Advertisement
ಸೆ. 19ರಂದು ಬ್ರಹ್ಮಾವರದಿಂದ ಹೊರಟು ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮೂಲಕ 2,800 ಕಿ.ಮೀ. ದೂರದ ಜಮ್ಮು ಕಾಶ್ಮೀರದ ಪಠಾಣ್‌ಕೋಟ್‌ಗೆ ಸೋಮವಾರ ತಲುಪಿದ್ದಾರೆ. ಮಳೆ, ಬಿಸಿಲಿನ ನಡುವೆ ಪ್ರತೀದಿನ ಗಂಟೆಗೆ ಐದಾರು ಕಿ.ಮೀ.ಯಂತೆ 50 ಕಿ.ಮೀ. ಕ್ರಮಿಸುತ್ತಿದ್ದೆ ಎಂದು ಅವರು ಹೇಳುತ್ತಾರೆ.
Related Articles
Advertisement
ಹರ್ಷೇಂದ್ರ ಅವರ ಪಯಣದ ಮೂಲ ಉದ್ದೇಶ ಡ್ರೀಮ್‌ವಾಕ್ ಪರಿಕಲ್ಪನೆ ಅಡಿಯಲ್ಲಿ ತುಳುನಾಡು ಬಾವುಟದ ಜತೆಗೆ ಕಾಶ್ಮೀರ ತಲುಪುವುದು ಮತ್ತು ಅಲ್ಲಿ ಹುಲಿವೇಷ ತೊಟ್ಟು ಪ್ರದರ್ಶಿಸುವುದಾಗಿತ್ತು. ಅದರಂತೆ ಮಂಗಳವಾರ ಉತ್ಥಾನದ್ವಾದಶಿ ದಿನ ಅವರ ಕನಸು ಈಡೇರಿದ್ದು, ಜಮ್ಮು ಕಾಶ್ಮೀರ ಗಡಿ ಭಾಗ ಲಕನ್‌ಪುರ್ ಎಂಬಲ್ಲಿ ಸ್ಥಳೀಯ ಪೈಂಟರ್‌ಗಳನ್ನು ಹುಡುಕಿ ಹುಲಿವೇಷ ತೊಟ್ಟಿದ್ದಾರೆ. ಹುಲಿವೇಷಕ್ಕೆ ಬೇಕಾದ ಪರಿಕರಗಳನ್ನು ಇವರು ಮನೆಯಿಂದಲೇ ಕೊಂಡೊಯ್ದಿದ್ದರು. ನೂರಾರು ಮಂದಿ ಸ್ಥಳೀಯರು ಒಟ್ಟುಗೂಡಿ ಹುಲಿವೇಷ ಕಂಡು ಅಚ್ಚರಿ ಜತೆಗೆ ಹರ್ಷ ವ್ಯಕ್ತಪಡಿಸಿದರು.
ಡ್ರೀಮ್‌ವಾಕ್ ಥೀಂನಲ್ಲಿ ತುಳುನಾಡಿನ ಧÌಜದೊಂದಿಗೆ ಕಾಶ್ಮೀರಕ್ಕೆ ನಡೆದುಕೊಂಡು ಸಾಗುವುದು ಮತ್ತು ಕರಾವಳಿ ಹೆಮ್ಮೆಯ ಕಲೆ ಹುಲಿವೇಷ ತೊಟ್ಟು ಪ್ರದರ್ಶಿಸುವುದು ನನ್ನ ಕನಸಾಗಿತ್ತು. ಹುಲಿವೇಷ ಪ್ರದರ್ಶನಕ್ಕೆ ನೂರಾರು ಮಂದಿ ಸ್ಥಳೀಯರು ಸೇರಿದ್ದರು. ಮೆಚ್ಚುಗೆಯ ಮಹಾಪೂರವೇ ಸಿಕ್ಕಿತು. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ನ.18ಕ್ಕೆ ವಿಮಾನದ ಮೂಲಕ ಮಂಗಳೂರು ತಲುಪಿ, ಊರಿಗೆ ಮರಳಲಿದ್ದೇನೆ. -ಹರ್ಷೇಂದ್ರ., ಮುಂಡ್ಕಿನಜಡ್ಡು