ವಿಟ್ಲ : ಭಕ್ತರ ಸಂದಭೋìಚಿತ ಸಹಕಾರದಿಂದ ಅವರೆಲ್ಲರ ಅಪೇಕ್ಷೆಯಂತೆಯೇ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇಗುಲ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಬ್ರಹ್ಮಕಲಶೋತ್ಸವದ ಪ್ರಧಾನ ಸಮಿತಿಗಳೊಂದಿಗೆ ಉಪ ಸಮಿತಿ ಗಳನ್ನು ರಚಿಸಿಕೊಂಡು ಪ್ರತಿಯೊಬ್ಬರ ಸಹಭಾಗಿತ್ವ ದೊಂದಿಗೆ ವಿಜೃಂಭಣೆಯಿಂದ ನಡೆಸಬೇಕು ಎಂದು ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇಗುಲದ ಗೌರವಾಧ್ಯಕ್ಷ ಪದ್ಮನಾಭ ಕೊಂಕೋಡಿ ಹೇಳಿದ್ದಾರೆ.ಅವರು ಗುರುವಾರ ದೇಗುಲದ ವಠಾರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದರು.
ಬ್ರಹ್ಮಕಲಶೋತ್ಸವದಂತಹ ಕಾರ್ಯಗಳು ಸಾಂಗವಾಗಿ ನಡೆಯುವುದರ ಜತೆಗೆ ಬ್ರಹ್ಮಕಲಶೋತ್ಸವದ ಬಳಿಕವೂ ದೇವಸ್ಥಾನ ನಿರಂತರವಾಗಿ ಬೆಳಗುತ್ತಿರಬೇಕು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಆಚಾರ್ಯ ಕೆ., ಉಮಾಮಹೇಶ್ವರ ವಿಶ್ವಸ್ತ ಮಂಡಳಿ ಅಧ್ಯಕ್ಷ ಸಂಕಪ್ಪ ಗೌಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬ್ರಹಕಲಶೋತ್ಸವ ಸಮಿತಿ ರಚಿಸಲಾಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ , ಡಾ| ಅರವಿಂದ್‌ಬೆನಕ, ಅಶೋಕ್ ಕುಮಾರ್ ರೈ, ಗೋವಿಂದ ಭಟ್ ನೆಲ್ಯಾರು, ಸುರೇಶ್ ಭಟ್ ಮುಕ್ಕುಡ, ಶೈಲಜಾ ಭಟ್ ಕೆ.ಟಿ., ವೆಂಕಟೇಶ್ವರ ಅಮೈ, ರಾಮ ಶಗ್ರಿತ್ತಾಯ, ಕುಶಾಲ ಎಂ. ಪೆರಾಜೆಯವರ ನ್ನೊಳಗೊಂಡ ಮಾರ್ಗದರ್ಶಕ ಮಂಡಳಿ ರಚಿಸಲಾಯಿತು.
ಬ್ರಹಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೃಷ್ಣಪ್ರಕಾಶ್ ಒಕ್ಕೆತ್ತೂರು, ಗೌರವಾಧ್ಯಕ್ಷರಾಗಿ ಜಲಧರ ಶೆಟ್ಟಿ ಕೆಮ್ಮಲೆ, ಉಪಾಧ್ಯಕ್ಷರಾಗಿ ಪದ್ಮನಾಭ ಗೌಡ ಮಂಜಿಲಾಡಿ, ರಾಘವ ಗೌಡ ಅಡ್ಡಾಳಿ, ಕೆ.ಎಸ್.ಸಂಕಪ್ಪ ಗೌಡ ಕೈಂತಿಲ, ರಾಮಣ್ಣ ಪೂಜಾರಿ ಮಚ್ಚ, ಡೊಂಬಯ್ಯ ಗೌಡ ಪೊಯೆÂ, ಸೇಸಪ್ಪ ಆಚಾರ್ಯ ಕೈಂತಿಲ, ಪೂವಪ್ಪ ಮೂಲ್ಯ ಇರಂದೂರು, ಮೋನಪ್ಪ ಗೌಡ ರಾಯರಬೆಟ್ಟು, ಸೋಮಪ್ಪ ಸುರುಳಿಮೂಲೆ, ಕೃಷ್ಣಪ್ಪ ಗೌಡ ಕಾಮಟ, ಶೀನಪ್ಪ ಗೌಡ ಮಾಡ್ತೇಲು, ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಅಶೋಕ್ ಪೂಜಾರಿ ನೆಕ್ಕಿಲಾರು, ಪ್ರಧಾನ ಸಂಚಾಲಕರಾಗಿ ವೀರಪ್ಪ ಗೌಡ ರಾಯರಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಡಿವಾಳ ಮಾಮೇಶ್ವರ, ಜತೆ ಕಾರ್ಯದರ್ಶಿಯಾಗಿ ಸಿ.ಕೆ.ಗೌಡ ಇರಂದೂರು, ನಾರಾಯಣ ಮಾಮೇಶ್ವರ, ಲೋಕೇಶ ಅಡ್ಡಾಳಿ, ಕೃಷ್ಣಪ್ಪ ಸುರುಳಿಮೂಲೆ, ಪ್ರಧಾನ ಕೋಶಾಧಿಕಾರಿಯಾಗಿ ಸಂಜೀವ ಪೂಜಾರಿ ನಿಡ್ಯ ಕೈಂತಿಲ, ಜತೆ ಕೋಶಾಧಿಕಾರಿ ಪುರಂದರ ಮೂಲ್ಯ ಜಗದೀಶ್ಚಂದ್ರ ನಾೖತ್ತೋಟು ಅವರನ್ನು ಆಯ್ಕೆ ಮಾಡಲಾಯಿತು.ಸಂಜೀವ ಪೂಜಾರಿ ನಿಡ್ಯ ಸ್ವಾಗತಿಸಿದರು. ವೀರಪ್ಪ ಗೌಡ ರಾಯರಬೆಟ್ಟು ವಂದಿಸಿದರು. ದಿನೇಶ್ ಮಡಿವಾಳ ಮಾಮೇಶ್ವರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.