Advertisement

ಬ್ರಾಹ್ಮಣರು ಸ್ವಾವಲಂಬಿಗಳು: ಕಳಲೆ ಕೇಶವ ಮೂರ್ತಿ

01:13 PM Sep 25, 2017 | |

ನಂಜನಗೂಡು: ಬ್ರಾಹ್ಮಣರು ಅನಾದಿಕಾಲದಿಂದಲೂ ಸಮಾಜದಲ್ಲಿನ ಯಾರ ಮೇಲೂ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ಬದುಕಿದವರು ಎಂದು ನಂಜನಗೂಡು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಳಲೆ ಎನ್‌. ಕೇಶವ ಮೂರ್ತಿ ಹೇಳಿದರು. ನಗರದ ಬ್ರಾಹ್ಮಣ ಧರ್ಮ ಸಹಾಯಕ ಸಭಾ ದ ಆವರಣದಲ್ಲಿ ಸಭಾವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Advertisement

ಹಿಂದಿನಿಂದಲೂ ಬ್ರಾಹ್ಮಣರು ಜಾnನಾರ್ಜನೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಅದರಲ್ಲಿ ಯಶಸ್ವಿ ಸ್ವಾವಲಂಬಿ ಜೀವನ ನಡೆಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಸಹ ಬ್ರಾಹ್ಮಣ ವರ್ಗದವರು ಉನ್ನತ ಸ್ಥಾನದಲ್ಲಿದ್ದವರೇ, ಗುಂಡು ರಾವ್‌, ರಾಮಕೃಷ್ಣ ಹೆಗ್ಡೆಯಂತಹ ನಾಯಕರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇಂದಿನ ಸಮಾರಂಭದ ಉದ್ಘಾಟಕರಾದ ಸುರೇಶ್‌ ಕುಮಾರ್‌, ದೇಶಪಾಂಡೆ ಯವರು ವಿವಿಧ ಸರ್ಕಾರದ ಸಂಪುಟ ಸಚಿವರಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಕೇಶವ ಮೂರ್ತಿ ತಿಳಿಸಿದರು.

ಉಪಸ್ಥಿತರಿದ್ದ ಸಮಾಜ ಸೇವಕ, ದಾನಿಗಳಾದ ಯು.ಎನ್‌.ಪದ್ಮನಾಭರಾವ್‌ ಮಾತನಾಡಿ, ಪ್ರತಿಭಾನ್ವಿತ ಮಕ್ಕಳ ಪುರಸ್ಕಾರ ನಿಜಕ್ಕೂ ಸ್ವಾಗತಾರ್ಹ, ಅದರೆ ಸಭಾದ ಅಧ್ಯಕ್ಷರು ಶೈಕ್ಷಣಿಕವಾಗಿ ಶಾಲೆಯೊಂದನ್ನು ಆರಂಭಿಸಬೇಕು, ಇದರಿಂದ ವಿಪ್ರ ಮಕ್ಕಳಿಗಲ್ಲದೆ ಇತರೆ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸಿದಂತಾಗುತ್ತದೆ ಎಂದರು.

ತಾಲೂಕು ಬ್ರಾಹ್ಮಣ ಮಹಾಸಭಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದೆ ಆದಲ್ಲಿ, ಭೂಮಿಪೂಜೆಯಂದೇ 1 ಲಕ್ಷ ರೂ. ನೀಡುವುದಾಗಿ ಯುಎನ್‌ಪಿ ಘೋಷಿಸಿದರು. ಶಾಸಕ ಸುರೇಶ್‌ ಕುಮಾರ್‌, ಇಂದಿನ ದಿನಗಳಲ್ಲಿ ಪ್ರತಿಭೆಗೆ ವಿಫ‌ುಲವಾದ ಅವಕಾಶಗಳಿವೆ ಅದನ್ನು ಬಳಸಿಕೊಂಡು ಪ್ರತಿಭಾ ವಂತರು ಸಮಾಜದ ಆಸ್ತಿಯಾ ಗಬೇಕು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಡುಬಡತನದಿಂದ ಸಾಧನೆ ಮಾಡಿದವರನ್ನು ಸ್ಮರಿಸಿದರು.

ಈ ಭಾಗದಿಂದಲೂ ಸಹ ಪ್ರತಿಭಾವಂತರಿದ್ದಾರೆ, ಅಂತಹ ವಿದ್ಯಾರ್ಥಿಗಳು ಮುಂದೆ ಐಎಎಸ್‌ ಹಾಗೂ ಸಿಎನಲ್ಲಿ ದೇಶವೇ ತಮ್ಮತ್ತ ತಿರುಗಿ ನೋಡುವಂತಹ ದಿನ ಬರಲಿ ಶಾಸಕರು ಹಾರೈಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ 90%ಗೂ ಹೆಚ್ಚು ಅಂಕಗಳಿಸಿದ ಆದಿತ್ಯ ಕಶ್ಯಪ್‌, ಸಂಜಯ ಶ್ರೀನಿವಾಸನ್‌, ಸಿಂಚನಾ, ಸಮುದ್ಯತಾ, ಸಹನಾ ಎಸ್‌, ರಾವ್‌, ವೈಷ್ಣವಿ.ಎನ್‌ಕೆಎಸ್‌ ವನಿಶ್ರೀ, ಎನ್‌.ಅಕ್ಷತಾ, ಐಶ್ವರ್ಯ ಶ್ರೀರಾಮ್‌ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಶ್ರೀವೈಷ್ಣವಿ ವಿದ್ಯಾರ್ಥಿಯನ್ನು ಪುರಸ್ಕರಿಸಲಾಯಿತು.

Advertisement

“ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ಪುರಸ್ಕೃತರಾದ ಸತೀಶ ದಳವಾಯಿ ಅವರನ್ನು ಸನ್ಮಾನಿಸಲಾಯಿತು. ನಗರಸಭೆಯ ಮಾಜಿ ಅಧ್ಯಕ್ಷ ಎನ್‌.ನರಸಿಂಹಸ್ವಾಮಿ  ನಿರ್ದೇಶಕರಾದ ರಮೇಶ, ರಘು, ಸುಧೀಂದ್ರ, ಸಿರಿಗನ್ನಡ ವೇದಿಕೆಯ ಸೌಗಂಧಿಕ ಜೊಯಿಸ್‌,ಗಾಯತ್ರಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಸುಧಾಮಣಿ, ಸಂಸ್ಕಾರ ಭಾರತೀಯ ಗೋಪಿನಾಥ್‌ ಸೇರಿದಂತೆ ಹಲವರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next