ಕುಂಬಳೆ: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ತ್ತಾಯ ವಿಷ್ಣು ಅಸ್ರರವರ ನೇತೃತ್ವ ದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆರಂಭಗೊಂಡಿತು .
ಮಾ. 4ರಂದು ಸಂಜೆ ಕೋಟೆಕುಂಜ ಮೂಲಸ್ಥಾನದಿಂದ ನೂತನ ಪ್ರತಿಷ್ಠಾ ಬಿಂಬಗಳು ಮತ್ತು ಹಸುರು ಹೊರೆ ಕಾಣಿಕೆಯನ್ನು ವಾದ್ಯಘೋಷದೊಂದಿಗೆ ಮೆರವಣಿಗೆ ಮೂಲಕ ಭಕ್ತರು ಶ್ರೀ ಕ್ಷೇತ್ರಕ್ಕೆ ತಂದೊಪ್ಪಿಸಿದರು. ಬಳಿಕ ತಂತ್ರಿವರ್ಯರಿಗೆ ಹಾಗೂ ವೈದಿಕರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.ಉಗ್ರಾಣ ಮುಹೂರ್ತದ ಬಳಿಕ ವಿವಿಧ ವೈದಿಕ ಕಾರ್ಯಕ್ರಮ ಆರಂಭಗೊಂಡಿತು.
ಸಂಜೆ ಜರಗಿದ ಧಾರ್ಮಿಕ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಪಾದಂಗಳವರು ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದ ಪೂಜ್ಯರು ಹಿಂದೂ ಧರ್ಮದ ಸಂಸ್ಕೃತಿಯ ತಾಣಗಳಾದ ಕ್ಷೇತ್ರಗಳ ಜೀರ್ಣೋದ್ಧಾರ ಅನಿವಾರ್ಯ. ಧಾರ್ಮಿಕ ಮಂದಿರಗಳ ಪುನರುತ್ಥಾನದಿಂದ ದೈವದೇವರುಗಳು ಭಕ್ತರನ್ನು ಪೊರೆಯುವರು ಮತ್ತು ಭಕ್ತರನ್ನು ದಾರಿ ತಪ್ಪದಂತೆ ತಡೆಯು ವರೆಂದರು. ಸಮಾರಂಭದ ಅಧ್ಯಕ್ಷತೆ ಯನ್ನು ಹುಡ್ಕೊàದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಸಲಹಾ ಮಂಡಳಿ ಸದಸ್ಯ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು ವಹಿಸಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ಉಪಸ್ಥಿತರಿದ್ದು ಮಾತನಾಡಿ ಕುಂಬಳೆ ಸೀಮೆ ಸತ್ಯದ ನಾಡೆಂದು ಖ್ಯಾತಿವೆತ್ತಲು ದೈವಗಳು ಕಾರಣವಾಗಿದ್ದು ಭಕ್ತರ ಅಭೀಷ್ಠೆಯನ್ನು ಪೂರೈಸಲು ದೈವಗಳು ಘಟ್ಟದಿಂದ ಇಳಿದು ಬಂದಿರುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಎಚ್.ಎಫ್.ಎಲ್ ಮುಂಬಯಿಯ ಸಲಹೆಗಾರ ಬಿ.ಕೆ ಮಧೂರು ಅವರು ಭಾಗವಹಿಸಿದರು. ಕ್ಯಾಂಪೊRà ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೆ„ಲು ನಾರಾಯಣ ಹೆಗ್ಡೆ, ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಹಾಗೂ ಹರಿಜಾಲ್ ಶ್ರೀ ಮಹಾ ವಿಷ್ಣು ಕ್ಷೇತ್ರ ಆಡಳಿತ ಮೊಕ್ತೇಸರ ಪದ್ಮನಾಭನ್, ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರ ದೇಶಮಂಗಲ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಮಠ, ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸ್ತು ಶಿಲ್ಪಿ ರಮೇಶ ಕಾರಂತ, ಬೆದ್ರಡ್ಕ, ಶ್ರೀ ಕ್ಷೇತ್ರದ ಮೊಕ್ತೇಸರರಾದ ಅನಂತ ವಿಷ್ಣು ಹೇರಳ ಉಡುವ, ಸೀತಾರಾಮ ಬಲ್ಲಾಳ್ ಚಿಪ್ಪಾರು, ಶೀನ ಶೆಟ್ಟಿ ಪಂಜದಗುತ್ತು ಸಮಾರಂಭದಲ್ಲಿ ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಎಡನೀರು ಮಠಾಧೀಶರಿಂದ ದೇವ ಭಾವ ಗೀತೆ, ಸಂಗೀತ ರಸಸಂಜೆ ಮತ್ತು ಸನಾತನ ಬಾಲಗೋಕುಲ ಬೆದ್ರಡ್ಕ ಹಾಗೂ ಶಂಕರನಾರಾಯಣ ಕುಟ್ಟಿಚಾತ ಬಾಲಗೋಕುಲ ದೇಶಮಂಗಲ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಮಂಜುನಾಥ ರೈ ಕೋಟೆಕುಂಜ ಪ್ರಸ್ತಾವನೈಗೈದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಳ್ವಕೋಟೆಕುಂಜ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಶೆಟ್ಟಿ ವಂದಿಸಿದರು. ಲೋಕೇಶ್ ಎಂ.ಬಿ. ಕಂಬಾರ್ ನಿರೂಪಿಸಿದರು.
ರವಿವಾರ ಬೆಳಗ್ಗೆ ವಿವಿಧ ತಂಡಗಳಿಂದ ಭಜನೆ, ಅಪರಾಹ್ನ ಶೇಣಿ ಯಕ್ಷಜಂಗಮ ನೇತ್ರ್ತ್ವದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ಧಾರ್ಮಿಕ ಸಭೆ ನಡೆಯಿತು.
ರಾತ್ರಿ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಮಹಿಳಾ ವೇದಿಕೆ ಇವರಿಂದ ತಿರುವಾದಿರ ನೃತ್ಯ ಕಾರ್ಯಕ್ರಮ, ಶ್ರಿರಾಮ ಯಕ್ಷಗಾನ ಕಲಾ ಸಂಘ ಬೆದ್ರಡ್ಕ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಡೆಯಿತು.
ಮಾ.6ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಶ್ರೀ ಸನಾತನ ಬಾಲಗೋಕುಲ ಬೆದ್ರಡ್ಕ, ಶ್ರೀ ಅಯ್ಯಪ್ಪ ಭಜನ ಸಂಘ ಬೆದ್ರಡ್ಕ, ಶ್ರೀಕೃಷ್ಣ ಭಜನಾ ಸಂಘ ಪಂಜದ ಗುಡ್ಡೆ ಇವರಿಂದ ಭಜನ ಸಂಕೀರ್ತನೆ, ಅಪರಾಹ್ನ ಗಂಟೆ 2ಕ್ಕೆ ಸುಧಾಕರ ಕೋಟೆಕುಂಜತ್ತಾಯರು ಗುಡ್ಡೆ ದೇವಸ್ಥಾನ ಇವರಿಂದ ಹರಿಕಥೆ, ಸಂಜೆ ಗಂಟೆ 7ರಿಂದ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ ಕಾರಂತ ಬೆದ್ರಡ್ಕ ವಹಿಸುವರು.
ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಧಾರ್ಮಿಕ ಭಾಷಣ ಮಾಡಲಿರುವರು. ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನಶೆಟ್ಟಿ ಕಜೆ, ಯು. ಶಂಕರ ಗಟ್ಟಿ ಹೊಸಮನೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಮಹಿಳಾ ವೇದಿಕೆ ಇವರಿಂದ ತಿರುವಾದಿರ ನೃತ್ಯ ಕಾರ್ಯಕ್ರಮ, ಶ್ರೀರಾಮ ಯಕ್ಷಗಾನ ಕಲಾ ಸಂಘ ಬೆದ್ರಡ್ಕ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಮಾಯಾ ತಿಲೋತ್ತಮೆ ಸತ್ವ ಪರೀಕ್ಷೆ ಎಂಬ ಯಕ್ಷಗಾನ ಬಯಲಾಟ ಜರಗಲಿದೆ.