Advertisement

Brahmashri ನಾರಾಯಣಗುರುಗಳ 169ನೇ ಜಯಂತಿಯ ಕಾರ್ಯಕ್ರಮಗಳಿಗೆ ಕ್ಷಣಗಣನೆ ಆರಂಭ

07:53 PM Sep 05, 2023 | Team Udayavani |

ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಬ್ರಹ್ಮ್ಮಶ್ರೀ ನಾರಾಯಣಗುರುಗಳ 169ನೇ ಜಯಂತಿಯ ಕಾರ್ಯಕ್ರಮಗಳಿಗೆ ದ್ವೀಪದಲ್ಲಿ ಕ್ಷಣಗಣನೆ ಆರಂಭವಾಗಿದೆ.

Advertisement

ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ (SNCS), ಗುರುದೇವ ಸೋಶಿಯಲ್ ಸೊಸೈಟಿ (GSS) ಮತ್ತು ಗುರು ಸೇವಾ ಸಮಿತಿ (ಬಹ್ರೇನ್ ಬಿಲ್ಲವಾಸ್) ಜಂಟಿಯಾಗಿ ಆಯೋಜಿಸುತ್ತಿರುವ ಮೂರುದಿನಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆ ಭರದಿಂದ ಸಾಗಿದೆ .

ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಅಂಗವಾಗಿ ಆಯೋಜಿಸಿರುವ ಇದೆ ಸೆಪ್ಟೆಂಬರ್ ತಿಂಗಳ 7,8,ಹಾಗು 9 ನೇ ತಾರೀಖಿನಂದು ಒಟ್ಟು ಮೂರು ದಿನಗಳು ಗುರು ಜಯಂತಿ ಆಚರಣೆ ನಡೆಯಲಿದೆ. ‘ಮಾನವೀಯತೆಗಾಗಿ ಸಂಸ್ಕೃತಿಗಳ ಸಂಗಮ’ ಎನ್ನುವದನ್ನು ಮುಖ್ಯ ವಿಷಯವನ್ನಾಗಿರಿಸಿಕೊಂಡು ದ್ವೀಪದ ಬ್ರಹ್ಮಶ್ರೀ ನಾರಾಯಣಗುರುಗಳ ಅನುನಾಯಿಗಳು ಬದುಕನ್ನು ಕಟ್ಟಿಕೊಳ್ಳಲು ಎಲ್ಲಾ ಅವಕಾಶಗಳನ್ನು ನೀಡಿರುವ ಸುಂದರ ಕರ್ಮಭೂಮಿ ಬಹರೈನ್ ದ್ವೀಪ ರಾಷ್ಟ್ರಕ್ಕೆ ಹಾಗು ಇಲ್ಲಿನ ರಾಜಮನೆತನಕ್ಕೆ ಗೌರವ ಸೂಚ್ಯವಾಗಿ ಮೂರು ದಿನಗಳ ಗುರು ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ .

ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೆಪ್ಟೆಂಬರ್ 6 ರಂದು ಬಹ್ರೇನ್‌ಗೆ ಆಗಮಿಸಲಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .

ವಿಶೇಷ ಅತಿಥಿಗಳಾಗಿ ಕರ್ನಾಟಕದ ಶಿಕ್ಷಣ ಸಚಿವ ಶ್ರೀ ಮಧು ಬಂಗಾರಪ್ಪ,ಬಹರೈನ್ ನ ಮಂತ್ರಿಗಳು , ಕೈಗಾರಿಕೋದ್ಯಮಿ ಮತ್ತು ಲುಲು ಗ್ರೂಪ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಎಂ.ಎ.ಯೂಸುಫ್ ಅಲಿ ಮಾತ್ರವಲ್ಲದೆ ಕಾರ್ಯಕ್ರಮದ ಪೋಷಕರೂ ,ಖ್ಯಾತ ಉದ್ಯಮಿಗಳೂ ಆಗಿರುವ ಕೆ .ಜಿ .ಬಾಬುರಾಜನ್ ,ಭಾರತೀಯ ರಾಯಭಾರಿ ಸನ್ಮಾನ್ಯ ವಿನೋದ್ ಕೆ ಜೇಕಬ್, ಬಹ್ರೇನ್ ಮತ್ತು ಭಾರತದ ಉನ್ನತ ಅಧಿಕಾರಿಗಳು, ಉದ್ಯಮಿಗಳು , ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಇರಲಿರುವುದು . ಅಲ್ಲದೆ ಶಿವಗಿರಿ ಪೀಠದ ಸ್ವಾಮೀಜಿಗಳು ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿರುವರು . ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ತಾರೆ ನವ್ಯಾ ನಾಯರ್ ಅವರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ಹಾಗೂ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ ಯ ಸದಸ್ಯರುಗಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನ ಕಾಣಲಿದೆ.

Advertisement

ಸೆಪ್ಟೆಂಬರ್ 9ರ ಶನಿವಾರ ಬೆಳಗ್ಗೆ 10ರಿಂದ ಇಲ್ಲಿನ ಇಂಡಿಯನ್ ಸ್ಕೂಲಿನ ಸಭಾಂಗಣದಲ್ಲಿ ನಡೆಯುವ ‘ಮಕ್ಕಳ ಸಂಸತ್ತು’ ಕಾರ್ಯಕ್ರಮವನ್ನು ಮಾಜಿ ರಾಷ್ಟ್ರಪತಿ ಉದ್ಘಾಟಿಸಲಿದ್ದು, ಮಕ್ಕಳ ಸಂಸತ್ತಿನಲ್ಲಿ ಸಂಸ್ಕೃತಿಗಳ ಸಂಗಮ ಹಾಗು ಮಾನವ ಸೌಹಾರ್ದ’ ಎನ್ನುವ ವಿಷಯದ ಬಗ್ಗೆ ಚರ್ಚೆಯಾಗಲಿದೆ. ವಿವಿಧ ಸಂಘಟನೆಗಳ , ಸಂಸ್ಥೆಗಳ ಮತ್ತು ಶಾಲೆಗಳ ಆಶ್ರಯದಲ್ಲಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ 7ರಂದು ಜರುಗುವ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಅವಕಾಶವಿದ್ದು, ಸೆಪ್ಟೆಂಬರ್ 8 ಮತ್ತು 9 ರಂದು ಇಂಡಿಯನ್ ಸ್ಕೂಲ್ ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷರಾದ ಹರೀಶ್ ಪೂಜಾರಿಯವರನ್ನು ದೂರವಾಣಿ ಸಂಖ್ಯೆ 39049132 ಮೂಲಕ ಸಂಪರ್ಕಿಸಬಹುದು .

- ಕಮಲಾಕ್ಷ ಅಮೀನ್

Advertisement

Udayavani is now on Telegram. Click here to join our channel and stay updated with the latest news.

Next