Advertisement

ಬ್ರಹ್ಮಾವರ-ದೂಪದಕಟ್ಟೆ: ಸರ್ವಿಸ್‌ ರಸ್ತೆಗೆ ಆಗ್ರಹ

06:15 AM Jun 03, 2018 | Team Udayavani |

ಬ್ರಹ್ಮಾವರ: ಇಲ್ಲಿನ ಎಸ್‌.ಎಂ.ಎಸ್‌.ನಿಂದ ದೂಪದಕಟ್ಟೆ ತನಕ ರಾ.ಹೆ. ಇಕ್ಕೆಲ ಸರ್ವಿಸ್‌ ರಸ್ತೆ ನಿರ್ಮಾಣ ಅತೀ ಅವಶ್ಯವಾಗಿದೆ.

Advertisement

ಹೆದ್ದಾರಿಯ ಪಶ್ಚಿಮ ದಿಕ್ಕಿನ ಆದರ್ಶ ನಗರ, ಬಿರ್ತಿ, ಸಾಲಿಕೇರಿ, ಹಾರಾಡಿ, ಹೊನ್ನಾಳ, ಬೈಕಾಡಿ ಗಾಂಧಿನಗರ ಮೊದಲಾದ ಊರುಗಳಿಗೆ ತೆರಳುವವರು ತೊಂದರೆ ಅನುಭವಿಸುತ್ತಿದ್ದಾರೆ. ರಾ.ಹೆ. ಚತುಷ್ಪಥ ಕಾಮಗಾರಿ ಬಳಿಕ ಈ ಸಮಸ್ಯೆ ತಲೆದೋರಿದೆ.

ವಿರುದ್ಧ ದಿಕ್ಕಿನ ಸಂಚಾರ
ಪ್ರಸ್ತುತ ಹಲವು ಮಂದಿ ದ್ವಿಚಕ್ರ ಸವಾರರು, ರಿಕ್ಷಾ, ಕಾರು ಚಾಲಕರು ಎಸ್‌.ಎಂ.ಎಸ್‌.ನಿಂದ ದೂಪದಕಟ್ಟೆ ವರೆಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾರೆ. ಇದು ಅಪಾಯಕ್ಕೆ ನೇರ ಆಹ್ವಾನ ನೀಡುತ್ತಿದೆ.

ಅಲ್ಲದೆ ಎಸ್‌.ಎಂ.ಎಸ್‌. ಪ್ರೌಢಶಾಲೆ, ಪದವಿ, ಪ.ಪೂ. ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಓಡಾಡುವ ಪ್ರದೇಶ ದಲ್ಲಿ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಅಪಘಾತಕ್ಕೆ ಕಾರಣ ವಾಗುತ್ತವೆ.

ಒಳದಾರಿಯೂ ಪ್ರಯೋಜನವಿಲ್ಲ
ಎಸ್‌.ಎಂ.ಎಸ್‌. ಕಾಲೇಜು ಹಿಂಬದಿ 5 ಸೆಂಟ್ಸ್‌ ಕಾಲನಿ ಮೂಲಕ ತೆರಳಲು ಒಂದು ಸಂಪರ್ಕ ರಸ್ತೆ ಇದೆ. ಆದರೆ ತಿರುವು ಮುರುವು ದಾರಿ, ಜನವಸತಿ ಪ್ರದೇಶವಾದ್ದರಿಂದ ಇದೂ ಸುರಕ್ಷಿತವಲ್ಲ.

Advertisement

ಸರ್ವಿಸ್‌ ರಸ್ತೆ ವಿಸ್ತರಿಸಿ
ಸಿಟಿ ಸೆಂಟರ್‌ ತನಕ ಈಗಿರುವ ಸರ್ವಿಸ್‌ ರಸ್ತೆಯನ್ನು ವಿಸ್ತರಿಸಿ  ಎಸ್‌.ಎಂ.ಎಸ್‌. ಮೂಲಕ ದೂಪದಕಟ್ಟೆ ತನಕ ಮಾಡ ಬೇಕಾಗಿದೆ. ಆಗ ಮಾತ್ರ ಸುಗಮ ಸಂಚಾರ ಸಾಧ್ಯವಿದೆ.

