Advertisement

Devara: ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಕೋಟಿ- ಕೋಟಿ ಗಳಿಸಿದ ʼದೇವರʼ; ಎಲ್ಲಿ ಎಷ್ಟು ಗಳಿಕೆ?

03:12 PM Sep 24, 2024 | Team Udayavani |

ಹೈದರಾಬಾದ್:‌ ಟಾಲಿವುಡ್‌(Tollywood) ನಲ್ಲಿ ʼದೇವರʼ(Devara Part -1) ಹವಾ ಜೋರಾಗಿ ಬೀಸುತ್ತಿದೆ. ʼಆರ್‌ ಆರ್‌ ಆರ್‌ʼ ಬಳಿಕ ಮೊದಲ ಬಾರಿ ಜೂ.ಎನ್‌ ಟಿಆರ್‌ (Jr. NTR) ಬಿಗ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಪ್ಯಾನ್‌ ಇಂಡಿಯಾದಲ್ಲಿ (Pan india) ʼದೇವರʼ ರಿಲೀಸ್‌ ಆಗಲಿದೆ. ಬಿಡುಗಡೆಗೆ ಕೇವಲ 4 ದಿನಗಳ ಮಾತ್ರ ಬಾಕಿ ಉಳಿದಿದೆ. ದೇಶದೆಲ್ಲೆಡೆ 1,300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.

ಇತ್ತೀಚೆಗೆ ಸಿನಿಮಾ ತಂಡ ದೊಡ್ಡಮಟ್ಟದಲ್ಲಿ ಪ್ರೀ- ರಿಲೀಸ್‌ ಇವೆಂಟ್‌ ನಡೆಸುವ ಯೋಜನೆಯನ್ನು ಹಾಕಿಕೊಂಡು ಕೊನೆಕ್ಷಣದಲ್ಲಿ ರದ್ದು ಮಾಡಿದ್ದರಿಂದ ಸಾವಿರಾರು ಜೂ.ಎನ್‌ ಟಿಆರ್‌ ಅಭಿಮಾನಿಗಳು ನಿರಾಶರಾಗಿದ್ದಾರೆ.

ಈ ನಡುವೆ ಚಿತ್ರತಂಡ ಸೆ.23ರಂದು ʼದೇವರʼ ಅಡ್ವಾನ್ಸ್‌ ಬುಕಿಂಗ್‌ (Advance Booking) ಆರಂಭಿಸಿದೆ. ಮೊದಲ ದಿನವೇ ಲಕ್ಷ ಲಕ್ಷ ಟಿಕೆಟ್‌ ಸೇಲ್‌ ಆಗಿದ್ದು, ಕೋಟಿ – ಕೋಟಿ ಹಣವನ್ನು ಚಿತ್ರ ಗಳಿಸಿದೆ.

Advertisement

ಮುಂಗಡ ಬುಕಿಂಗ್‌ನಲ್ಲಿ ಭಾರತದಾದ್ಯಂತ 8 ಕೋಟಿ ರೂಪಾಯಿಯನ್ನು ʼದೇವರʼ ಗಳಿಸಿದೆ ಎಂದು ವರದಿಯಾಗಿದೆ.

ಇತ್ತ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಿಗೆ ರಾಜ್ಯದಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲು ಅನುಮತಿ ನೀಡಿದ್ದರಿಂದ ʼದೇವರʼ ಟಿಕೆಟ್‌ ಬೆಲೆಯಲ್ಲಿ ಏರಿಕೆ ಆಗಿದ್ದರೂ ಜನ ಅದನ್ನು ಲೆಕ್ಕಿಸದೆ ಸಿನಿಮಾದ ಟಿಕೆಟ್‌ ಖರೀದಿಸಿದ್ದಾರೆ.

8 ಕೋಟಿಯಲ್ಲಿ ಆಂಧ್ರಪ್ರದೇಶವೊಂದರಲ್ಲೇ 1,187 ಶೋಗಳ 5.10 ಕೋಟಿ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ತೆಲಂಗಾಣದಲ್ಲಿ 11.58 ಲಕ್ಷ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿದ್ದು, ಇಲ್ಲಿ 25 ಶೋಗಳಿವೆ. ಮಧ್ಯರಾತ್ರಿಯಿಂದಲೇ ಇಲ್ಲಿ ಶೋಗಳು ಇರಲಿವೆ.

ಕರ್ನಾಟಕದಲ್ಲಿ 451 ಶೋಗಳಿದ್ದು, ಇಲ್ಲಿಯವರೆಗೆ ಸುಮಾರು 2.36 ಕೋಟಿ ರೂ. ಮೌಲ್ಯ ಟಿಕೆಟ್‌ ಸೇಲ್‌ ಆಗಿದೆ ಎಂದು ವರದಿಯಾಗಿದೆ.

ನ್ಯೂಯಾರ್ಕ್ ಸೇರಿದಂತೆ ಅಮೆರಿಕಾದಲ್ಲಿ ಈಗಾಗಲೇ ʼದೇವರʼ ಅಡ್ವಾನ್ಸ್‌ ಬುಕಿಂಗ್‌ ವಿಚಾರದಲ್ಲಿ ದಾಖಲೆ ಬರೆದಿದೆ.

ಕೊರಟಾಲ ಶಿವ ನಿರ್ದೇಶನದ ʼದೇವರʼ ಚಿತ್ರವು ಇದೇ ಶುಕ್ರವಾರ (ಸೆಪ್ಟೆಂಬರ್ 27 ರಂದು) ಬಿಡುಗಡೆಯಾಗಲಿದೆ. ಜೂನಿಯರ್ ಎನ್‌ಟಿಆರ್ ಜತೆ ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ತೆರೆ ಹಂಚಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next