗಳು ಶ್ರೇಷ್ಠ. ಬ್ರಾಹ್ಮಣರು ಎಂದಾಕ್ಷಣ ನಮಗೆ ಮೀಸಲಾತಿ ಸಿಗುವುದಿಲ್ಲ, ಸೂಕ್ತ ಅವಕಾಶಗಳಿಲ್ಲ ಎಂಬ ನೆಪ ಹೇಳದೆ ಕೆಲಸ ಮಾಡಬಲ್ಲೆವು ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಿರಿ.ಶ್ರೀ ಸುಬುಧೇಂಧ್ರ ತೀರ್ಥರು, ಪೀಠಾಧಿಪತಿ, ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