ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನ
ಬಂಟ್ವಾಳ : ಅರ್ಕುಳ ಶ್ರೀ ಉಳ್ಳಾಕ್ಳು ಮಗೃಂತಾಯಿ ಧರ್ಮದೇವತೆಗಳ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ , ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾಣದ ಜಾತ್ರೆಯು ಫೆ. 26 ರಿಂದ ಮಾ. 4ರ ವರೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಅರ್ಕುಳ ಬೀಡಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಫೆ. 26ರಂದು ಬೆಳಗ್ಗೆ ಮಕರ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು ನಡೆಯಲಿದೆ. ಫೆ. 27 ರಂದು ಅಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ದೈವಸ್ಥಾನಕ್ಕೆ ಆಗಮಿಸಲಿದೆ. ಮಾ. 2ರಂದು ನೂತನ ಧ್ವಜ ಪ್ರತಿಷ್ಠೆ, ಧ್ವಜಾರೋಹಣವಾಗಿ ಬ್ರಹ್ಮಕಲಾಶಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಜಿಲ ಗುತ್ತು ರಾಮ್‌ದಾಸ್ ಕೋಟ್ಯಾನ್ ಅವರಿಂದ ನೂತನ ಶಿಲಾ ದೀಪಸ್ತಂಭಗಳ ಸಮರ್ಪಣೆ ಹಾಗೂ ರಾತ್ರಿ ಕಂಚಿಲು ಸೇವೆ ನಡೆಯಲಿದೆ.
ಮಾ. 3ರಂದು ಪೂರ್ವಾಹ್ನ ದೈವಸ್ಥಾನದಲ್ಲಿ ಮಡಸ್ತಾನ ಸೇವೆ, ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ , ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಾಣದಲ್ಲಿ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆ, ರಾತ್ರಿ ಶ್ರೀ ಉಳ್ಳಾಕ್ಳು ಧರ್ಮ ದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ. ಮಾ. 4 ರಂದು ಬೆಳಗ್ಗೆ ಚಂಡಿಕಾಯಾಗ, ಅನ್ನಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತಿ ದೇವಿಗೆ ಲಕ್ಷ ಪುಷ್ಪಾರ್ಚನೆ ಪೂಜೆ, ರಾತ್ರಿ ಶ್ರೀ ಮಗೃಂತಾಯಿ ಧರ್ಮದೈವದ ನೇಮ ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿವೆ ಎಂದವರು ತಿಳಿಸಿದರು.
ಅರ್ಕುಳ ಬೀಡು ರತ್ನರಾಜ ಶೆಟ್ಟಿ, ಅರ್ಕುಳ ಗೋವಿಂದ ಶೆಣೈ, ಅರ್ಕುಳ ಕಂಪ ಸದಾನಂದ ಆಳ್ವ, ಡಾ| ಎ.ಜಯಕುಮಾರ ಶೆಟ್ಟಿ , ಡಾ| ಅಶ್ವಿನಿ ಕುಮಾರ್ ತುಪ್ಪೆಕಲ್ಲು ,ಉಮೇಶ ಸೇಮಿತ ಮಂಟಮೆ, ಜಯರಾಮ ಕರ್ಕೇರಾ, ಕುಂಪಣ ಮಜಲು ಲಕ್ಷ್ಮಣ ಕುಮಾರ್, ಮನೋಹರ್, ಅರ್ಕುಳ ರಮೇಶ , ಗ್ರಾ.ಪಂ.ಸದಸ್ಯ ಸಂತೋಷ್, ಮಂಟಮೆ ದಿನಕರ್ ಕರ್ಕೇರಾ , ಅರ್ಕುಳ ಬೀಡು ಅಜಿತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.