Advertisement

ಸುರಗಿರಿ : ಎ. 23-ಮೇ 5: ಅಷ್ಟಬಂಧ ಬ್ರಹ್ಮಕಲಶೋತ್ಸವ

12:30 AM Apr 27, 2017 | Karthik A |

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್‌ ಕಿಲೆಂಜೂರು ಗ್ರಾಮದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ವರ್ಷಾವಧಿ ಮಹೋತ್ಸವ ಎ. 23ರಿಂದ ಮೇ 5ರ ತನಕ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎ. 26ರಂದು ಬೆಳಗ್ಗೆ 8ರಿಂದ ತೋರಣ ಮೂಹೂರ್ತ, ಉಗ್ರಾಣ, ಮೂಹೂರ್ತ, ಸಂಜೆ 7.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಎ. 29ರಂದು ಬೆಳಗ್ಗೆ 5 ಗಂಟೆಗೆ, ಗಣಪತಿ ದೇವರ ಬಿಂಬ ಪ್ರತಿಷ್ಠಾಪನೆ, ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಲೇಪನ, ಮೃತ್ಯುಂಜಯ ಹೋಮ, 108 ತೆಂಗಿನಕಾಯಿ ಗಣಪತಿ ಯಾಗ, ವಿಶೇಷ ಶಾಂತಿ ಹೋಮ ನಡೆಯಲಿದೆ.

Advertisement

ಎ. 30ರಂದು ಬೆಳಿಗ್ಗೆ ಮಹಾ ಗಣಪತಿ ದೇವರಿಗೆ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ನಾಗ ಪ್ರತಿಷ್ಠೆ, ನಾಗದೇವರಿಗೆ ಕಲಶಾಭಿಷೇಕ, ಆಶ್ಲೇಷಾ ಬಲಿ, ಅಣ್ಣಪ್ಪ ಪಂಜುರ್ಲಿ ಪ್ರತಿಷ್ಠೆ, ಕಲಾಶಾಭಿಷೇಕ, ರಾತ್ರಿ 9 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಮೇ 1ರಂದು ಬೆಳಗ್ಗೆ 9.10ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ 504 ಪರಿಕಲಶ ಸಹಿತ ಬ್ರಹ್ಮಕಲಶೋತ್ಸವ ನಡೆಯಲಿದೆ. ಪ್ರತೀ ದಿನ ವಿವಿಧ ಭಜನ ಮಂಡಳಿಯಿಂದ ಭಜನಾ ಸೇವೆ, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅರ್ಚಕ ವಿಶ್ವೇಶ್ವರ ಭಟ್‌, ಮೊಕ್ತೇಸರರಾದ ವೈ. ಬಾಲಚಂದ್ರ ಭಟ್‌, ಕೆ. ಧನಂಜಯ ಶೆಟ್ಟಿಗಾರ್‌ ಸಾಗರಿಕಾ, ಕಾರ್ಯಾಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ಪ್ರಧಾನ ಕಾರ್ಯದರ್ಶಿ ಕೆ. ಲವ ಶೆಟ್ಟಿ ಕೆಮ್ರಾಲ್‌, ಪ್ರಧಾನ ಕೋಶಾಧಿಕಾರಿ ರಮಾನಾಥ ಎನ್‌. ಶೆಟ್ಟಿ ಅಮಿತಾ ನಿವಾಸ, ಕೆಮ್ರಾಲ್‌, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್‌ ಶೆಟ್ಟಿ ಅತ್ತೂರು ಉಪಸ್ಥಿತರಿದ್ದರು.


4 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ

ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ ದುರ್ಗಾದಯಾ ಮಾತನಾಡಿ, ದೇವಳದಲ್ಲಿ ಬ್ರಹ್ಮಕಲಶದ ನಿಮಿತ್ತ ಮಹಾಗಣಪತಿ ದೇವರ ಶಿಲಾಮಯ ಗರ್ಭಗುಡಿ, ಶಿಲಾಮಯತೀರ್ಥ ಮಂಟಪ, ದೇಗುಲದ ಮುಂಭಾಗದಲ್ಲಿ ಅಣ್ಣಪ್ಪ ಪಂಜುರ್ಲಿಯ ದೈವಸ್ಥಾನ, ನೂತನ ಪುಷ್ಕರಿಣಿ, ನಾಗದೇವರ ಸನ್ನಿಧಿ, ದೇವಾಲಯದ ಒಳಾಂಗಣದ ಮೇಲ್ಛಾವಣಿ, ಹಾಗೂ ಶಿಲ್ಪಕಲೆಗಳಿಂದ ಒಳಗೊಂಡ ಕೆಲಸ ಕಾರ್ಯಗಳು ಸುಮಾರು 4 ಕೊ.ರೂ. ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಡೆಯುತ್ತಿದ್ದು ಮುಕ್ತಾಯ ಹಂತದಲ್ಲಿದೆ.


►Special Photo Gallery►ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ: //bit.ly/2oxnqlD

Advertisement

Udayavani is now on Telegram. Click here to join our channel and stay updated with the latest news.

Next