ಹಾಗೂ ಅರ್ಥಪೂರ್ಣವಾಗಿ ಆಚರಿಸುವುದು ಸೇರಿದಂತೆ ಸಮಾಜದ ಹಿತದಿಂದ ವಿವಿಧ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಶುಕ್ರವಾರ ಇಲ್ಲಿ ನಡೆದ ಬ್ರಾಹ್ಮಣ ಸಮಾಜ ಕಲ್ಯಾಣ ಟ್ರಸ್ಟ್ ಸಭೆಯಲ್ಲಿ ನಿರ್ಧರಿಸಲಾಯಿತು.
Advertisement
ನಗರದ ಟ್ರಸ್ಟ್ ಕಚೇರಿಯಲ್ಲಿ ಸಂಘದ ಗೌರವಾಧ್ಯಕ್ಷ ರಮೇಶ ಕುಲಕರ್ಣಿ, ಅಧ್ಯಕ್ಷ ಡಾ| ಮಹೇಶ ಪತಗಿ ನೇತೃತ್ವದಲ್ಲಿಸಭೆ ನಡೆಯಿತು. ಫೆಬ್ರವರಿ ಕೊನೆ ವಾರ ರಂಗಮಂದಿರದಲ್ಲಿ ಬ್ರಾಹ್ಮಣ ಸಮ್ಮೇಳನ ನಡೆಸಿ, ಈ ಮೂಲಕ ಸಮಾಜಪರ
ಕೆಲಸಗಳಿಗೆ ವೇಗ ನೀಡಲು ನಿರ್ಧರಿಸಲಾಯಿತು. ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ, ಅನಂತಕುಮಾರ,
ರಾಜ್ಯ ಸಚಿವರಾದ ಆರ್.ವಿ. ದೇಶಪಾಂಡೆ, ರಮೇಶಕುಮಾರ, ಶಾಸಕರಾದ ಸುರೇಶಕುಮಾರ, ವೈಎಸ್‌ವಿ ದತ್ತ ಸೇರಿ ಸಮಾಜದ ಪ್ರಮುಖರಿಗೆ, ಶ್ರೀಗಳಿಗೆ ಸಮ್ಮೇಳನಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ದಾಖಲಿಸಬೇಕೆಂದು ಸಭೆ ಆಗ್ರಹಿಸಿತು. ತಲೆಬುಡವಿಲ್ಲದ ಹೇಳಿಕೆ ಕೊಡುವವರ ವಿರುದ್ಧ ಹೋರಾಟ ಮಾಡಲು ಸಹ
ನಿರ್ಣಯ ಕೈಗೊಳ್ಳಲಾಯಿತು. ಸಮಾಜವನ್ನು ಕೀಳಾಗಿ ನೋಡುತ್ತಿರುವವರಿಗೆ ಪಾಠ ಕಲಿಸಬೇಕಿದೆ. ಹೀಗಾಗಿ ಸಮಾಜದ ಪ್ರತಿಯೊಬ್ಬರು
ಒಂದಾಗಿ ಸಂಘಟನೆ ಬಲಿಪಡಿಸೋಣ. ಬರುವ ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ
ಮಾಡೋಣ ಎಂದು ರಮೇಶ ಕುಲಕರ್ಣಿ, ಡಾ| ಮಹೇಶ ಪತಗಿ ಹೇಳಿದರು. ಪ್ರಮುಖರು ತಮ್ಮ ಸಲಹೆ ಸೂಚನೆ ನೀಡಿದರು.
Related Articles
ಹಣಮಂತರಾವ್, ಲಕ್ಷ್ಮೀಕಾಂತ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಡಾ| ಪಿ.ಎಂ.ದೇಶಪಾಂಡೆ, ನರೇಶ ಪಾಠಕ್, ದೇವಿದಾಸ ಜೋಶಿ, ಸದಾನಂದ ಜೋಶಿ, ಎಂ.ಎಸ್. ಕುಲಕರ್ಣಿ, ಉಮೇಶ ಪಾಟೀಲ, ಗುರುನಾಥರಾವ್ ಪತಗಿ, ಗುರುರಾಜ ಕುಲಕರ್ಣಿ, ಎಸ್. ಎಂ. ಕುಲಕರ್ಣಿ, ರಾಘವೇಂದ್ರ, ವೆಂಕಟೇಶ ದೇಸಾಯಿ, ಸಂತೋಷ ಸಂತಪುರಕರ, ಶ್ರೀರಂಗ ಹಿಪ್ಪಳಗಾಂವಕರ, ಸುಧಿಧೀರ ಕುಲಕರ್ಣಿ, ಮಹೇಶ, ಕೆ.ನಾಗನಾಥ ಇದ್ದರು.
Advertisement