Advertisement

ಬ್ರಹ್ಮಾವರ : ವರ್ಷ ಎಂಟಾದರೂ ಕುಂಟುತ್ತಿದೆ

12:22 AM Aug 25, 2022 | Team Udayavani |

ತಾಲೂಕು ರಚನೆಯಾದದ್ದು 2014ರಲ್ಲಿ, ಆಗಿನ ಹೊಸ ತಾಲೂಕು ಈಗ ಎಂಟು ವರ್ಷದಷ್ಟು ಹಳೆಯದು. ಎಂಟು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಜನರು ನಿರೀಕ್ಷಿಸಿದ್ದರು. ಆದರೆ ಹೊಸ ತಾಲೂಕಿನ ಕೀರ್ತಿ ಬಂದದ್ದು ಬಿಟ್ಟರೆ, ನಿರ್ದಿಷ್ಟ ಸರಕಾರಿ ಕಚೇರಿಗಳ ಕೆಲಸ ಹಂಚಿಕೆ ಆಗಿದ್ದು ಹೊರತುಪಡಿಸಿದಂತೆ ಬೃಹತ್‌ ಅಭಿವೃದ್ಧಿ ಕಾರ್ಯಗಳು ಆಗಿದ್ದು ಕಡಿಮೆ.

Advertisement

ಪ್ರಗತಿಯಲ್ಲಿದೆ
-ಮಿನಿ ವಿಧಾನಸೌಧ ಇನ್ನೂ ನಿರ್ಮಾಣ ಹಂತ ದಲ್ಲಿದೆ. ಅದು ತ್ವರಿತವಾಗಿ ಪೂರ್ಣಗೊಂಡರೆ ಎಲ್ಲ ಸರಕಾರಿ ಕಚೇರಿಗಳು ಒಂದೆಡೆಗೆ ಬಂದು ಜನರಿಗೆ ಅನುಕೂಲವಾಗುತ್ತದೆ.
-ಪೊಲೀಸ್‌ ಕ್ವಾಟ್ರಸ್‌ ನಿರ್ಮಾಣ ಪ್ರಗತಿಯಲ್ಲಿದೆ.
-ಉಡುಪಿ ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ವಾರಾಹಿ ಯೋಜನೆ ತಾಲೂಕಿ ನಲ್ಲೂ ಹರಿದು ಹೋಗುವುದರಿಂದ ಕೆಲವು ಗ್ರಾಮಗಳಿಗೆ ನೀರು ಸಿಗುವ ನಿರೀಕ್ಷೆಯಿದೆ. ಆ ಕಾಮಗಾರಿ ಪ್ರಗತಿಯಲ್ಲಿದೆ.

