Advertisement

Brahmavara: ಲಾಕ್‌ಅಪ್‌ ಡೆತ್‌ ಪ್ರಕರಣ: ಮರಣೋತ್ತರ ಪರೀಕ್ಷೆ

02:16 AM Nov 13, 2024 | Team Udayavani |

ಬ್ರಹ್ಮಾವರ: ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟು ಕಸ್ಟಡಿಯಲ್ಲಿ ಮೃತಪಟ್ಟ ಬಿಜು ಯೋಹನ್‌ (45) ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಂತ್ಯ ಸಂಸ್ಕಾರಕ್ಕಾಗಿ ಹುಟ್ಟೂರಾದ ಕೇರಳದ ಕೊಲ್ಲಂಗೆ ಕಳುಹಿಸಲಾಯಿತು.

Advertisement

ಬಿಜು ಯೋಹನ್‌ ಕೆಲವು ದಿನಗಳ ಹಿಂದೆ ಹಂಗಾರಕಟ್ಟೆಯ ಫ್ಯಾಕ್ಟರಿಯಲ್ಲಿ ಸೂಪರ್‌ವೈಸರ್‌ ಆಗಿ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ಬಾಡಿಗೆ ರೂಂನಲ್ಲಿ ವಾಸವಿದ್ದರು. ಚೇರ್ಕಾಡಿ ಸೂರೆಬೆಟ್ಟಿನಲ್ಲಿ ಮಹಿಳೆ, ಮಕ್ಕಳಿಗೆ ಕಿರುಕುಳದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಸಂಬಂಧ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next