Advertisement
ಮುಹಮ್ಮದ್ ಸುಫಾನ್ (20) ಹಾಗೂ ಅವರ ಸಂಬಂಧಿ ಹೂಡೆಯ ಮುಹಮ್ಮದ್ ಫಾರೂಕ್ ಅವರ ಪುತ್ರ ಮುಹಮ್ಮದ್ ಫೈಜಾನ್(18), ಹೂಡೆಯ ಗೌಸ್‌ಅವರ ಪುತ್ರ ಮುಹಮ್ಮದ್ ಇಬಾದ್(25) ಮೃತದೇಹಗಳು ರವಿವಾರ ರಾತ್ರಿ ಪತ್ತೆಯಾಗಿದ್ದವು. ಶೃಂಗೇರಿಯ ಅಡ್ಡಗದ್ದೆಯ ಯಾಸೀನ್ ಅವರ ಪುತ್ರ ಮುಹಮ್ಮದ್ ಫರ್ಹಾನ್ (16) ದೇಹ ಬೆಳಗ್ಗೆ ಪತ್ತೆಯಾಗಿದೆ.
ಸಂಬಂಧಿಕರಾದ ಇವರೆಲ್ಲ ತೀರ್ಥಹಳ್ಳಿಯ ಸಾಹಿಲ್ ಖಾದರ್, ಕೊಪ್ಪದ ಮಾಹೀಮ್, ಅಡ್ಡಗದ್ದೆಯ ಶಾಹಿಲ್ ಅವರಂದಿಗೆ ದೋಣಿ ವಿಹಾರಕ್ಕೆಂದು ಕುಕ್ಕುಡೆ ಕುದ್ರುವಿಗೆ ಹೂಡೆಯಿಂದ ತೆರಳಿದ್ದರು. ಅಲ್ಲಿ ಹೊಳೆಯಿಂದ ಮಳಿ (ಕಪ್ಪೆ ಚಿಪ್ಪು) ಹೆಕ್ಕಲು ಕಿಣಿಯಾರ ಕುದ್ರು ಎಂಬಲ್ಲಿಗೆ ಹೋಗಿದ್ದು, ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿದ್ದರು. ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಮಳಿಯನ್ನು ಹೆಕ್ಕುತ್ತ ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋದರೆಂದು ತಿಳಿದುಬಂದಿದೆ. ಈ ವೇಳೆ ಫಾರನ್ ಜತೆಯಲ್ಲಿ ಸುಫಾನ್, ಇಬಾದ್, ಫೈಜಾನ್ ಆಳದಲ್ಲಿ ಮುಳುಗಿದರು. ಉಳಿದ ಮೂವರು ಮುಳುಗಿದವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ವಿಷಯ ತಿಳಿದ ಸ್ಥಳೀಯರು ಹುಡುಕಾಟ ನಡೆಸಿದಾಗ ರಾತ್ರಿ ಮೃತದೇಹಗಳು ಪತ್ತೆಯಾದವು.
Related Articles
Advertisement
ರಮ್ಜಾನ್ ಹಬ್ಬಕ್ಕಾಗಿ ಬಂದಿದ್ದರುರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ಇವರೆಲ್ಲ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಿದ್ದರು. ಹೂಡೆ ಯಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಫಾರೂಕ್ ಅವರ ಪುತ್ರ ಫೈಜಾನ್ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೊನ್ನೆಯಷ್ಟೇ ಬಂದ ಫಲಿತಾಂಶದಲ್ಲಿ ಉತ್ತೀರ್ಣನಾಗಿದ್ದನು. ವ್ಯವಹಾರ ನಡೆಸುತ್ತಿದ್ದ ಗೌಸ್ ಅವರ ಪುತ್ರ ಇಬಾದ್ ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದರೆ. ಶೃಂಗೇರಿಯ ಅಡ್ಡಗದ್ದೆಯ ಯಾಸೀನ್ ಅವರ ಪುತ್ರ ಸುಫಾನ್ ದ್ವಿತೀಯ ಪದವಿ ಕಲಿಯುತ್ತಿದ್ದರೆ, ಆತನ ತಮ್ಮ ಫರ್ಹಾನ್ ಎಸೆಸೆಲ್ಸಿ ವಿದ್ಯಾರ್ಥಿ. ಸಂಜೆ ಮೃತ ನಾಲ್ವರ ಅಂತ್ಯಕ್ರಿಯೆಯನ್ನು ಹೂಡೆಯ ಖದೀಮ್ ಮಸೀದಿಯಲ್ಲಿ ನೆರವೇರಿಸಲಾಯಿತು. ಮರಳುಗಾರಿಕೆಯಿಂದ ಹೊಂಡ ನಿರ್ಮಾಣ
ದುರಂತ ಸಂಭವಿಸಿದ ಹೊಳೆಯಲ್ಲಿ ನಿರಂತರ ಮರಳು ಗಾರಿಕೆಯಿಂದ ಹೊಂಡ ನಿರ್ಮಾ ಣವಾಗಿದೆ. ಸಮತಟ್ಟಿಲ್ಲದ ನೀರಿನ ಪ್ರದೇಶದಿಂದ ಯುವಕರು ಇಳಿದ ಪರಿಣಾಮ ಅನಾಹುತ ನಡೆದಿದೆ. ಮಾತ್ರವಲ್ಲದೆ ರವಿವಾರ ಗಾಳಿಯ ವೇಗದಿಂದಾಗಿ ನೀರಿನ ಹರಿಯುವಿಕೆಯೂ ಜಾಸ್ತಿಯಾಗಿತ್ತೆನ್ನಲಾಗಿದೆ.