Advertisement

ಬ್ರಹ್ಮಶ್ರೀ ನಾರಾಯಣ ಗುರು ಸಂದೇಶ ವಿಚಾರ ಸಂಕಿರಣ

03:05 PM Nov 26, 2017 | |

ಸುಳ್ಯ: ಸೋಶಿಯಲ್‌ ಮೀಡಿಯಾದಲ್ಲಿ ಗಟ್ಟಿತನವೂ ಇಲ್ಲ, ಅದು ಸಮಾಜವನ್ನು ಗಟ್ಟಿ ಮಾಡುವುದೂ ಕೂಡ ಇಲ್ಲ ಎಂದು ಬೆಂಗಳೂರಿನ ನಿವೃತ್ತ ಪೊಲೀಸ್‌ ಅಧಿಕಾರಿ ಬಿ. ಕೆ. ಶಿವರಾಮ ಅವರು ಹೇಳಿದ್ದಾರೆ. ಮಾನವ ಬಂಧುತ್ವ ವೇದಿಕೆ ಕರ್ನಾಟಕದ ಸಮಿತಿ ವತಿಯಿಂದ ಶನಿವಾರ ಸುಳ್ಯದಲ್ಲಿ ಜರಗಿದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸಂದೇಶ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

Advertisement

ವಿಶ್ವಪಥ-ಮನುಜಪಥ ನಮ್ಮ ಗುರಿಯಾಗಲಿ. ಮಕ್ಕಳು ಸಾಮಾಜಿಕ ಕ್ರಾಂತಿಯಲ್ಲಿ ತೊಡಗ ಬೇಕು. ಶ್ರೀ ನಾರಾಯಣ ಗುರು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ ಸಾಮಾಜಿಕ, ಶಿಕ್ಷಣ ಕ್ರಾಂತಿಯಂತೆ ಮುಂದೆ ದಲಿತ, ಅಲ್ಪಸಂಖ್ಯಾಕ, ಶೋಷಿತ ಬಿಲ್ಲವ ಸಮಾಜ ರಾಜಕೀಯ ಕ್ರಾಂತಿಯಲ್ಲಿ ತೊಡಗಬೇಕು ಎಂದರು.

ಹೆಚ್ಚುತ್ತಿರುವ ಅಸಹಿಷ್ಣುತೆ
ಇಂದು ಅಸಹಿಷ್ಣುತೆ ಹೆಚ್ಚಾಗುತ್ತಿರುವುದು ನೋವಿನ ವಿಚಾರ. ಸಾಧುಸಂತರಿಗೆ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ನಿಲ್ಲಿಸಲಾಗಿಲ್ಲ. ಬ್ರಿಟಿಷರೇ ಕಾಯಿದೆ ಜಾರಿಮಾಡಿ ನಿಷೇಧ ತಂದಿದ್ದಾರೆ. ಹಿಂದೆ ಬಂಟ, ಬಿಲ್ಲವ, ಮೊಗವೀರ, ದಲಿತ ಸಮುದಾಯಗಳಿಗೆ ದೇಗುಲಗಳಿಗೆ ಪ್ರವೇಶ ನೀಡದೇ ಪುರೋಹಿತಶಾಹಿ ಅಸ್ಪೃಶ್ಯತೆ ಆಚರಣೆಯಿತ್ತು. ಇದನ್ನೇ ಈಗಲು ಕಾಯ್ದುಕೊಳ್ಳಲು ಯತ್ನಿಸಲಾತ್ತಿದೆ ಎಂದು ಹೇಳಿದರು.

ವೈದಿಕ ಧರ್ಮ ಭೌತಿಕ ದಾಸ್ಯ
ಪ್ರಾಸ್ತಾವಿಕವಾಗಿ ಮಾತನಾಡಿದ ಸತೀಶ್‌ಕುಮಾರ್‌ ಕೆ. ಹಾಸನ, ಇಂದು ದೇಶದಲ್ಲಿ ಮೂಲಭೂತವಾದ, ಮತೀಯವಾದ ತೀವ್ರವಾಗಿದೆ. ಇವೆರಡೂ ಸಮೂಹ ಸನ್ನಿಯಾಗಿದ್ದು, ವ್ಯಾಪಕವಾಗಿ ಹಬ್ಬಲು ಮಾಧ್ಯಮಗಳು ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತಿವೆ. ವೈದಿಕ ಧರ್ಮ ಭೌತಿಕದಾಸ್ಯವಾಗಿದೆ. ಮಾನವಿಕ ಶಾಸ್ತ್ರದ ಓದಿನತ್ತ ಆಸಕ್ತಿ ಕಡಿಮೆಯಾಗುತ್ತಿರುವುದೂ ಕೂಡ ಇದು ಹೆಚ್ಚಾಗಲು ಕಾರಣವಾಗಿದೆ. ನಮ್ಮದು ಮಾನವೀಯ ಧರ್ಮವಾಗಬೇಕು ಎಂದರು.

ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಎಂ.ಬಿ. ಸದಾಶಿವ ಬಹು
ಮಾನ ವಿತರಿಸಿದರು. ಅಬ್ಟಾಸ್‌ ಹಾಜಿ ಕಟ್ಟೆಕಾರ್‌, ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಗೋಪಾಲ್‌ ಪೆರಾಜೆ ಸ್ವಾಗತಿಸಿ, ನಿರೂಪಿಸಿದರು.

Advertisement

ಹೋರಾಟ ಅಗತ್ಯ
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಚ್ಯುತ ಪೂಜಾರಿ, ಶ್ರೀ ನಾರಾಯಣ ಗುರು ಅವರು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸುಧಾರಣೆಯ ಹರಿಕಾರ ಎಂದರಲ್ಲದೇ, ಸಮಾಜ ಬದಲಾವಣೆಗೆ ಸಂಘಟಿತ ಹೋರಾಟಬೇಕು. ವಿದ್ಯಾರ್ಜನೆ ಯಿಂದ ಸ್ವಾತಂತ್ರ್ಯ ಸಾಧ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next