Advertisement
ಶ್ರೀ ಶಂಕರ ಮಠದ ಶ್ರೀ ಶಂಕರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ವಿವಿಧ ಬ್ರಾಹ್ಮಣ ಸಂಘಟನೆಗಳ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಬ್ರಾಹ್ಮಣರ ಬೃಹತ್ ಸಮಾವೇಶ ಹಾಗೂ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಮಾರಂಭ ವೇ.ಮೂ. ದತ್ತಂಭಟ್ ತೆಂಬದಮನಿ ಹಾಗೂ ಗದಗ ಬೇಟಗೇರಿ ಬ್ರಹ್ಮ ವೃಂದದವರ ವೇದಘೋಷದೊಂದಿಗೆ ಆರಂಭಗೊಂಡಿತು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಗದಗ ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷರಾದ ವೇ.ಮೂ. ರತ್ನಾಕರ ಭಟ್ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಹುಯಿಲಗೋಳ ಸ್ವಾಗತಿಸಿ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಮಂಡಳಿ ಸದಸ್ಯರಾದ ಗುರುರಾಜ ಬಳಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|ದತ್ತಪ್ರಸನ್ನ ಪಾಟೀಲ ನಿರೂಪಿಸಿ, ಪ್ರೊ|ಪ್ರಶಾಂತ ಪಾಟೀಲ ವಂದಿಸಿದರು.
ವೇದಿಕೆಯ ಮೇಲೆ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಜಯಸಿಂಹ, ಕಾರ್ತಿಕ ಬಾಪಟ್, ವಿಶ್ವನಾಥ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ವಸಂತ ನಾಡಜೋಶಿ, ಗದಗ ಜಿಲ್ಲೆ ವಿವಿಧ ತಾಲೂಕುಗಳ ವಿಪ್ರ ಮುಖಂಡರಾದ ಅಶೋಕ ಕುಲಕರ್ಣಿ, ಪ್ರಶಾಂತ ಜೋಶಿ, ಸಂಜೀವ ಜೋಶಿ, ಗೋಪಾಲ ಫಡ್ನಿಸ್, ದತ್ತಾತ್ರೇಯ ಜೋಶಿ, ವಿನಾಯಕ ಸದರಜೋಶಿ, ಸತೀಶ ಹುಯಿಲಗೋಳ ಗದಗ ಜಿಲ್ಲಾ ಬ್ರಾಹ್ಮಣ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಗಿರೀಶ ಕುಲಕರ್ಣಿ, ಜಿಲ್ಲೆಯ ವಿಪ್ರ ಮುಖಂಡರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ರಾಜಗೋಪಾಲಾಚಾರ್ ಮಳಗಿ, ವೆಂಕಟೇಶ ಗುಡಿ, ಎಚ್ .ಡಿ.ಪಾಟೀಲ, ಪ್ರೊ.ಪಿ.ಆರ್.ಇನಾಮದಾರ, ಪ್ರೊ.ಅನೀಲ ವೈದ್ಯ, ಎಚ್.ಡಿ.ಪಾಟೀಲ, ಮುಕುಂದ ಪೋತ್ನಿಸ್, ಕೃಷ್ಣಮೂರ್ತಿ ಪಾಟೀಲ, ವೆಂಕಟೇಶ ಕುಲಕರ್ಣಿ, ಜಂತ್ಲಿಶಿರೂರ, ರಮೇಶ ಪೂಜಾರ, ಕಲಾವತಿ ಅಲಬೂರ, ರವೀಂದ್ರ ಜೋಶಿ, ಆನಂದ ಕುಲಕರ್ಣಿ, ಅನೀಲ ತೆಂಬದಮನಿ, ಪ್ರಹ್ಲಾದಾಚಾರ್ ನಿಲೂಗಲ್, ಪುರಾಣಿಕ ರಾಜೀವ ಉಮರ್ಜಿ, ಜೋತಿ ಗಜೇಂದ್ರಗಡ ಸೇರಿದಂತೆ ನೂರಾರು ವಿಪ್ರ ಬಾಂಧವರು ಪಾಲ್ಗೊಂಡಿದ್ದರು.