2.5 ಕಿ.ಮೀ. ವ್ಯರ್ಥ
ಎಸ್‌.ಎಂ.ಎಸ್‌.ನಿಂದ ದೂಪದಕಟ್ಟೆ ತನಕದ 500 ಮೀ. ದೂರಕ್ಕಾಗಿ ರುಡ್‌ಸೆಟ್‌ ಕ್ರಾಸ್‌ ತನಕ ತೆರಳಿ ಬರಬೇಕಾಗಿದೆ. ಇದಕ್ಕಾಗಿ ಸಮಾರು 2.5 ಕಿ.ಮೀ. ವ್ಯರ್ಥ ಪ್ರಯಾಣವಾಗುತ್ತಿದೆ.

ಪೂರ್ವ ದಿಕ್ಕೂ ಅಗತ್ಯ
ರಾ.ಹೆ. ಪೂರ್ವ ದಿಕ್ಕಿನಲ್ಲಿ ಪ್ರಸ್ತುತ ಮ್ಯಾಕ್ಸ್‌ ಕಾಂಪ್ಲೆಕ್ಸ್‌ ತನಕ ಮಾತ್ರ ಸರ್ವಿಸ್‌ ಇದೆ. ಇದರ ಮುಂದೆ ಆಶ್ರಯ ಹೊಟೇಲ್‌, ಮಧುವನ ಕಾಂಪ್ಲೆಕ್ಸ್‌, ನರ್ಸರಿ, ಶ್ಯಾಮಿಲಿ ಶನಾಯಾ ಸಭಾಂಗಣ ಮೊದಲಾದ ಕಟ್ಟಡಗಳಿವೆ. ಈ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಹೇರೂರಿನ ನೂರಾರು ಮನೆಗಳಿಗೆ ಇದೇ ದಾರಿಯಲ್ಲಿ ತೆರಳಬೇಕಿದೆ. ಈಗಿರುವ ಸರ್ವಿಸ್‌ ರಸ್ತೆಯನ್ನು ಪೆಟ್ರೋಲ್‌ ಪಂಪ್‌ ವರೆಗೆ ವಿಸ್ತರಿಸಿದರೆ ಬಹಳಷ್ಟು ಅನುಕೂಲವಾಗಲಿದೆ.

ಎಲ್ಲರಿಗೂ ಕಿರಿಕಿರಿ
ವ್ಯರ್ಥ ಪ್ರಯಾಣವನ್ನು ಉಳಿಸುವುದಕ್ಕಾಗಿ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸು ವುದರಿಂದ ಅವರಿಗೂ ಅಪಾಯ. ಜತೆಗೆ ಪಾದಚಾರಿಗಳಿಗೆ, ರಾ.ಹೆ.ಯಲ್ಲಿ ಸಂಚರಿಸು ವವರಿಗೆ ಗೊಂದಲವಾಗುತ್ತದೆ.

ಏಕೆ ಅನಿವಾರ್ಯ ?
ಪಶ್ಚಿಮ ದಿಕ್ಕಿನಲ್ಲಿರುವ ಆದರ್ಶನಗರ, ಹೊನ್ನಾಳ, ಬೈಕಾಡಿ ಗಾಂಧಿನಗರ ಅತ್ಯಂತ ಜನ ನಿಬಿಡ ಪ್ರದೇಶಗಳು. ಪ್ರತಿಷ್ಠಿತ ಜಿ.ಎಂ. ವಿದ್ಯಾನಿಕೇತನ್‌ ಪಬ್ಲಿಕ್‌ ಸ್ಕೂಲ್‌, ಬಾಳಿಗಾ, ಲೂವಿಸ್‌ ಸೇರಿದಂತೆ ಹಲವು ಸಂಸ್ಥೆಗಳು ಈ ಭಾಗದಲ್ಲಿದೆ. ಆದ್ದರಿಂದ ಸರ್ವಿಸ್‌ ರಸ್ತೆ ಅನಿವಾರ್ಯವಾಗಿದೆ.

ಮನವಿ ಮಾಡಿದ್ದೆವು
ಹಿಂದಿನ ಶಾಸಕರು, ಸಂಸದರು, ರಾ.ಹೆ. ಪ್ರಾಧಿಕಾರ ಅಧಿಕಾರಿಗಳಿಗೆ ಈ ಕುರಿತು  ಮನವಿ ಮಾಡಿದ್ದೆವು. ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಗಮನ ಹರಿಸಿ ಗುತ್ತಿಗೆದಾರರ ಮೂಲಕ ಸರ್ವಿಸ್‌ ರಸ್ತೆ ನಿರ್ಮಿಸಲಿ. 
 - ಎನ್‌.ಕೃಷ್ಣ ಗಾಣಿಗ,
ಗೆಳೆಯರ ಬಳಗ, ದೂಪದಕಟ್ಟೆ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next