Advertisement

ಬ್ರಹ್ಮಾವರ ಗ್ರಾಮಾಂತರ: ಚರಂಡಿ ನಿರ್ವಹಣೆ ತುರ್ತು ಅವಶ್ಯ

06:15 AM May 26, 2018 | |

ಬ್ರಹ್ಮಾವರ: ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಚರಂಡಿ, ತೋಡು ನಿರ್ವಹಣೆಯ ತುರ್ತು ಅವಶ್ಯಕತೆ ಇದೆ.
ನೀಲಾವರ ಗ್ರಾ.ಪಂ.

Advertisement

ಪಂಚಾಯತ್‌ ವ್ಯಾಪ್ತಿಯ ಕುಂಜಾಲು ಪೇಟೆಯಲ್ಲಿ ಚರಂಡಿ ಸಮಸ್ಯೆ ಇದೆ. ಮಳೆಗಾಲದಲ್ಲಿ ಆರೂರು ಕ್ರಾಸ್‌ ಬಸ್‌ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆ ಯಾಗುತ್ತಿದೆ.ನೀಲಾವರ ಹೆಬ್ಟಾರ್‌ಬೆಟ್ಟಿನಿಂದ ಮಧ್ಯಸ್ಥರಬೆಟ್ಟು ಮೂಲಕ ಸೀತಾನದಿ ಸಂಪರ್ಕಿಸುವ ತೋಡು ನಿರ್ವಹಣೆ ಅತೀ ಅವಶ್ಯ. ದೇವಾಡಿಗರಬೆಟ್ಟು, ಕೆಳಕುಂಜಾಲು ತೋಡು ಸ್ವಚ್ಚ ಗೊಳಿಸಿದರೆ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.


ಆರೂರು ಗ್ರಾ.ಪಂ.
ಅಡ್ಜೀಲು,ಅಡ್ಪು ಬೈಲು ತೋಡುಗಳನ್ನು ಸ್ವಚ್ಚಗೊಳಿಸಿ ತಡೆಗೋಡೆ ಕಟ್ಟಬೇಕಾಗಿದೆ. ಆರೂರು ದೇವಸ್ಥಾನ ಬೆಟ್ಟಿನಿಂದ ತೆಂಕಬೆಟ್ಟು ತನಕದ ತೋಡು ಮುಚ್ಚಿ ಹೋಗಿದೆ. ದಾಸಬೆಟ್ಟು, ಬೆಳಾ¾ರಿನಲ್ಲಿ  ಕಾಮಗಾರಿ ಪೂರ್ಣ ಗೊಳಿಸುವಂತೆ ಕೃಷಿಕರು ವಿನಂತಿಸಿದ್ದಾರೆ.

ಪೇತ್ರಿ ಪೇಟೆ ಅವ್ಯವಸ್ಥೆ
ಚೇರ್ಕಾಡಿ ಗ್ರಾ.ಪಂ.ನ ಪೇತ್ರಿ ಪೇಟೆಯಲ್ಲಿ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ. ಯುವಕ ಮಂಡಲ ವಠಾರದಿಂದ ಚರ್ಚ್‌ನ ತನಕ ಚರಂಡಿ ರಚನೆಯಾಗಬೇಕಿದೆ. ಜತೆಗೆ ಕನ್ನಾರು, ನಾರ್ಜೆಡ್ಡು, ಮುಡೂರು, ನೂಜಿನಬೈಲಿನಲ್ಲಿ ತೋಡು ರಿಪೇರಿಯಿಂದ ಕೃಷಿಗೆ ಸಹಕಾರಿ ಯಾಗಲಿದೆ.