ಕಂದಾಯ ಇಲಾಖೆಯ ಬಹುತೇಕ ಕಡತಗಳು ಇಂದಿಗೂ ಉಡುಪಿಯಲ್ಲೇ ಇವೆ. ಅವೆಲ್ಲವೂ ಬ್ರಹ್ಮಾವರಕ್ಕೆ ವರ್ಗಾವಣೆಯಾಗಬೇಕು. ಭೂ ನ್ಯಾಯಮಂಡಳಿ ಕಚೇರಿ, ಅಗ್ನಿ ಶಾಮಕ ದಳ ಘಟಕವೂ ಸ್ಥಾಪನೆಯಾಗಬೇಕಿದೆ. ತಾಲೂಕು ಕಚೇರಿಗೆ ನುರಿತ ಸಿಬಂದಿ ನೇಮಕವಾಗಬೇಕಿದೆ. ಪೊಲೀಸ್‌ ಠಾಣೆಗೆ ಹೊಸ ವಾಹನ ಅಗತ್ಯವಿದೆ. ಬ್ರಹ್ಮಾವರ ಹೃದಯ ಭಾಗದ 4 ಗ್ರಾ.ಪಂ.ಗಳನ್ನು ಸೇರಿ ಪುರಸಭೆ ರಚನೆಯಾಗಬೇಕೆಂಬುದು ಹಳೆಯ ಬೇಡಿಕೆ. ಈಗಲಾದರೂ ಅದು ಪ್ರತ್ಯೇಕಗೊಂಡರೆ ಅನುದಾನ ಹಂಚಿಕೆ ಹಾಗೂ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಆಗಬೇಕಾದದ್ದು
-20ಕ್ಕೂ ಹೆಚ್ಚು ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
-ಸಂಚಾರಿ ನ್ಯಾಯಾಲಯ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ತಾಲೂಕು ನ್ಯಾಯಾಲಯ ರಚನೆಯಾಗಬೇಕಿದೆ.
-ಆರ್‌ಟಿಒ ಕಚೇರಿಯ ಬೇಡಿಕೆ ಇನ್ನೂ ಈಡೇ ರಿಲ್ಲ. ಸರ್ವಿಸ್‌ ರಸ್ತೆಗಳ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ ಆದಷ್ಟು ಬೇಗ ಆಗಬೇಕು. ಬ್ರಹ್ಮಾವರ ಬಸ್‌ಸ್ಟ್ಯಾಂಡ್ , ಮಹೇಶ್‌ ಡಿವೈಡರ್‌, ಕ್ಯಾಟಲ್‌ ಪಾಸ್‌, ಆಕಾಶವಾಣಿ ಅಪಾಯಕಾರಿ ಸ್ಥಳಗಳಾಗಿದ್ದು, ಸಂಚಾರಿ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ.
-ಪ್ರಸ್ತುತ ಒಂದೇ ಪಹಣಿ ವಿತರಣೆ ಕೇಂದ್ರ ವಿದ್ದು, ಎರಡು ಕೇಂದ್ರ ಬೇಕೆಂಬ ಬೇಡಿಕೆ ಈಡೇರಬೇಕಿದೆ.
-ಸುಸಜ್ಜಿತ ಖಾಸಗಿ ಹಾಗೂ ಕೆ.ಎಸ್‌.ಆರ್‌. ಟಿ.ಸಿ. ಬಸ್‌ ನಿಲ್ದಾಣ ಆಗ ಬೇಕಿದೆ. ವಾಹನ ನಿಲು ಗಡೆಗೂ ಸೂಕ್ತ ಸ್ಥಳ, ವ್ಯವಸ್ಥೆ ಕಲ್ಪಿಸಬೇಕಿದೆ.
-ಕುಂಜಾಲು ಕ್ರಾಸ್‌ನ 4 ರಸ್ತೆ ಕೂಡುವಲ್ಲಿ ತಾಲೂಕು ವೃತ್ತ ರಚನೆಯಾಗಬೇಕು. ಗಾಂಧಿ ಮೈದಾನ ಅಭಿವೃದ್ಧಿ, ಉದ್ಯಾನ ನಿರ್ಮಾಣ ಸಾರ್ವಜನಿಕರ ಬೇಡಿಕೆ.

ಆದದ್ದು
-ವಾರಾಹಿ ಬಲದಂಡೆ ಏತ ನೀರಾವರಿ ಯೋಜನೆ
-ಶಿರೂರು ಮೂರುಕೈನಿಂದ ಸಾಹೇಬರಕಟ್ಟೆ, ಮಧುವನ ತನಕ ನೀರಾವರಿ ಕಾಲುವೆ
-ಮಂದಾರ್ತಿ ಹೆಗ್ಗುಂಜೆ ತನಕ ನೀರಾವರಿ ಕಾಲುವೆ
-ಕೋಡಿ ಕನ್ಯಾಣ ಜಟ್ಟಿ ವಿಸ್ತರಣೆ
-ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
-ತಾಲೂಕು ಕಚೇರಿ ವಿಸ್ತರಣೆ
-ಪಾಸ್‌ಪೋರ್ಟ್‌ ಸೇವಾ ಕೇಂದ್ರ

Advertisement


-ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next