Advertisement

ಬ್ರಹ್ಮಪುತ್ರಾಗೆ ಡ್ಯಾಂ ನಿರ್ಮಿಸಲು ಚೀನ ಸಂಸತ್‌ ಗ್ರೀನ್‌ಸಿಗ್ನಲ್‌

12:26 AM Mar 12, 2021 | Team Udayavani |

ಬೀಜಿಂಗ್‌: ಭಾರತದ ತೀವ್ರ ವಿರೋಧದ ನಡುವೆಯೂ ಚೀನದ ಸಂಸತ್‌, ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಟಿಬೆಟ್‌ನ ಗಡಿಯಲ್ಲಿ ಬ್ರಹ್ಮಪುತ್ರಾ ನದಿಗೆ ವಿವಾದಿತ ಹೈಡ್ರೋಪವರ್‌ ಯೋಜನೆಯ ಅಣೆಕಟ್ಟು ನಿರ್ಮಿಸಲು ಅನುಮೋದನೆ ನೀಡಿದೆ.

Advertisement

14ನೇ ಪಂಚವಾರ್ಷಿಕ ಯೋಜನೆ (2021-25) ಭಾಗವಾಗಿ ಜಲವಿದ್ಯುತ್‌ ಘಟಕದ ಡ್ಯಾಂ ಸೇರಿದಂತೆ ಹಲವು ಯೋಜನೆಗಳ ನೀಲನಕ್ಷೆಗೆ ಎನ್‌ಪಿಸಿಯ 2 ಸಾವಿರಕ್ಕೂ ಅಧಿಕ ಸದಸ್ಯರು, ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ನೇತೃತ್ವದಲ್ಲಿ ಅನುಮೋದನೆ ನೀಡಿದ್ದಾರೆ. 2035ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಏನಿದು ಡ್ಯಾಂ?:  ಟಿಬೆಟ್‌ನಲ್ಲಿ ಹುಟ್ಟಿ, ಭಾರತ- ಬಾಂಗ್ಲಾ ಬಳಸಿ, ಸಮುದ್ರ ಸೇರುವ ಬ್ರಹ್ಮಪುತ್ರಾ ನದಿ ಮೇಲೆ ನಿಯಂತ್ರಣ ಸಾಧಿಸಲು ಚೀನ ಡ್ಯಾಂ ಕಟ್ಟುವ ಮೂಲಕ ಪಿತೂರಿ ರೂಪಿಸಿದೆ. ಗಡಿಯಾಚೆಗಿನ ನದಿ ನೀರಿನ ಹಕ್ಕುಗಳ ಸಂರಕ್ಷಣೆ ವಿಚಾರದಲ್ಲಿ ಭಾರತ ಮತ್ತು ಬಾಂಗ್ಲಾ ಇದನ್ನು ಪ್ರಶ್ನಿಸಿದ್ದರೂ, ಚೀನ ಮಾತ್ರ “ನಮ್ಮ ಚಟುವಟಿಕೆಯಿಂದ ಬ್ರಹ್ಮಪುತ್ರಾ ಹರಿವಿನ ಪ್ರದೇಶಗಳಿಗೆ ಯಾವುದೇ ತೊಂದರೆ ಇಲ್ಲ’ ಎಂದು ಸಬೂಬು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next