Advertisement

ಫೆ. 18-25: ಕುಡುಪು ದೇಗುಲದಲ್ಲಿ  ಬ್ರಹ್ಮಕಲಶೋತ್ಸವ

12:13 PM Feb 04, 2018 | |

ಮಂಗಳೂರು: ದ. ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ. 18ರಿಂದ ಫೆ. 25ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ವಾಸ್ತು ತಜ್ಞ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ. ಕೃಷ್ಣರಾಜ ತಂತ್ರಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 25 ರಂದು ಬೆಳಗ್ಗೆ 6.45ರಿಂದ 7.45ರ ವರೆಗೆ ಶ್ರೀ ಅನಂತ ಪದ್ಮನಾಭ ದೇವರಿಗೆ ವೈಭವದ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮೋದಿಸಲ್ಪಟ್ಟ 21 ಜನರ ಜೀರ್ಣೋದ್ಧಾರ ಸಮಿತಿ ಅಸ್ತಿತ್ವದಲ್ಲಿದೆ. ಈಗಾಗಲೇ 1.75 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿಲಾಮಯ, ದಾರು ಶಿಲ್ಪ ಸಹಿತವಾದ ಚತುರಶ್ರಾಕಾರದ ನೂತನ ಗರ್ಭಗುಡಿ ದೇವರಿಗೆ ಅರ್ಪಣೆಗೊಂಡಿದ್ದು, ಇದು ರಾಜ್ಯದಲ್ಲಿಯೇ ಅತ್ಯಂತ ಅಪರೂಪದ್ದು ಎಂದರು.

ಸುಮಾರು 65 ಲ.ರೂ. ವೆಚ್ಚದಲ್ಲಿ ಅನನ್ಯವಾದ ಭೂಪುರ ಆಕೃತಿಯ ಭದ್ರಾ ಸರಸ್ವತಿ ತೀರ್ಥ ಪುಷ್ಕರಿಣಿ ನಿರ್ಮಾಣ ಗೊಂಡಿದೆ. 60 ಲ.ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದ ಶಿಲಾ ಅಧಿಷ್ಠಾನ, ಕೆಂಪು ಕಲ್ಲಿನ ಗೋಡೆ ಹಾಗೂ ಹಿತ್ತಾಳೆಯ ಮುಚ್ಚಿಗೆ ಇರುವ ನೂತನ ದೈವಸ್ಥಾನ ರಚನೆಯಾಗಿದೆ.

ತಿರುವಾಂಕೂರು ಶೈಲಿ ಗೋಪುರ
4 ಕೋ. ರೂ. ವೆಚ್ಚದ ನೂತನ ಶಿಲಾ ಅಧಿಷ್ಠಾನ, ವಿಶೇಷ ಕೆತ್ತನೆಯ ಕೆಂಪು ಕಲ್ಲಿನ ಗೋಡೆ ಹಾಗೂ ನಾಲ್ಕು ಸುತ್ತಲೂ ತಾಮ್ರದ ಮುಚ್ಚಿಗೆ ಇರುವ ಸುತ್ತುಪೌಳಿ, ತಿರುವಾಂಕೂರು ಶೈಲಿಯ ಕುದುರೆ ಮಾಳಿಗೆಯಿರುವ ಗೋಪುರ ಸಹಿತ ದೇವಾಲಯವು ಅತಿ ವಿಶಿಷ್ಟ ಹಾಗೂ ಅಪರೂಪದ ರಚನೆ ಯಾಗಿ ಕಂಗೊಳಿಸಲಿದೆ. 65 ಲ.ರೂ. ವೆಚ್ಚದಲ್ಲಿ ಪೂರ್ವ ದಿಕ್ಕಿನ ಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದಲ್ಲದೆ ಸುಮಾರು 1.35 ಕೋ.ರೂ. ವೆಚ್ಚದ ಇತರ ಕಾಮ ಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಮುಂದಿನ ಯೋಜನೆಯಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಉತ್ತರ ದಿಕ್ಕಿನ ಗೋಪುರ ನಿರ್ಮಾಣ ಹಾಗೂ ನಾಗಬನ ನವೀಕರಣ ಜರಗಲಿದೆ ಎಂದು ಅವರು ವಿವರ ನೀಡಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯ ಲಿದ್ದು, ಹೊರೆಕಾಣಿಕೆಯು ಸುಮಾರು 4 ಕೇಂದ್ರ ಸ್ಥಾನಗಳಿಂದ ಹಾಗೂ 30 ಉಪಕೇಂದ್ರ ಗಳಿಂದ ಫೆ. 18, ಫೆ. 20, ಫೆ. 22ರಂದು ದೇವರಿಗೆ ಸಮರ್ಪಣೆ ಗೊಳ್ಳಲಿದೆ ಎಂದು ಅವರು ಹೇಳಿದರು.

ಪಾರ್ಕಿಂಗ್‌ ವ್ಯವಸ್ಥೆ 
ಸಮಿತಿಯ ಸಂಘಟನ ಕಾರ್ಯದರ್ಶಿ ವಾಸುದೇವ ರಾವ್‌ ಕುಡುಪು ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಮಂಗಳೂರಿನಿಂದ ಬರುವ ಭಕ್ತರಿಗೆ ದೇವಸ್ಥಾನ ಬಳಿಯ ಸೇತುವೆ ಸಮೀಪದ ಎನ್‌ಎಂಪಿಟಿ ಖಾಲಿ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ವಾಮಂಜೂರು ಮಾರ್ಗವಾಗಿ ಬರುವವರಿಗೆ ಮಂಗಳಜ್ಯೋತಿ ಶಾಲೆ ಬಳಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ, ಮೊಕ್ತೇಸರ ಭಾಸ್ಕರ ಕೆ., ಅಧ್ಯಕ್ಷ ಕೆ. ಸುದರ್ಶನ ಕುಡುಪು, ಪ್ರಧಾನ ಕಾರ್ಯದರ್ಶಿ ಕೆ. ಸುಜನ್‌ದಾಸ್‌ ಕುಡುಪು, ಅನ್ನ ಸಂತರ್ಪಣ ಸಮಿತಿಯ ಪ್ರಧಾನ ಸಂಚಾಲಕ ಶೆಡ್ಡೆ ಮಂಜುನಾಥ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಆನುವಂಶಿಕ ಮೊಕ್ತೇಸರ ಕೆ. ಬಾಲಕೃಷ್ಣ ಕಾರಂತ, ಪ್ರಭಾಕರ ಭಟ್‌, ಮಾಧ್ಯಮ ಸಮಿತಿಯ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next