Advertisement

ಬ್ರಹ್ಮಕುಂಭಾಭಿಷೇಕ; ಭಕ್ತ  ಜನ ಸಾಗರ 

10:00 AM Mar 24, 2018 | |

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇಗುಲ 2006ರಲ್ಲಿ ಪುನರ್‌ ನಿರ್ಮಿತವಾಗಿದ್ದು, ಅಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯಬೇಕಾಗಿರುವ ಅಷ್ಟಬಂಧ ಪುನಃ ನಿರ್ಮಾಣ ಹಾಗೂ ದೇವರಿಗೆ ಬ್ರಹ್ಮಕುಂಭಾಭಿಷೇಕ ಶುಕ್ರವಾರ ಮುಂಜಾನೆ 5.45ರ ಕುಂಬಲಗ್ನದ ಸುಮುಹೂರ್ತದಲ್ಲಿ ವಿಜೃಂಭಣೆಯಿಂದ ಜರಗಿತು.

Advertisement

ಮಧ್ಯಾಹ್ನ ಬ್ರಹ್ಮಕಲಶದ ಸಲುವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಹಗಲು ರಥೋತ್ಸವ ಹಾಗೂ ಪಲ್ಲಪೂಜೆಯ ಅನಂತರ ಸುಮಾರು 60 ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಮುಂಜಾನೆ 3 ಗಂಟೆಯಿಂದಲೇ ಶ್ರೀ ದೇವಿಗೆ ಸಹಸ್ರಾರು ಕಲಶಗಳ ಅಭಿಷೇಕ ಆರಂಭಗೊಂಡು ಮುಂಜಾನೆ 5.45ರ ಸುಲಗ್ನದಲ್ಲಿ ಮಹಾ ಕುಂಭಾಭಿಷೇಕವನ್ನು ದೇಗುಲದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ನೆರವೇರಿಸಿದರು. 

ಕ್ಷೇತ್ರದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರು ದೇವಸ್ಥಾನದಲ್ಲಿ ಉಪಸ್ಥಿತರಿದ್ದು, ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತರನ್ನು ಹರಸಿದರು.

ದೇವಸ್ಥಾನದ ವಠಾರ ಎಲ್ಲೆಡೆ ವಾಹನ ನಿಲುಗಡೆಯನ್ನು ಸಂಯೋಜಕರು ನಿಷೇಧಿಸಲಾಗಿದ್ದು, ಅಲ್ಲಿ ಭಕ್ತ ಜನ ಸಾಗರವೇ ಸೇರಿತ್ತು. ಸಂಜೆ ಬ್ರಹ್ಮಕಲಶ ಸಲುವಾಗಿ ನಡೆದ ಶಯನೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಚೆಂಡು ಮಲ್ಲಿಗೆ ಹೂಗಳನ್ನು ಮಾಗಣೆಯ ಭಕ್ತರಲ್ಲದೆ ಇತರ ವ್ಯಾಪ್ತಿಯಿಂದ ಆಗಮಿಸಿದ ಭಕ್ತರು ಕೂಡ ಅರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next