Advertisement

ದೇಹ, ಮನಸ್ಸಿನ ಆರೋಗ್ಯಕ್ಕಿರಲಿ ಬ್ರಾಹ್ಮಿ ಮುಹೂರ್ತ

03:28 PM Feb 25, 2021 | Team Udayavani |

ಪ್ರತಿಯೊಂದು ನಂಬಿಕೆ, ಆಚರಣೆಗಳ ಹಿಂದೆ ಒಂದೊಂದು ಕಾರಣ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಆ ಕಾರಣ ತಿಳಿಯದೆ ನಾವದನ್ನು ಮೂಢನಂಬಿಕೆಯೆಂದು ಕರೆಯುತ್ತೇವೆ. ಆದರೆ ನಿಜವಾದ ಕಾರಣ ತಿಳಿದರೆ ನಮ್ಮ ಹಿರಿಯರ ನಂಬಿಕೆ, ಆಚರಣೆಗಳ ಹಿಂದೆ ಎಂಥ ಮಹತ್ವದ ಚಿಂತನಾಶಕ್ತಿ ಇತ್ತೆಂಬುದನ್ನು ಕಾಣಬಹುದು.

Advertisement

ಇದನ್ನೂ ಓದಿ:ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಹಿರಿಯರು ಆಚರಿಸಿಕೊಂಡು ಬಂದ ನಂಬಿಕೆ, ಆಚಾರವಿಚಾರಗಳಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದನ್ನು ನಾವು ಕಾಣುತ್ತೇವೆ. ಆದರೆ ಈಗಿನ ಒತ್ತಡದ ಬದುಕಿನಲ್ಲಿ ಇದು ಸಾಧ್ಯವಿಲ್ಲ ಎನ್ನುವವರೇ ಅಧಿಕ. ಅಲ್ಲದೇ ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ಏಳುವ ಮನಸ್ಸು
ಯಾರು ತಾನೇ ಮಾಡಿಯಾರು? ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದಾಗುವ ಆರೋಗ್ಯ ಲಾಭಕ್ಕಾದರೂ ನಾವು ಈ ಸಂದರ್ಭದಲ್ಲಿ ಏಳುವ ಅಭ್ಯಾಸ
ಮಾಡಿಕೊಳ್ಳುವುದು ಉತ್ತಮ.

ಹಿಂದೂ ಶಾಸ್ತ್ರ ಸಂಪ್ರದಾಯದಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಹೆಚ್ಚು ಪ್ರಾಮುಖ್ಯ ನೀಡಲಾಗಿದೆ. ಹೀಗಾಗಿ ಹಿರಿಯರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಮ್ಮ ನಿತ್ಯ ಕರ್ಮಗಳೊಂದಿಗೆ ಕಿರಿಯರನ್ನೂ ಎಬ್ಬಿಸಲು ಪ್ರಾರಂಭಿಸುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು ಎನ್ನುವ ನಂಬಿಕೆ ಅವರದ್ದು.

ಬ್ರಾಹ್ಮಿಮುಹೂರ್ತದಲ್ಲಿ ಎದ್ದೇಳುವುದರಿಂದ ದೈಹಿಕ ಮಾನಸಿಕ ಆರೋಗ್ಯಕ್ಕೂ ಅತ್ಯುತ್ತಮ ಎನ್ನುತ್ತದೆ ಸಂಶೋಧನೆಗಳು. ಈ ವೇಳೆ ಪರಿಸರ ಮಾಲಿನ್ಯದಿಂದ
ಮುಕ್ತವಾಗಿರುತ್ತದೆ. ಆಮ್ಲಜನಕರ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಬಹುದು.

Advertisement

ರಾತ್ರಿ ವಿಶಾಂತ್ರಿ ಪಡೆದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ದೇಹ ಮತ್ತು ಮನಸ್ಸು ಹೆಚ್ಚು ಉಲ್ಲಾಸದಿಂದ ಇರಲು ಸಾಧ್ಯವಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದುವುದರಿಂದ ಸುಲಭವಾಗಿ ಅರ್ಥೈಸಿಕೊಳ್ಳಲು ಮತ್ತು ಹೆಚ್ಚು ಕಾಲ ನೆನಪಿನಲ್ಲಿ ಇರಿಸಲು ಸಾಧ್ಯವಿದೆ ಎನ್ನಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next