ಕಳೆದ ವರ್ಷದ ಅವ್ಯವಸ್ಥೆ
ಕಳೆದ ಮಳೆಗಾಲದಲ್ಲಿ ಕೊಕ್ಕರ್ಣೆ ಮುಖ್ಯರಸ್ತೆಯ ಚೈತ್ರ ಬಾರ್‌ ಬಳಿ ನೀರು ತುಂಬಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಈ ಬಾರಿ ಎರಡು ವಾಣಿಜ್ಯ ಸಂಕೀರ್ಣದವರು ಚರಂಡಿಗೆ ಮೋರಿ ಅಳವಡಿಸಿದ್ದರೂ ಬಾರ್‌ ಸಮೀಪ ನೀರಿನ ಹರಿವಿಗೆ ವ್ಯವಸ್ಥೆಯಾಗಿಲ್ಲ. ಸಂಬಂಧಪಟ್ಟವರು ತಕ್ಷಣ ಕಾಮಗಾರಿ ನಡೆಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದರೊಂದಿಗೆ ಕೊಕ್ಕರ್ಣೆ ಪೇಟೆ ಹಿಂಬದಿಯ ರಾಜಕಾಲುವೆ ನಿರ್ವಹಣೆ ಅತೀ ಅವಶ್ಯ. ಹಾಗೆಯೇ ಕೆಳಪೇಟೆಯಲ್ಲಿ ಚರಂಡಿ ನಿರ್ವಹಣೆ, ಗುಂಡಾಲು ತೋಡು ದುರಸ್ತಿ, ಸಾಸ್ತಾವು ತೋಡಿಗೆ ತಡೆಗೋಡೆ ತುರ್ತು ಅವಶ್ಯ.
ನಾಲ್ಕೂರು ಗ್ರಾ.ಪಂ. ಮಾರಾಳಿಬೈಲು, ಮಿಯಾರಿನಲ್ಲಿ ತೋಡು ಹೂಳೆತ್ತದೆ ನೀರು ಕೃಷಿ ಭೂಮಿಗೆ ನುಗ್ಗುತ್ತಿದೆ. ಕಳೂ¤ರು ಗ್ರಾ.ಪಂ. ವ್ಯಾಪ್ತಿಯ ಪಾದೇಮಠ, ಬೈದೆಬೆಟ್ಟು, ಕಲ್ಗೊàಳಿ, ಕೆಂಜೂರು ಶಾನಾಳಿ, ಭಂಡಾಲೆ, ಚಾಪಾಳಿ ಮೊದಲಾದೆಡೆ ಕೃಷಿ ಭೂಮಿಯ ತೋಡುಗಳು ಹೂಳಿನಿಂದ ತುಂಬಿ ಹೋಗಿದೆ.

ತುರ್ತು ಕಾಮಗಾರಿ
ಕುಂಜಾಲಿನಲ್ಲಿ ಪಂಚಾಯತ್‌ ಸಮೀಪ ಕಾಂಕ್ರೀಟ್‌ ಚರಂಡಿ ಆಗಿದೆ. ಅದನ್ನು ಮುಂದುವರಿಸಿ ಆರೂರು ಕ್ರಾಸ್‌ ತನಕ ಮಾಡುವ ಯೋಜನೆ ಇದೆ. ಈ ಮಳೆಗಾಲದಲ್ಲಿ ಜೆಸಿಬಿ ಮೂಲಕ ತುರ್ತು ಕಾಮಗಾರಿ ನಡೆಸಲಾಗುವುದು.
-ಪ್ರಶಾಂತ್‌ ಪಿಡಿಒ, ನೀಲಾವರ

Advertisement

ತುರ್ತು ಕ್ರಮ
ಪೇತ್ರಿ ಪೇಟೆಯಲ್ಲಿ ಚರಂಡಿ ನಿರ್ವಹಣೆಗೆ ಕಳೆದ ವರ್ಷವೇ ಅನುದಾನ ಇಡಲಾಗಿತ್ತು. ಪಿಡಬ್ಲ್ಯುಡಿ ರಸ್ತೆಯಾದ್ದರಿಂದ ಗೊಂದಲದಿಂದ ಕಾಮಗಾರಿ ಆಗಿರಲಿಲ್ಲ. ಈ ಬಾರಿ ಪಂಚಾಯತ್‌ನಿಂದ ಕಾಮಗಾರಿ ನಡೆಸಲಾಗುವುದು.
– ಹರೀಶ್‌ ಶೆಟ್ಟಿ , ಅಧ್ಯಕ್ಷರು, ಚೇರ್ಕಾಡಿ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next