Advertisement
ಅವರು ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ಜರಗಿದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ನ ಕೋಟೇಶ್ವರ ವಲಯದ ವಾರ್ಷಿಕ ಅಧಿಧಿವೇಶನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ತಾಲೂಕು ಪರಿಷತ್‌ನ ಅಧ್ಯಕ್ಷ ಟಿ.ಕೆ. ಮಹಾಬಲೇಶ್ವರ ಭಾಟ ಮಾತನಾಡಿ, ಪರಿಷತ್‌ನ ಪ್ರತಿವಲಯದಲ್ಲೂ ಸಂಸ್ಕೃತ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಮಚಂದ್ರ ಹತ್ವಾರ್ ಬೀಜಾಡಿ ಮತ್ತು ಅರ್ಚಕ ನಾಗರಾಜ ಅಡಿಗ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ರಾಮಚಂದ್ರ ಹತ್ವಾರ್ ಮಾತನಾಡಿದರು ಶ್ರೀ ಕೋದಂಡರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದೊಡ್ಮನೆ ನಾಗೇಂದ್ರ ಭಟ್, ಉದ್ಯಮಿಗಳಾದ ಎನ್.ರಾಘವೇಂದ್ರ ರಾವ್, ಜಿ. ಶ್ರೀನಿವಾಸ ರಾವ್, ಪರಿಷತ್ ಪೂರ್ವಾಧ್ಯಕ್ಷ ಕೆ. ಶ್ರೀನಿವಾಸ ಹೆಬ್ಟಾರ್, ಕೃಷ್ಣದೇವ ಕಾರಂತ ಕೋಣಿ, ವಿವಿಧ ವಲಯ ಪದಾಧಿಧಿಕಾರಿಗಳು ಉಪಸ್ಥಿತರಿದ್ದರು. ವಲಯ ಗೌರವಾಧ್ಯಕ್ಷ ಬಿ. ವಾದಿರಾಜ ಅಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಅಧ್ಯಕ್ಷ ಎಚ್. ಶ್ರೀನಿವಾಸ ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ ಅಡಿಗ ವರದಿ ವಾಚಿಸಿದರು. ಖಜಾಂಚಿ ವಾಸುದೇವ ರಾವ್ ಆಯ-ವ್ಯಯ ವಿವರ ನೀಡಿದರು. ನೂತನ ಸದಸ್ಯರನ್ನು ಗೌರವಿಸಲಾಯಿತು. ಗೌರವ ಸಲಹೆಗಾರ ವೈ.ಎನ್. ವೆಂಕಟೇಶ ಮೂರ್ತಿ ಭಟ್ ಮತ್ತು ವಿಮಲ ಭಟ್ ಕಾರ್ಯಕ್ರಮ ನಿರೂಪಿಸಿ, ಮಹಿಳಾ ವೇದಿಕೆ ಕಾರ್ಯದರ್ಶಿ ವಸಂತಿ ಮಿತ್ಯಾಂತ ವಂದಿಸಿದರು.