Advertisement

ಬ್ರಹ್ಮಗಿರಿ: ಅಪಾಯಕಾರಿ ಸ್ಥಿತಿಯಲ್ಲಿ ಬೃಹತ್‌ಗಾತ್ರದ ಮರ

09:34 PM Aug 19, 2019 | Sriram |

ಉಡುಪಿ: ಬ್ರಹ್ಮಗಿರಿ ಆಟೋರಿಕ್ಷಾ ನಿಲ್ದಾಣದ ಬಳಿ ಇರುವ ಬೃಹತ್‌ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಮರದ ಸುತ್ತ ಅಳವಡಿಸಲಾದ ಸಿಮೆಂಟ್‌ ಕಟ್ಟೆ ಬಿರುಕು ಬಿಟ್ಟಿವೆ. ಮರದ ತಳಪಾಯ ದುರ್ಬಲ ಇರುವಂತೆ ಗೋಚರಿಸುತ್ತಿದೆ. ಸಮೀಪದಲ್ಲೇ ರಿಕ್ಷಾ ನಿಲ್ದಾಣವಿದೆ. ಗಾಳಿ, ಮಳೆ ಬರುವ ಸಂದರ್ಭದಲ್ಲಿ ಇತ್ತ ನಡೆದಾಡುಕೊಂಡು ಹೋಗಲು ಕೂಡ ಹಿಂಜರಿಕೆಯಾಗುತ್ತದೆ.

Advertisement

ಮಸೀದಿ,ಸರಕಾರಿ ಕಚೇರಿಗಳು ಈ ಭಾಗದಲ್ಲಿರುವುದರಿಂದ ದಿನನಿತ್ಯ ಹಲವಾರು ಮಂದಿ ಈ ಭಾಗದಲ್ಲಿ ಓಡಾಟ ನಡೆಸುತ್ತಾರೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಇಕ್ಬಾಲ್‌ ಮನ್ನಾ ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next